ಜಯಂತ್ಯೋತ್ಸವ ಸಮಿತಿಯ ಪದಾದಿಕಾರಿಗಳ ಸನ್ಮಾನ ಸಮಾರಂಭ |

ಜಯಂತ್ಯೋತ್ಸವ ಸಮಿತಿಯ ಪದಾದಿಕಾರಿಗಳ ಸನ್ಮಾನ ಸಮಾರಂಭ |

ಜಯಂತ್ಯೋತ್ಸವ ಸಮಿತಿಯ ಪದಾದಿಕಾರಿಗಳ ಸನ್ಮಾನ ಸಮಾರಂಭ |

ನಾಗರಾಜ್ ದಂಡಾವತಿ ವರದಿ ಶಹಾಬಾದ ; - ಡಾ. ಬಿ.ಆರ ಅಂಬೇಡ್ಕರ್ ಮತ್ತು ಡಾ. ಜಗಜೀವನರಾಂ ಅವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ತತ್ವಗಳು ನಮ್ಮ ದೇಶದ ಅಡಿಪಾಯ. ಮುಸ್ಲಿಂ ಸಮುದಾಯವು ದಲಿತ ನಾಯಕರ ಜಯಂತಿ ಆಚರಿಸುವವರನ್ನು ಸನ್ಮಾನಿಸುವುದು ಈ ಭ್ರಾತೃತ್ವದ ಜೀವಂತ ಉದಾಹರಣೆಯಾಗಿದೆ ಎಂದು ಕದಸಂಸ ರಾಜ್ಯ ಸಂ ಸಂಚಾಲಕ ಸುರೇಶ ಮೆಂಗನ ರವರು ಹೇಳಿದರು.

ಅವರು ಶಹಾಬಾದ ಮುಸ್ಲಿಂ ಧರ್ಮದ ಜಾಮೀಯಾ ಮಸೀದ್ ಕಮಿಟಿಯ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಜಾಮೀಯಾ ಮಸ್ಜಿದ್ ಕಮಿಟಿ ಅಧ್ಯಕ್ಷ ಮತೀನ ಪಟೇಲ,ಡಾ.ಅಂಬೇಡ್ಕರ್ ರವರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ ಯಂಗುಂಟಿಕರ, ಡಾ.ಬಾಬು ಜಗಜೀವನರಾಂ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಡಿ.ಡಿ ಓಣಿ ಮಾತನಾಡಿದರು.

ಸೌಹಾರ್ದ ಸಹೋದರತ್ವ ಕೂಟದಲ್ಲಿಮೋಹ್ಮದ ಅಲಿ ಅಪ್ಸರ್, ಫಾರೂಕ್ ನ್ಯಾಷನಲ್, ನೂರ ಪಟೇಲ, ರಫೀಕ ಭಾಗಬಾನ, ಜಹೀರ ಅಹ್ಮದ ಪಟವೇಗಾರ, ಮಹ್ಮದ ಮಸ್ತಾನ, ಫಯಾಜ್ ಪಟೇಲ, ಡಾ.ಅಂಬೇಡ್ಕರ್ ಮತ್ತು, ಡಾ. ಜಗಜೀವನರಾಂ ಜಯಂತ್ಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಸಾಕ್ರೆ, ರವೀಂದ್ರ ಬೆಳಮಗಿ, ಗೌರವಾಧ್ಯಕ್ಷರಾದ ಶರಣು ಪಗಲಪುರ, ವಸಂತ ಕಾಂಬಳೆ, ಬಾಬು ಪೋತರಾಜ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.