ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಶರಣಗೌಡ ಪಾಟೀಲ್ ಪಾಳಾ ಅವರಿಗೆ ಗೌರವ ಸನ್ಮಾನ

ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಶರಣಗೌಡ ಪಾಟೀಲ್ ಪಾಳಾ ಅವರಿಗೆ ಗೌರವ ಸನ್ಮಾನ

ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಶರಣಗೌಡ ಪಾಟೀಲ್ ಪಾಳಾ ಅವರಿಗೆ ಗೌರವ ಸನ್ಮಾನ

ಕಲಬುರ್ಗಿ: ಕರ್ನಾಟಕ ನಾಟಕ ಅಕಾಡೆಮಿಯ ಕಲಬುರ್ಗಿ ಜಿಲ್ಲಾ ಸಂಚಾಲಕರಾಗಿ ನೇಮಕಗೊಂಡಿರುವ ಶರಣಗೌಡ ಪಾಟೀಲ್ ಪಾಳಾ ಅವರಿಗೆ ನಗರದ ಇಂಟರ್ನ್ಯಾಷನಲ್ ಕಾಂಪ್ಲೆಕ್ಸ್‌ನಲ್ಲಿ ಸಮಗ್ರ ಅಭಿವೃದ್ಧಿ ಸಂಸ್ಥೆ, ನಿಸರ್ಗ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ನೇಹಿತರ ಬಳಗದ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ವಕೀಲರಾದ ಮಲ್ಲಿಕಾರ್ಜುನ ಕಲ್ಲಬೇನೂರ ಮಾತನಾಡಿ,"ಸಾಹಿತ್ಯ, ಸಂಸ್ಕೃತಿ ಮತ್ತು ವಿವಿಧ ಸಂಘಟನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶರಣಗೌಡ ಪಾಟೀಲ್ ಪಾಳಾ ಅವರು ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಅವರ ಇಂತಹ ನಿರಂತರ ಸೇವೆ ಸಮಾಜದ ಏಳಿಗೆಗೆ ಅತ್ಯಗತ್ಯವಾಗಿದೆ," ಎಂದು ಆಶಿಸಿದರು.

ಕಸಾಪ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ಮಾತನಾಡಿ,"ಈ ಭಾಗದ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಕ್ಷೇತ್ರಗಳು ಮತ್ತಷ್ಟು ಬೆಳೆಯಬೇಕಾದರೆ ಶರಣಗೌಡ ಪಾಟೀಲ ಪಾಳಾ ಅವರಂತಹ ಉತ್ಸಾಹಿಗಳು ನಿರಂತರ ಸೇವೆಯ ಅಗತ್ಯವಿದೆ. ಅಕಾಡೆಮಿಯ ಜಿಲ್ಲಾ ಸಂಚಾಲಕರಾಗಿ ಅವರು ಈ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲಿದ್ದಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಗಿರೀಶಗೌಡ ಇನಾಮದಾರ, ನಾಗರಾಜ ಬಿರಾದಾರ, ಅರವಿಂದಕುಮಾರ ಠಾಕೂರ್, ನಾಗಮೂರ್ತಿ ಪರೀಟ 

 ಧೂಳಪ್ಪ ದ್ಯಾಮನಕರ್, ಶೈಲೇಂದ್ರ ಲಾಡೆ, ಕುಸುಮಾಕರ ಮಾಗಾವಿ, ವಿಜಯಕಾಂತ ರಾಗಿ, ಮುತ್ತಪ್ಪ ಪೂಜಾರಿ, ಅಶೋಕ ಕಾಳೆ, ಸಾಹಿತ್ಯಾಸಕ್ತರು ಹಾಗೂ ಪಾಟೀಲ್ ಅವರ ಅಪಾರ ಸ್ನೇಹಿತರ ಬಳಗದವರು ಉಪಸ್ಥಿತರಿದ್ದು,