ಭಾರತ ಕಮ್ಯೂನಿಸ್ಟ್ ಪಕ್ಷದ ಲೋಗೋ ಬಿಡುಗಡೆ
ಭಾರತ ಕಮ್ಯೂನಿಸ್ಟ್ ಪಕ್ಷದ ಲೋಗೋ ಬಿಡುಗಡೆ
ಕಲಬುರಗಿ: ಭಾರತ ಕಮ್ಯೂನಿಸ್ಟ್ ಪಕ್ಷ ( ಮಾರ್ಕ್ಸ್ ವಾದಿ) ಯು ದಿನಾಂಕ 24, 25 ನೇ ನವ್ಹೆಂಬರ್ 2024 ರಂದು, ಕಲಬುರಗಿಯಲ್ಲಿ ನಡೆಯಲಿರುವ ತನ್ನ 24 ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಇಂದು ದಿನಾಂಕ 20-11-24 ರಂದು ಪಕ್ಷದ ಕಚೇರಿಯಲ್ಲಿ ತನ್ನ ಲೋಗೋ ಬಿಡುಗಡೆ ಮಾಡಿತು.
ಕಮ್ಯೂನಿಸ್ಟ್ ಪಕ್ಷಕ್ಕೆ ಜಗತ್ತಿನಾದ್ಯಂತ ಸುದೀರ್ಘ ಇತಿಹಾಸವಿದೆ. ಕಾಯಕ ಜೀವಿಗಳ ಸಮಗ್ರ ಅಭಿವೃದ್ಧಿ ತನ್ಮೂಲಕ ಇಡೀ ಮಾನವ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಇದು ಸೈದ್ಧಾಂತಿಕ ಬದ್ಧತೆಯಿಂದ ಮುಂದುವರೆಯುತ್ತಿದೆ. ಇಂದು ವಿಶ್ವದಾದ್ಯಂತ ದುಡಿಯುವ ಜನರ ಪರವಾದ ಕಾಯ್ದೆ ಕಾನೂನುಗಳು ಪಾಸಾಗಿದ್ದರೆ ಅದಕ್ಕೆ ಕಾರಣ ಜಗತ್ತಿನ ತುಂಬ ಬೇರೆ ಬೇರೆ ಹೆಸರಿನಿಂದ ಹರಡಿಕೊಂಡಿರುವ ಕಮ್ಯೂನಿಸ್ಟ್ ಪಕ್ಷಗಳೆ ಆಗಿವೆ ಎಂದು ಲೋಗೋ ಬಿಡುಗಡೆ ಮಾಡಿದ ಕಲಬುರಗಿ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ ಕೆ ನೀಲಾ ಹೇಳಿದರು.
ಇದೇ ದಿನಾಂಕ 24 ರಂದು ಮುಂಜಾನೆ 11 ಗಂಟೆಯಿAದ ನಗರೇಶ್ವರ ಶಾಲೆಯಿಂದ ಮೆರವಣಿಗೆ ಹೊರಟು ಜಗತ್ ವೃತ್ತದಲ್ಲಿ ಸಮಾವೇಶಗೊಂಡು ಅಲ್ಲಿಯೆ ಬಹಿರಂಗ ಸಭೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪಕ್ಷದ ಕೇಂದ್ರ ಸಮಿತಿ ಸದಸ್ಯರಾದ ಕಾಂ ರಾಘವಲು ಮತ್ತು ರಾಜ್ಯ ಸಿ ಆಯ್ ಟಿ ಯು ಮುಖಂಡರಾದ ಕಾಂ ವರಲಕ್ಷ್ಮೀ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮೊಹಮ್ಮದ ಹಸನ್ ಖಾನ್ ಸ್ಮಾರಕ ಭವನದಲ್ಲಿ ಎರಡು ದಿನಗಳವರೆಗೆ ಪ್ರತಿನಿಧಿ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ ಎಂ ಬಿ ಸಜ್ಜನ, ಕಾಂ ಶರಣಬಸವ ಮಮಶೆಟ್ಟಿ, ಕಾಂ ಪಾಂಡುರAಗ ಮಾವಿನಕರ್, ಯುವಜನ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಕಾಂ ಲವಿತ್ರ, ಭಾರತ ವಿದ್ಯಾರ್ಥಿ ಸಂಘಟನೆಯ ರಾಜ್ಯ ಮುಖಂಡರಾದ ಕಾಂ ಸುಜಾತಾ,ಮುಂತಾದವರು ಹಾಜರಿದ್ದು ಸಮ್ಮೇಳನದ ಯಶಸ್ಸಿಗಾಗಿ ಕಾರ್ಯಬದ್ಧರಾದರು.