ರೈತರ ಏಳಿಗೆಗಾಗಿ ಹಗಲಿರಳು ಶ್ರಮಿಸುವೆ – ದಯಾನಂದ ಪಾಟೀಲ
ರೈತರ ಏಳಿಗೆಗಾಗಿ ಹಗಲಿರಳು ಶ್ರಮಿಸುವೆ – ದಯಾನಂದ ಪಾಟೀಲ
ಕಲಬುರಗಿ:ರಾಜ್ಯದಲ್ಲಿ ಪ್ರವಾಹ, ನೀರಾವರಿ ಸಮಸ್ಯೆಯಿಂದಾಗಿ ಸುಮಾರು 15 ಲಕ್ಷ ಹೆಕ್ಟೇರ್ ಭೂಮಿ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರ ಈಗಾಗಲೇ 498.73 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಿದೆ. ಆದರೆ ರೈತ ಬೆಳೆದ ಬೆಳೆಗೆ ಯೋಗ್ಯವಾದ ಬೆಂಬಲ ಬೆಲೆ ನಿಗದಿ ಮಾಡಿ, ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ರೈತರು ಹತಾಶರಾಗಬಾರದು ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ದಯಾನಂದ ಪಾಟೀಲ ಹೇಳಿದರು.
ತಾಲೂಕಿನ ಪಾಳಾ ಗ್ರಾಮದ ಶರಣಬಸವೇಶ್ವರ ಸಂಸ್ಥಾನದಲ್ಲಿ ನವ ಕರ್ನಾಟಕ ರೈತ ಸಂಘ ಬೆಂಗಳೂರು–ಕಲಬುರಗಿ ವತಿಯಿಂದ 2025–26ನೇ ಸಾಲಿನ ವಿಶ್ವ ರೈತ ದಿನಾಚರಣೆ, ರೈತರ ವಿಶೇಷ ಹಬ್ಬ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವು ಬುಧವಾರ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಯಾನಂದ ಪಾಟೀಲ ಅವರು, ರೈತರ ಹಿತ ರಕ್ಷಣೆಗೆ ಸಂಘ ಸದಾ ಹೋರಾಟ ಮಾಡಲಿದೆ. ರೈತರ ಏಳಿಗೆಗಾಗಿ ಹಗಲಿರಳು ಶ್ರಮಿಸುವೆನೆಂದು ಭರವಸೆ ನೀಡಿದರು.
ಕಾರ್ಯಕ್ರಮವನ್ನು ಬಿಜೆಪಿ ಕಲಬುರಗಿ ಗ್ರಾಮೀಣ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಕುಮಾರ ಪಾಟೀಲ ಜಂಬಗಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೃಷಿ ಸಮಾಜದ ನಿರ್ದೇಶಕ ಸಂಜು ಪಾಟೀಲ ಮರಗೋಳ, ಉಪಾಧ್ಯಕ್ಷ ಮಲ್ಲಿಕಾರ್ಜುನ ಗಂಗಾಣಿ, ಕೃಷಿ ಪತ್ತಿನ ಸಹಕಾರ ಸಂಘ ಕೋಟನೂರ ಅಧ್ಯಕ್ಷ ಶ್ರೀ ಮಲ್ಲಿನಾಥ ನಾಗನಹಳ್ಳಿ ಉಪಸ್ಥಿತರಿದ್ದರು.
ಅತಿಥಿಗಳಾಗಿ ಪ್ರಗತಿಪರ ರೈತ ಶ್ರೀ ಬಸವರಾಜ ಪೊಲೀಸ್ ಪಾಟೀಲ, ಪತ್ರಕರ್ತ ಶ್ರೀ ಶರಣಗೌಡ ಪಾಟೀಲ, ವೀರಶೈವ ಮುಖಂಡ ಶ್ರೀ ಶಿವಾನಂದ ಮಠಪತಿ, ರೈತ ಮುಖಂಡ ಶ್ರೀ ವಿಶ್ವನಾಥ ಆಲೂರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಪ್ರಶಸ್ತಿ ಪುರಸ್ಕೃತರು: ಬಸವರಾಜ ಮಳೆಪ್ಪಗೌಡ ಮಾಲಿಪಾಟೀಲ ನಾಗಯ್ಯ ಗುತ್ತೇದಾರ, ಶ್ರೀ ಗುಂಡಪ್ಪ ನಾಯಿಕೊಡಿ, ಮಾದೇವ ದಂಡಿನಕರ್, ನಿಂಗಪ್ಪ ಕಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಸುಮಿತ್ರಾಬಾಯಿ.
ಕಾರ್ಯಕ್ರಮದಲ್ಲಿ ರೈತಪರ ಹೋರಾಟ, ಕೃಷಿ ಕ್ಷೇತ್ರದ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಚರ್ಚೆ ನಡೆಯಿತು. ಸಮಾರಂಭಕ್ಕೆ ಬಾಪುಗೌಡ ಪಾಟೀಲ, ಚಂದ್ರಶೇಖರ್ ಪೂಜಾರಿ , ಶಿವಯೋಗಿ ಭಜಂತ್ರಿ , ಸೇರಿದಂತೆ ರೈತರು, ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
