ಚಿಂಚೋಳಿ: ಸಿದ್ಧಸಿರಿ ಎಥನಾಲ ಕಂಪೆನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸಿಎಫ್ ಒ ನೀಡಲು ವಿಳಂಬ ನೀತಿ ಖಂಡಿಸಿ ಆ.30ರಂದು ಚಿಂಚೋಳಿ ಬಂದ್ ಗೆ ಕರೆ: ರೈತರು ಆತ್ಮಹತ್ಯೆ ಮಾಡಿಕೊಂಡರೆ ರಾಜ್ಯ ಸರ್ಕಾರವೇ ಹೊಣೆ
ಚಿಂಚೋಳಿ: ಸಿದ್ಧಸಿರಿ ಎಥನಾಲ ಕಂಪೆನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸಿಎಫ್ ಒ ನೀಡಲು ವಿಳಂಬ ನೀತಿ ಖಂಡಿಸಿ ಆ.30ರಂದು ಚಿಂಚೋಳಿ ಬಂದ್ ಗೆ ಕರೆ: ರೈತರು ಆತ್ಮಹತ್ಯೆ ಮಾಡಿಕೊಂಡರೆ ರಾಜ್ಯ ಸರ್ಕಾರವೇ ಹೊಣೆ
ಚಿಂಚೋಳಿ: ರಾಜ್ಯದ ಅತ್ಯಂತ ಹಿಂದುಳಿದ ಚಿಂಚೋಳಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ವರವಾದ ಸಿದ್ಧಸಿರಿ ಎಥನಾಲ ಮತ್ತು ಪವರ ಘಟಕದ ಕಾರ್ಯಾರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಪಕ್ಷಪಾತ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಆ.30ರಂದು ಚಿಂಚೋಳಿ ಬಂದ್ ಗೆ ಅಖಿಲ ಭಾರತ ರೈತ ಹಿತ ರಕ್ಷಣಾ ಸಂಘ ಕರೆ ನೀಡಿದೆ.
ಚಿಂಚೋಳಿ ಮತ್ತು ಸುತ್ತಲಿನ ಐದು ತಾಲ್ಲೂಕುಗಳಲ್ಲಿ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡರೇ ಇದಕ್ಕೆ ರಾಜ್ಯ ಸರ್ಕಾವೇ ನೇರ ಹೊಣೆ ಎಂದು
ಶಾಸಕ ಡಾ.ಅವಿನಾಶ ಜಾಧವ ಮತ್ತು ಸಂಘದ ಅಧ್ಯಕ್ಷ ಶಿವಶರಣಪ್ಪ ಜಾಪಟ್ಟಿ ತಿಳಿಸಿದರು.
ಜಂಟಿ ಸುದ್ದಿ ಗೋಷ್ಠಿ ನಡೆಸಿದ ಅವರು ಮಂಡಳಿಯ ವಿಳಂಬ ನೀತಿ ನಾವು ಖಂಡಿಸುತ್ತೇನೆ ಎಂದರು. ರಾಜ್ಯ ಸರ್ಕಾರ ಮತ್ತು ಮಂಡಳಿಯ ನಡೆ ರೈತ ವಿರೋಧಿ ಮತ್ತು ಚಿಂಚೋಳಿ ಅಭಿವೃದ್ಧಿಯ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಸಹಸ್ರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಂಪೆನಿ ಪ್ರಾರಂಭಗೊಳ್ಳದಿದ್ದರೆ ಸಾವಿರಾರು ರೈತರ ಕುಟುಂಬಗಳು ಬೀದಿಪಾಲಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ತಕ್ಷಣ ಸರ್ಕಾರ ಕಂಪೆನಿ ಪ್ರಾರಂಭಕ್ಕೆ ಮುಂದಾಗಬೇಕು. ಹೈಕೋರ್ಟ ನಿರ್ದೇಶನದಂತೆ ಸಿಎಫ ಒ ನೀಡಲು ಸೂಚಿಸಬೇಕು. ಹೈಕೋರ್ಟ ಆದೇಶ ಪಾಲಿಸದ ಮಂಡಳಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಂಪೆನಿ ನಂಬಿ ಕಬ್ಬು ಬೆಳೆದ ರೈತರು ಆತ್ಮಹತ್ಯೆಯ ದಾರಿ ತುಳಿದರೆ ಇದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ.
ಜಿಲ್ಲೆಯ ಸಚಿವರು, ಬೀದರ ಲೋಕಸಭೆ ಸದಸ್ಯರು ಹಾಗೂ ಅರಣ್ಯ ಸಚಿವರು ವಿಶೇಷ ಮುತುವರ್ಜಿ ವಹಿಸಿ ರೈತರ ಹಿತದೃಷ್ಟಿಯಿಂದ ಅನಗತ್ಯ ರಾಜಕಾರಣ ಮಾಡದೇ ಸಿದ್ಧಸಿರಿ ಎಥನಾಲ ಘಟಕದ ಆರಂಭಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಪಬ್ಲಿಕ್ ಶಾಲೆ, ಅತಿಥಿಗೃಹ, ಹೋಟೆಲ್, ಮಾಲ್ ಆರಂಭಿಸಿದೆ.ಸ ಇದರಿಂದ ಚಿಂಚೋಳಿ ತಾಲ್ಲೂಕು ಹಿಂದುಳಿದ ಹಣೆಪಟ್ಟಿ ಕಳಚಿಕೊಳ್ಳಲಿದೆ ಆದರೆ ರಾಜ್ಯ ಸರ್ಕಾರಕ್ಕೆ ಚಿಂಚೋಳಿ ಅಭಿವೃದ್ಧಿ ಬೇಕಾದಂತೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ನಂದಿಕುಮಾರ ಪಾಟೀಲ, ಗೌರಿಶಂಕರ ಉಪ್ಪಿನ, ಸಂತೋಷ ಗಡಂತಿ, ವಿಜಯಕುಮಾರ ಚೇಂಗಟಾ, ಗೋಪಾಲರಾವ್ ಕಟ್ಟಿಮನಿ,ಶಂಕರ ಶಿವಪುರಿ, ಜನಾರ್ದನ ಕುಲಕರ್ಣಿ ಮೊದಲಾದವರು ಇದ್ದರು.