ಜ್ಞಾನ ಮತ್ತು ಕೌಶಲ್ಯ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಆಯುಧಗಳು ಶಶೀಲ್ ಜಿ ನಮೋಶಿ
ಜ್ಞಾನ ಮತ್ತು ಕೌಶಲ್ಯ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಆಯುಧಗಳು ಶಶೀಲ್ ಜಿ ನಮೋಶಿ
ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು, ಒಬ್ಬ ವ್ಯಕ್ತಿಯು ಜ್ಞಾನ, ಸಾಮರ್ಥ್ಯ ಮತ್ತು ಕೌಶಲ್ಯ ಹೊಂದಿರಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನ ಗಣಕ ಯಂತ್ರ ವಿಭಾಗದ ನೇತೃತ್ವದಲ್ಲಿ ನಡೆದ ಸ್ವಯಂ ಉಚಿತ ಶಿಕ್ಷಣ ವೇದಿಕೆ ತಂತ್ರಜ್ಞಾನ ವರ್ಧಿತಾ ಕಲಿಕಾ ರಾಷ್ಟ್ರೀಯ ಕಾರ್ಯಕ್ರಮ ( ಎನ್ ಪಿ ಟಿ ಎಲ್) ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಜ್ಞಾನ ಮತ್ತು ಕೌಶಲ್ಯಗಳು ವ್ಯಕ್ತಿ ನಿರ್ಮಾಣದ ಪ್ರಮುಖ ಆಯುಧಗಳಾಗಿವೆ.ಜೀವನದಲ್ಲಿ ಜ್ಞಾನವನ್ನು ಸಂಪಾದಿಸದೇ ಇರುವವನು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಜ್ಞಾನವೇ ಜೀವನದ ಯಶಸ್ಸಿನ ಮಾರ್ಗವಾಗಿದೆ. ಜ್ಞಾನವಿಲ್ಲದ ಮಾನವ ಜೀವನ ಅಪೂರ್ಣವೆಂದು ಹೇಳಲಾಗುತ್ತದೆ.ಜೀವನದಲ್ಲಿ ಜ್ಞಾನವನ್ನು ಮೂರು ರೀತಿಯಲ್ಲಿ ಸಂಪಾದಿಸಬಹುದು. ಮೊದಲನೆಯದು - ಚಿಂತನೆಯಿಂದ, ಇದು ಉತ್ತಮ ಮಾರ್ಗವಾಗಿದೆ. ಎರಡನೆಯದು ಅನುಕರಣೆಯಿಂದ, ಇದು ಸುಲಭವಾದ ಮಾರ್ಗವಾಗಿದೆ ಮತ್ತು ಮೂರನೆಯದು ಅನುಭವದಿಂದ, ಇದು ಒಂದಿಷ್ಟು ಕಠಿಣವಾಗಿರುತ್ತದೆ.ಜ್ಞಾನ ಹೊಂದಿರುವ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಜ್ಞಾನವು ನಮ್ಮಲ್ಲಿನ ಹಣ, ಆಸ್ತಿಗಿಂತಲೂ ಮುಖ್ಯವಾದ ಸಂಪತ್ತಾಗಿದೆ. ಜ್ಞಾನವನ್ನು ಎಷ್ಟೇ ಪಡೆದುಕೊಂಡರೂ ಮತ್ತೆ ಮತ್ತೆ ಪಡೆದುಕೊಳ್ಳಬೇಕೆನ್ನುವ ಬಯಕೆ ನಮ್ಮಲ್ಲಿ ಹುಟ್ಟಬೇಕು. ಆಗ ಮಾತ್ರ ಓರ್ವ ವ್ಯಕ್ತಿಯ ಜ್ಞಾನವು ವೃದ್ಧಿಯಾಗುತ್ತದೆ ಎಂದು ಹೇಳಿದರು ಜ್ಞಾನದ ಜೋತೆ ಕೌಶಲ್ಯ ಕೂಡಿದಾಗ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.
ಇಂದು ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಯಂ ಎನ್ ಪಿ ಟಿ ಎಲ್ ಜಾಗೃತಿ ಕಾರ್ಯಗಾರ ನಡೆಸಿ ನಮ್ಮ ಸಂಸ್ಥೆಯ ಹಾಗೂ ಕಲಬುರ್ಗಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಧ್ಯಾಪಕರಿಗೆ ಜಾಗೃತಿ ಮೂಡಿಸುವದು ಹೆಮ್ಮೆಯ ವಿಷಯವಾಗಿದೆ ಸುಮಾರು 207 ಪ್ರಾಧ್ಯಾಪಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಎನ್ ಪಿ ಟಿ ಎಲ್ ಹಿರಿಯ ವ್ಯವಸ್ಥಾಪಕ ಹಾಗೂ ಐಐಟಿ ಮದ್ರಾಸ್ ಶಿವಶಂಕರ್ ದಾಸ್ ಮಾತನಾಡಿ NPTEL ಜಾಗೃತಿ ಕಾರ್ಯಾಗಾರಗಳ ಉದ್ದೇಶವು NPTEL ಮತ್ತು ಅದರ ವಿವಿಧ ಉಪಕ್ರಮಗಳ ಬಗ್ಗೆ ಅಧ್ಯಾಪಕರಲ್ಲಿ ಗರಿಷ್ಠ ಅರಿವು ಮೂಡಿಸುವುದು ಹಾಗೂ NPTEL ಈಗ ತನ್ನ ಪಾಲುದಾರ ಕಾಲೇಜುಗಳ ಸಹಯೋಗದೊಂದಿಗೆ ಇ-ಜಾಗೃತಿ ಕಾರ್ಯಾಗಾರಗಳನ್ನು ನಡೆಸುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರ್ಗಿ ನಿರ್ದೇಶಕರಾದ ಡಾ ಶಂಭುಲಿಂಗ ಆಗಮಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಡಾ ಮಹಾದೇವಪ್ಪ ರಾಂಪೂರೆ, ಡಾ ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ್ ಡಾ ಕಿರಣ್ ದೇಶಮುಖ್ , ನಾಗಣ್ಣ ಘಂಟಿ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ, ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ ಜಯಶ್ರೀ ಅಗರಖೇಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಾ ಪ್ರಾರ್ಥಿಸಿದರು, ಉಪ ಪ್ರಾಚಾರ್ಯರಾದ ಡಾ ಭಾರತಿ ಹರಸೂರ ವಂದಿಸಿದರು ಕುಮಾರಿ ಸೀಮಾ ಕುಲಕರ್ಣಿ ನಿರೂಪಿಸಿದರು.