ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳು. - ಮುಡುಬಿ ಗುಂಡೇರಾವ

ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳು. -	ಮುಡುಬಿ ಗುಂಡೇರಾವ

 ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳು.- ಮುಡುಬಿ ಗುಂಡೇರಾವ 

ಕಾಳಗಿ - ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳ ಕೊಡುಗೆ ಅಪಾರ.ನಾಡು , ನುಡಿ ಸಂಸ್ಕೃತಿಕ ಪರಿಚಯಿಸುವ ಕೆಲಸ ವಾಗಬೇಕು, ತೆಂಗಳಿ ಶಾಸನಗಳು, ದೇವಾಲಯಗಳು , ವೀರಗಲ್ಲ ಸ್ಮಾರಕಗಳು ಪ್ರಾಚೀನ ಕನ್ನಡಿಗರ ಆಡಳಿತ, ಶಿಕ್ಷಣ,ಧರ್ಮ,ಅಧ್ಯಾತ್ಮ , ಸಮಾಜ ,ಆರ್ಥಿಕ ಮುಂತಾದ ವಿವಿಧ ಕ್ಷೇತ್ರಗಳ ಸಾಧನೆಯನ್ನು ತಿಳಿಸುತ್ತವೆ. ತೆಂಗಳಿ ಒಂದು ಕಾಲಕ್ಕೆ ೭೦ ಹಳ್ಳಗಳಿಗೆ ರಾಜ್ಯಧಾನಿಯಾಗಿತ್ತು.ಇಲ್ಲಿ ಈಶ್ವರ ದೆವಾಲಯ ಶಿಕ್ಷಣ ನಿಡುವ ಅಗ್ರಹಾರ ವಾಗಿತ್ತು. ನಾಡಿನ ವಿವಿಧ ಪ್ರದೆಶಗಳಿಂದ ವಿದ್ಯಾರ್ಥಿಗಳು ಕನ್ನಡ ವಿವಿಧ ವಿಷಗಳನ್ನು ಕಲಿಯಲು ಆಗಮಿಸುತ್ತಿದ್ದರು. ತೆಂಗಳಿ, ಮಂಗಲಿಗಿ , ಕಾಳಗಿ ,ಮರ್ತೂರ , ಇಂಗಳಿಗಿ , ದಂಡೋತಿ , ಮಾನ್ಯಖೇಟ , ಸನ್ನತಿ ಮುಂತಾದ ಪವಿತ್ರ ತಾಣಗಳು ಪ್ರವಾಸೀ ತಾಣ ವಾಗುವ ಎಲ್ಲ ಅರ್ಹತೆ ಹೊಂದಿವೆ. ಇವುಗಳ ರಕ್ಷಣೆ ಯಾಗಬೇಕು. ಇವುಗಳು ಇತಿಹಾಸ ಪಠ್ಯಕ್ರಮದಲ್ಲಿ ಸೇರಬೆಕು ಎಂದರು. ನಮ್ಮೆಲ್ಲರ ನಡೆ ಸ್ಮಾರಕಗಳ ರಕ್ಷಣೆಯ ಕಡೆಗೆ ಸಾಗಬೇಕು ಐತಿಹಾಸಿಕ ಪ್ರಙೆ್ಙ ಜಾಗ್ರತೆ ಮಾಡುವುದು ಅವಶ್ಯ ಎಂದು ದಿನಾಂಕ ೨೫-೦೮-೨೦೨೪ ಬೆಳಗ್ಗೇ ೧೧ ಗಂಟೆಗೆ ಟೆಂಗಳಿ ,ಗ್ರಾಮದ ವಿಶ್ವವೇಶ್ವರಯ್ಯ ಹಿರಿಯ ಪ್ರಾಥಮಿಕ 

ಶಾಲೆಯಲ್ಲಿ ನಮ್ಮೂರು ನಮಗೆ ಮೇಲು ವಿಶೇಷ ಉಪನ್ಯಾಸ ಕಾರ್ಯಕ್ರಮಲ್ಲಿ ಸಂಶೋಧ ಸಾಹಿತಿ ಮುಡಬಿ ಗುಂಡೇರಾವ ಅಭಿಮತ ವ್ಯಕ್ತಪಡೆಸಿದರು.

ಮುಂದಿನ ದಿನಗಳಲ್ಲಿ ಕಾಳಗಿ ತಾಲುಕಿನ ಕನ್ನಡ ಸಾಹಿತ್ಯ ಪರಂಪರೆ ಬಿಂಬಿಸುವ ಐತಿಹಾಸಿಕ ಸ್ಮಾರಕಗಳ ಸಾಹಿತ್ಯ ರಚಿಸಿ ಪ್ರಕಟಣೆಗೊಳಿಸುವ ಉದ್ದೆಶ ಕಾಳಿಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ ಹೊಂದಿದೆ ಎಂದು ತಾಲೂಕಿನ ಅದ್ಯಕ್ಷ ಸಂತೋಷ ಕುಡಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ತಾಯಿ ಹಾಲು ಎಷ್ಟು ಶ್ರೇಷ್ಟವೊ ಅಷ್ಟೆ ಕನ್ನಡಿಗರಿಗೆ ಕನ್ನಡ ಭಾಷೆ ಶ್ರೇಷ್ಟ ಎನ್ನುತ್ತ ಈ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ಥಿ ಪಡೆದ ಹೆಮ್ಮೆಯ ಭಾಷೆ ಎನ್ನುತ್ತ ಭಾಷೆ ವiತ್ತು ಊರಿನ ಅಭಿಮಾನ ಊಳಿಸಿ ಬೆಳೆಸುವುದು ಮಕ್ಕ¼ ಕರ್ತವ್ಯವಾಗಬೆಕೆಂದು ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನಿದ್ಯವಹಿಸಿದ ಡಾ. ಶಾಂತಸೋಮನಾಥ ಶಿವಾಚಾರ್ಯರು ಮತನಾಡಿದರು.

ಟೆಂಗಳಿ ಬೆಣ್ಣೆತೋರ ಹಳ್ಳದ ತಿಳಿ ನೀರಿನ ದಡದಲ್ಲಿದ್ದು, ತಂಗಾಳಿ ಹವೆಯಲ್ಲಿ ತಂಪಾಗಿ ಜೀವಿಸಿ ಬಾಳಿ ಬದುಕಿ ನಿಸ್ವಾರ್ಥ ರಾಜಕಾರಣಿಗಳಾಗಿ ಮಿಲ್ಟಿçà ಸೇರಿ ದೇಶ ಸೇವೆ ಮಾಡಿದ, ಶಿಕ್ಷಣ ಸಂಸ್ಥೆ ಹುಟ್ಟುಹಾಕಿದ ಮಹಾತ್ಮರ ವ್ಯಕ್ತಿತ್ವ ನಮಗೆ ಪ್ರೇರಣೆ, ಕಡಲಿ, ತೊಗರಿ, ಜೋಳ ಬೆಳೆಯುವ ನೆಲ ಈಗ ಔಷಧಿ ಬೆಳೆಗಳು ಬೆಳೆಯುತ್ತಿರುವ ನಮ್ಮ ನೆಲ, ಗ್ರಾಮದ ಅನುಕೂಲಕ್ಕಾಗಿ ದೆಹಲಿವರೆಗೆ ಹೋಗಿ ಸವಲತ್ತು ಪಡೆದುಕೊಂಡು ಮುಖ್ಯಮಂತ್ರಿ ಬಂದು ಹೋಗಿರುವ ನೆಲ ಅನೇಕ ಐತಿಹಾಸಿಕ ಪರಂಪರೆ ಬಿಂಬಿಸುವ ಸ್ಮಾರಕಗಳಿರುವ ಇಂತಹ ನೆಲದ ಹಿರಿಮೆ ಗರಿಮೆ ಕುರಿತು ನಮ್ಮೂರು ನಮಗೆ ಮೇಲು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ ಸಾ ಪ ಗೌರವ ಕಾರ್ಯದಶಿ ಶಿವರಾಜ ಅಂಡಗಿ ಅವರು ಅಶೆಯ ನುಡಿಗಳನ್ನಾಡಿದರು.

ತೆಂಗಳಿ ಕಸಾಪ ವಲಯ ಘಟಕದ ಅದ್ಯಕ್ಷ ಭಿಮಾಶಂಕರ ಆಂಕಲಿಗಿ ಅದ್ಯಕ್ಷತೆ ವಹಿಸಿದರು ಪದಾಧಿಕಾರಿಗಳಾದ ಜಗಧೀಶ ಕೆಶ್ವಾರ , ರಾಜಕುಮಾರ ಪಟೇದ , ಮಹಮ್ಮದ ಲದಾಫ , ಪ್ರಶಾಂತ ಹಳ್ಳಿ , ವಿಶ್ವನಾಥ ಬಾಳದೆ , ಬಸವರಾಜ ಭೊದನ ,

ಶಾಲೆಯ ಮುಖ್ಯ ಗುರುಗಳಾದ ಶರಣಬಸಪ್ಪಾ ಮುನ್ನಳ್ಳಿ ಶಿಕ್ಷಕರಾದ ನಿರ್ಮಲಾ ಮಠಪತಿ , ಬಸಮ್ಮ ಹಲಚೆರಿ, ಭವಾನಿ ಮಠಪತಿ. ಚನ್ನಮ್ಮ ಜಂಬಗಿ . ಸ್ನೇಹಾ ಭಯ್ಯಾರ ಹಾಗು ಗ್ರಾಮದ ಅನೇಕ ಹಿರಿಯರು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.         ವರದಿ ಶಿವರಾಜ ಆಂಡಗಿ