ಸಹಕಾರ ಸಂಘಗಳು ಇಡಿ ದೇಶದ ಸಹಕಾರ ಚಳವಳಿಯ ದಿಕ್ಕು ಬದಲಿಸಿವೆ

ಸಹಕಾರ ಸಂಘಗಳು ಇಡಿ ದೇಶದ ಸಹಕಾರ ಚಳವಳಿಯ ದಿಕ್ಕು ಬದಲಿಸಿವೆ

ಸಹಕಾರ ಸಂಘಗಳು ಇಡಿ ದೇಶದ ಸಹಕಾರ ಚಳವಳಿಯ ದಿಕ್ಕು ಬದಲಿಸಿವೆ 

ಸರ್ಕಾರದಿಂದಾಗದ ಕಾರ್ಯ ಸಹಕಾರದಿಂದ ಸಾಧ್ಯ ಎಂದು ತೋರಿಸಿದೆ :..

ಶಹಾಬಾದ : - ಭಾರತದಲ್ಲಿ ಸಹಕಾರ ಚಳವಳಿಗೆ ಕಾನೂನುನಾತ್ಮಕವಾಗಿ ಜಾರಿಗೆ ತಂದವರು ಸಿದ್ದನಗೌಡ ಪಾಟೀಲರು, ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಹಕಾರ ಪಿತಾಮಹ ಎನಿಸಿಕೊಂಡಿದ್ದಾರೆ, ಅವರು ಸ್ಥಾಪಿಸಿದ ಸಹಕಾರ ಸಂಘವು ಇಡಿ ದೇಶದ ಸಹಕಾರ ಚಳವಳಿಯ ದಿಕ್ಕು ಬದಲಿಸಿತು ಎಂದು ಶರಣು ತುಂಗಳ ಹೇಳಿದರು. 

ಅವರು ಶಹಾಬಾದ ಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲರ ಜನ್ಮದಿನ ನಿಮಿತ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಏಷ್ಯಾ ಖಂಡದಲ್ಲಿಯೇ ಮೊಟ್ಟ ಮೊದಲ ಸಹಕಾರ ಸಂಘವನ್ನು ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ 1905ರಲ್ಲಿ ಸ್ಥಾಪಿಸಿದ ಸಿದ್ದನಗೌಡ ಪಾಟೀಲ್ ಅವರು, ಸಹಕಾರ ಚಳವಳಿ ಜನಕರೆಂದೇ ಪ್ರಸಿದ್ಧರಾಗಿದ್ದಾರೆ, ಸಿದ್ದನಗೌಡ ಪಾಟೀಲರ ಹೆಸರಿನಲ್ಲಿ ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಿದೆ, ರಾಜ್ಯ ಮತ್ತು ರಾಷ್ಟ್ರದಲ್ಲಿ ಸಹಕಾರ ರಂಗ ಉನ್ನತ ಮಟ್ಟದಲ್ಲಿ ಬೆಳೆದು ಸರ್ಕಾರದಿಂದಾಗದ ಕಾರ್ಯ ಸಹಕಾರದಿಂದ ಸಾಧ್ಯ ಎಂದು ತೋರಿಸಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಸದಾನಂದ ಕುಂಬಾರ ಮಾತನಾಡಿ, ಸಿದ್ದನಗೌಡರ ಪ್ರಯತ್ನದ ಫಲವಾಗಿ ದೇಶದ ಮೂಲೆ ಮೂಲೆಗಳಲ್ಲೂ ವಿವಿಧ ಪ್ರಕಾರದ ಸಹಕಾರ ಸಂಘಗಳು ಸ್ಥಾಪನೆಗೊಂಡಿವೆ, ರೈತರಿಗೆ, ಕಾರ್ಮಿಕ ವರ್ಗದವರಿಗೆ, ಮಹಿಳೆಯರಿಗೆ, ಶ್ರಮಜೀವಿಗಳಿಗೆ ಆಶಾ ಕಿರಣವಾಗಿ ಅವರ ಜೀವನ ಉತ್ಸಾಹವನ್ನು ಸಹಕಾರ ಕ್ಷೇತ್ರ ಇಮ್ಮಡಿಗೊಳಿಸಿದೆ, ಸಹಕಾರ ತತ್ವದ ಮೇಲೆ ವಿಶ್ವಾಸವನ್ನಿಟ್ಟು ವ್ಯವಹರಿಸುವ ಪ್ರತಿಯೊಂದು ಸಂಘ ಸಂಸ್ಥೆ ಪದಾಧಿಕಾರಿಗಳು ಸಿದ್ದನಗೌಡ ಪಾಟೀಲರನ್ನು ಸ್ಮರಿಸುವ ಅಗತ್ಯವಿದೆ, ಸಹಕಾರಿ ಸಂಘಗಳ ಏಳಿಗೆಯಲ್ಲಿ ನಿರ್ದೇಶಕರ ಮತ್ತು ಸದಸ್ಯರ ಸಹಕಾರದಿಂದ ಪ್ರಗತಿಯತ್ತ ಸಾಗುತ್ತಿವೆ, ಸಂಘಗಳ ಮುನ್ನೆಡೆಗೆ ಎಲ್ಲರೂ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲೋಹಿತ ಕಟ್ಟಿ, ನಿರ್ದೇಶಕರಾದ ಶರಣು ವಸ್ತ್ರದ, ಜಗದೀಶ ಪಾಟೀಲ, ನಾರಾಯಣರೆಡ್ಡಿ, ಶರಣು ಜೋಗುರ, ನಾಗಣ್ಣಗೌಡ ಪಾಟೀಲ, ಭೀಮಯ್ಯ ಗುತ್ತೆದಾರ, ಮೋಹನ ಹಳ್ಳಿ, ಶಾರದಾ ದಾಸರಿ ಸೇರಿದಂತೆ ಹಲವರು ಹಾಜರಿದ್ದರು.