ಅಕಾಲಿಕ ಮಳೆಯಿಂದ ಜೇವರ್ಗಿ ಜನಜೀವನ ಅಸ್ತವ್ಯಸ್ತ. ಮೊಹಮ್ಮದ್ ಶೋಯಬ್ ಗಿರಣಿ ಆಕ್ರೋಶ.

ಅಕಾಲಿಕ ಮಳೆಯಿಂದ  ಜೇವರ್ಗಿ ಜನಜೀವನ ಅಸ್ತವ್ಯಸ್ತ. ಮೊಹಮ್ಮದ್ ಶೋಯಬ್ ಗಿರಣಿ  ಆಕ್ರೋಶ.

ಅಕಾಲಿಕ ಮಳೆಯಿಂದ ಜೇವರ್ಗಿ ಜನಜೀವನ ಅಸ್ತವ್ಯಸ್ತ. ಮೊಹಮ್ಮದ್ ಶೋಯಬ್ ಗಿರಣಿ ಆಕ್ರೋಶ.

 ಜೇವರ್ಗಿ ಸುದ್ದಿ  ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಸತತವಾಗಿ ಸುರಿತ್ತಿರುವ ಮಳೆಯಿಂದ ಜೇವರ್ಗಿ ಪಟ್ಟಣದ ಜೋಪಡಿ ಪಟ್ಟಿಯಲ್ಲಿ ನೀರು ನುಗ್ಗಿ ಸುಮಾರು 150 ಮನೆಯಲ್ಲಿ ಕೂಡಿಟ್ಟಿದ್ದ ದವಸ ಧಾನ್ಯಗಳು ನಿರುಪಾಲಾಗಿವೆ ಅದೇ ರೀತಿಯಾಗಿ ಕನಕದಾಸ ಚೌಕನ ಉರ್ದು ಶಾಲೆಯ ಹಿಂದುಗಡೆ ಹಲವಾರು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಇರ್ತಕ್ಕಂತ ಜನರು ನಿದ್ರೆ ಇಲ್ಲದೆ ತಿನ್ನಲು ಊಟವಿಲ್ಲದೆ ಪರದಾಡುವಂತಾಗಿದೆ ದವಸ ಧಾನ್ಯಗಳು ನೀರು ಪಾಲಾದ ಪರಿಣಾಮ ತಿನ್ನಲು ಊಟವಿಲ್ಲದೆ ಚಿಕ್ಕ ಮಕ್ಕಳು ವಯಸ್ಸಾದ ವೃದ್ಧರು ಆತಂಕ ಪಡುತ್ತಿದ್ದಾರೆ ಕೂಡಲೆ ತಾಲೂಕಿನ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಈ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರ ಧನ ವಿತರಿಸಬೇಕು ಅದೇ ರೀತಿಯಾಗಿ ತಾಲೂಕಿನ ದಂಡಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗಡಾದ ಸಂತ್ರಸ್ತರಿಗೆ ಪರಿಹಾರ ಧನವನ್ನು ವಿತರಿಸುವ ಕೆಲಸ ಮಾಡಬೇಕೆಂದು ಭಾರತೀಯ ಕ್ರಾಂತಿಕಾರಿ ರೈತ ಸೇನೆಯ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಶೋಯಬ್ ಗಿರಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಇದಕ್ಕೆ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಶಾಸಕರ ಕಚೇರಿಯ ಮುಂದೆ ಜೇವರ್ಗಿಯ ಸಮಸ್ತ ಸಂತ್ರಸ್ತ ನಾಗರಿಕ ರೊಂದಿಗೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು