ಬಿ ಎಸ್ ಎಸ್ ಕೆ ಕಾರ್ಖಾನೆ ಆರಂಭಗೊಳ್ಳದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಇಚ್ಛಾಶಕ್ತಿಯ ಕೊರತೆ ಕಾರಣ

ಬಿ ಎಸ್ ಎಸ್ ಕೆ ಕಾರ್ಖಾನೆ ಆರಂಭಗೊಳ್ಳದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಇಚ್ಛಾಶಕ್ತಿಯ ಕೊರತೆ ಕಾರಣ

ಬಿ ಎಸ್ ಎಸ್ ಕೆ ಕಾರ್ಖಾನೆ ಆರಂಭಗೊಳ್ಳದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಇಚ್ಛಾಶಕ್ತಿಯ ಕೊರತೆ ಕಾರಣ.

ಹುಮನಾಬಾದ್: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆರಂಭ ಆಗದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಇಚ್ಚಾಶಕ್ತಿಯ ಕೊರತೆಯೇ ಪ್ರಮುಖ ಕಾರಣ ಎಂದು ನಿರ್ದೇಶಕ ಮಲ್ಲಿಕಾರ್ಜುನ್ ಪಾಟೀಲ್ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಖಾನೆ ಆರಂಭಿಸುವ ವಿಷಯದಲ್ಲಿ ನಿರಾಸಕ್ತಿ ತೋರುತ್ತಿರುವ ಶ್ರೀ ಈಶ್ವರ ಖಂಡ್ರೆ ರವರ ಧೋರಣೆಯಿಂದ ಅನೇಕ ರೈತರಿಗೆ ಅನ್ಯಾಯವಾಗುತ್ತಿದೆ. ಅನೇಕ ಕೂಲಿ ಕಾರ್ಮಿಕರಿಗೆ ಇದು ಅನ್ನದಾತವಾಗಿತ್ತು.

ಕಾರ್ಖಾನೆ ಲೀಸ್ಗೆ ನೀಡಲು ಸಚಿವರು ಮನಸ್ಸು ಮಾಡುತ್ತಿಲ್ಲ. ಅದೇ ರೀತಿ ಜಿಲ್ಲಾ ಸ‌ಹಕಾರಿ ಬ್ಯಾಂಕಿನ ಅಧ್ಯಕ್ಷರು ಸಹ ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. 

ಈ ನಿಟ್ಟಿನಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ಸಚಿವರು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇನ್ನೊಬ್ಬ ನಿರ್ದೇಶಕ ವಿಶ್ವನಾಥ್ ಪಾಟೀಲ್ ಮಾಡ್ಗೋಳ್ ಮಾತನಾಡಿ ಈಶ್ವರ ಖಂಡ್ರೆ ಮನಸ್ಸು ಮಾಡಿದರೆ ಈ ವಿಚಾರ ಅವರಿಗೆ ಖಂಡಿತವಾಗಿಯೂ ದೊಡ್ಡದೇನಲ್ಲ. ಉದ್ದೇಶಪೂರ್ವಕವಾಗಿ ಅವರು ನಿರಾಸಕ್ತಿ ತೋರುತ್ತಿದ್ದಾರೆ. ಇದು ಸರಿಯಲ್ಲ, ಆದಷ್ಟು ಬೇಗನೆ ಕಾರ್ಖಾನೆ ಆರಂಭಿಸಬೇಕು ಎಂದರು.

ಈ ವೇಳೆ ಕಾರ್ಖಾನೆ ಇತರೆ ನಿರ್ದೇಶಕರು ಹಾಜರಿದ್ದರು.

ವರದಿ - ಸಂಗಮೇಶ ಎನ್ ಜವಾದಿ.