ಭ್ರಷ್ಟಾಚಾರ

ಭ್ರಷ್ಟಾಚಾರ

ಸಂಪಾದಕೀಯ ನುಡಿ

ಭ್ರಷ್ಟಾಚಾರ.

 ಮನುಷ್ಯರ ಮನಸ್ಸುಗಳೇ ಭ್ರಷ್ಟ ಗೊಂಡಿವೆ. ಇದರ ಫಲಿತಾಂಶ ವ್ಯವಸ್ಥೆಯೂ ಭ್ರಷ್ಟವಾಗಿದೆ. ಇದರ ಆದಿ ಅಂತ್ಯಗಳೇ ಕಾಣುತ್ತಿಲ್ಲ.  

 ಸಂವಿಧಾನದ ಅಡಿಯಲ್ಲಿಯೇ ಪ್ರತಿಜ್ಞಾವಿಧಿ ಸ್ವೀಕರಿಸಿ ಆಡಳಿತ ಹಿಡಿಯುವ ರಾಜಕಾರಣ ಗಳು ಭ್ರಷ್ಟಾಚಾರದ ಮೂಲಬೇರುಗಳಾಗಿವೆ. ಅದಕ್ಕೆ ಪೂರಕವಾಗಿ ಅಧಿಕಾರಕ್ಕೆ ನೇಮಕವಾಗುವ ಸರ್ಕಾರಿ ಅಧಿಕಾರಿಗಳು, ಮತ್ತು ಉಳಿದ ಎಲ್ಲಾ ವರ್ಗಗಳು ಸಹ ಕೆಟ್ಟ ಹಣದ ಪ್ರಭಾವಕ್ಕೆ ಒಳಗಾಗಿ ಭ್ರಷ್ಟರಾಗುತ್ತಿದ್ದಾರೆ. 

 ಶಾಸಕರು ಮತ್ತು ಸಂಸದರು ಎಂಬ ಮನುಷ್ಯರು ಕೂಡ ಖರೀದಿಯ ವಸ್ತುವಾಗುವಂತಹ ಪರಿಸ್ಥಿತಿ ಬಂದಿದೆ. ಭ್ರಷ್ಟಾಚಾರದ ಒಂದು ಬೃಹತ್ ಸಮಾವೇಶವನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾಡಬೇಕಿದೆ. ಯಾವ ಯಾವ ಕೆಲಸಕ್ಕೆ ಎಷ್ಟು ಎಷ್ಟು ಹಣ ನೀಡಬೇಕು, ಯಾರಿಗೆ ನೀಡಬೇಕು, ಯಾವ ರೂಪದಲ್ಲಿ ನೀಡಬೇಕು ಎನ್ನುವುದನ್ನು ಪಾರದರ್ಶಕಗೊಳಿಸಿದರೆ ಕನಿಷ್ಠ ನಮ್ಮ ಗೊಂದಲಗಳಾದರು ನಿವಾರಣೆಯಾಗಿ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ಭ್ರಷ್ಟಾಚಾರದಲ್ಲೂ ವಂಚನೆಯಾಗುವ ಅಥವಾ ಶೋಷಿಸಲ್ಪಡುವ ಪರಿಸ್ಥಿತಿ ಬರುವುದಿಲ್ಲ.... 

 ಬಹುತೇಕ ಪೋಲಿಸ್ ಇಲಾಖೆಯಲ್ಲಿ ಭ್ರಷ್ಟಾಚಾರವು ತುಂಬಿತುಳುಕುತ್ತಿದೆ, ಇಲ್ಲಿ ಬಡವರಿಗೆಎ ಕಿಮ್ಮತ್ತಿಲ್ಲ, ಹಣವಿದ್ದವರಿಗೆ ಮಾತ್ರ ಕಾನೂನಿದೆ ಎಲ್ಲವೂ ಅನುಕೂಲವವಾಗಿದೆ, ಅಲ್ಲದೇ ಸರ್ಕಾರಿ ಮತ್ತು ಎಲ್ಲಾ ಇಲಾಖೆಗಳಲ್ಲಿ ಮತ್ತು ಖಾಸಗಿ ಕೆಲಸಗಳಿಗೆ ಸಹ ಭ್ರಷ್ಟ ಹಣ ಟೇಬಲ್‌ನಿಂದ ಟೇಬಲ್‌ಗೆ ಹುಚ್ಚು ಕುದುರೆಯಂತೆ ಓಡಾಡುತ್ತಿದೆ. ಭ್ರಷ್ಟಾಚಾರವು ಎಲ್ಲಾ ರಂಗಗಳನ್ನು ಮೀರಿ ನಿಂತಿದೆ. ಒಂದು ವೈದ್ಯಕೀಯ ಸೀಟನ್ನು ಪಡೆಯಬೇಕಾದರೇ ಕೋಟ್ಯಾಂತರ ಹಣ ನೀಡಿ ಪಡೆಯಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಅಲ್ಲದೆ ಒಬ್ಬ ಅಧಿಕಾರಿಗಳನ್ನು ಬೇರೆ ಜಾಗಕ್ಕೆ ವರ್ಗಾವಣೆ ಮಾಡಬೇಕಾದರೆ ರಾಜಕಾರಣ ಗಳಿಗೆ ಲಂಚವನ್ನು ನೀಡಿ ವರ್ಗಾಯಿಸಿಕೊಳ್ಳುತ್ತಾರೆ. ಅವರು ಕೊಟ್ಟ ಹಣ ದುಪ್ಪಟ್ಟು ಮಾಡಲು ಬಡವರ ರಕ್ತ ಹೀರುವ ಪರಿಸ್ಥಿತಿ ಬಂದೊದಗಿದೆ.

ಗ್ರಾಮ ಪಂಚಾಯತಿಯಿAದ ದೆಹಲಿಯವರೆಗೆ ಭ್ರಷ್ಟಾಚಾರ ಹಂತ ಹಂತವಾಗಿ ಜನರ ರಕ್ತ ಹೀರುತ್ತಿದೆ. ಇದರಿಂದ ಸಮಾಜ ರೋಗಗ್ರಸ್ತವಾಗಿದೆ. ಎಲ್ಲಾ ಸಿ.ಸಿ ಕ್ಯಾಮೇರಾ ಇದ್ದರೂ ಸಹಿತ ಭ್ರಷ್ಟಾಚಾರ ನಿಲ್ಲುತ್ತಿಲ್ಲ.  

 ಅದೇನು ಮುಚ್ಚು ಮರೆಯ ವಿಷಯವೇ ಅಲ್ಲ. ಅದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿರುವುದರಿಂದ ಅದರಲ್ಲಿಯೂ ಬಹಳ ಜನ ಮೋಸ ಹೋಗುತ್ತಾರೆ. ಲಂಚವನ್ನು ಸಹ ಅಧಿಕೃತವಾಗಿ ಘೋಷಿಸಬಾರದೆ ಕೆಟ್ಟ ರಕ್ತ ದೇಹದಲ್ಲಿ ಹರಿಯುತ್ತಾ ಸಾಕಷ್ಟು ರೋಗರುಜಿನಗಳಿಗೆ ಕಾರಣವಾಗುವಂತೆ ಸಮಾಜದಲ್ಲಿ ಭ್ರಷ್ಟಾಚಾರವು ಕೂಡಾ ಸಮಾಜದ ಸ್ವಾಸ್ಥö್ಯವನ್ನು ಹಾಳು ಮಾಡುತ್ತಿದೆ. ಎತ್ತಿಗೆ ಮೂಗುದಾರ ಹಿಡಿದಂತೆ ಇಲ್ಲಿಯು ಕೂಡ ದಕ್ಷ ಆಡಳಿತದ ಕೊರತೆ ಇದೆ. 

 ಭ್ರಷ್ಟಚಾರವು ಸಾಮಾನ್ಯವಾಗಿ ತನ್ನ ಕುಟುಂಬ ತಾನು ಇರುವ ವ್ಯಕ್ತಿಗೆ ಇದರ ಅರಿವು ಇರುವುದಿಲ್ಲ, ಆದರೆ ದಿನನಿತ್ಯ ಬೆಳಗಾದರೆ ಸಾಕು ಕೋರ್ಟ ಕಛೇರಿ ಅಲೆದಾಡುವ ಬಡ ವ್ಯಕ್ತಿಗೆ ಇದರಿಂದ ಜೀವ ಮತ್ತು ಜೀವನಕ್ಕೆ ಹಾನಿಯಾಗುತ್ತಿದೆ.  

 ಮೊದಲಿಗೆ ಸಾಮಾನ್ಯವಾಗಿ ಭ್ರಷ್ಟಾಚಾರವೆಂದರೆ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಇತ್ತು. ಆದರೆ ಎಲ್ಲಾ ಕ್ಷೇತ್ರದಲ್ಲಿ ತಲೆ ಎತ್ತಿ ನಿಂತು ವೇಗವಾಗಿ ಬೆಳೆಯುತ್ತಿದೆ. ಅದರ ವೇಗ ಎಷ್ಟಿದೆ ಎಂದರೆ ಯಾವುದು ಭ್ರಷ್ಟಾಚಾರ, ಯಾರು ಭ್ರಷ್ಟರು, ಯಾವ ರೀತಿಯ ಭ್ರಷ್ಟರು ಎನ್ನುವುದು ತಿಳಿಯುತ್ತಿಲ್ಲ. ಇಡೀ ವ್ಯವಸ್ಥೆ, ತಮ್ಮ ಸ್ವಾರ್ಥ, ಲಾಭಕ್ಕಾಗಿ, ಜಾತಿ, ಸ್ವಜನ ಪಕ್ಷಪಾತ, ಪ್ರಭಾವ ಎಲ್ಲವನ್ನು ಬಳಸಿಕೊಂಡು ಮೃಷ್ಟಾನ್ನ ಭೋಜನದಂತೆ ಭ್ರಷ್ಟರ ಹೊಟ್ಟೆ ಸೇರುತ್ತಿದೆ. 

ಕೇವಲ ಚುನಾವಣೆ, ನಿವೇಶನ ಖರೀದಿ, ಉದ್ಯೋಗ ಈ ಕ್ಷೇತ್ರಗಳಲ್ಲಿ ಮಾತ್ರ ಭ್ರಷ್ಟಾಚಾರ ಇತ್ತು. 

ಮೊದಲು ಲಂಚ ಕೇಳುವಾಗ ಒಂದು ಭಯ ಇತ್ತು, ಈಗ ರೋಷಾವೇಷ ಮುಚ್ಚು ಮರೆಯಿಲ್ಲದೆ ಯಾರ ಅಂಜಿಕೆ ಇಲ್ಲದೆ ಲಂಚ ಕೇಳುವುದು ಸರ್ವೆ ಸಾಮಾನ್ಯವಾಗಿದೆ.  

 ಬಹಳಷ್ಟು ಅನಾಗರಿಕ ವರ್ತನೆ ಕಾಣುತ್ತಿರುವುದೇ ಈ ಭ್ರಷ್ಟಾಚಾರದಿಂದಾಗಿ. ಇದರಿಂದಾಗಿಯೇ ಸರ್ಕಾರಗಳೇ ಉರುಳುತ್ತವೆ, ಸಂಬAಧಗಳೇ ನಾಶವಾಗುತ್ತದೆ, ಕೊಲೆಗಳು - ವಂಚನೆಗಳು ನಿರಂತರವಾಗಿ ನಡೆಯುತ್ತವೆ..... 

  ಇದು ಬಗೆಹರಿಯದ ಸಮಸ್ಯೆಯಾಗಿದೆ. ಯಾವುದೇ ಕಾನೂನು ಅಥವಾ ಮೇಲ್ವಿಚಾರಣೆ ಅಥವಾ ಅದರ ಮೇಲೆ ಇನ್ನೊಂದು ಹೊಸ ಕಠಿಣ ಶಿಕ್ಷೆ ಇವೆಲ್ಲವೂ ಇದೆ. ಆದರೂ ಕೂಡಾ ಮಾನವ ಇವೆಲ್ಲವನ್ನು ಮೆಟ್ಟಿ ನಿಲ್ಲುತ್ತಿದ್ದಾನೆ. 

 ನೈತಿಕ, ಮಾನವೀಯ ಮೌಲ್ಯಗಳನ್ನು ನಮ್ಮೊಳಗೆ ಬೆಳೆಸುವುದು, ನಮ್ಮ ಕೈಲಾದಷ್ಟು ಒಳ್ಳೆಯತನವನ್ನು ಮಾಡುವುದು, ಕೆಟ್ಟ ಹಣದ ಸಂಪಾದನೆಯನ್ನು ಕಡಿಮೆ ಮಾಡಿಕೊಂಡು ಕಾಯಕದಿಂದ ಬಂದ ಹಣದಲ್ಲಿ ಮಾತ್ರ ಜೀವನ ಸಾಗಿಸುವುದು. 

  ಚುನಾವಣಾ ಸಂದರ್ಭದಲ್ಲಿ ನಮ್ಮ ಒಂದು ವೋಟು ವ್ಯಾಮೋಹಕ್ಕೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಹಾಕಬೇಕು...... ಜಾತಿ ಸಂಘಟನೆ ಅಥವಾ ಸಮಾವೇಶಗಳಿಂದ ದೂರವಿದ್ದು, ಜ್ಯಾತ್ಯಾತೀತ ಮನೋಭಾವದಿಂದ ಬೆಳೆಯುವುದು. 

 ಭ್ರಷ್ಟಾಚಾರ ಈ ವ್ಯವಸ್ಥೆಯಲ್ಲಿ ಹೆಚ್ಚಾಗಿದೆ, ಎಲ್ಲರೂ ಮಾಡುತ್ತಾರೆ ಎನ್ನುವ ಮನಸ್ಥಿತಿಯನ್ನು ಮೊದಲು ಬಿಡಬೇಕು. ನಮ್ಮದಲ್ಲದ ಇತರರ ಹಣಕ್ಕೆ ದುರಾಸೆ ಪಡುವುದು ಅತಿ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ. 

 ಹೀಗೆ ಇನ್ನು ಹಲವಾರು ಕ್ರಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮತ್ತು ಅದನ್ನು ಇತರರಿಗೂ ಕೂಡ ಮನವರಿಕೆ ಮಾಡಿ ಕೊಡುವ ಮೂಲಕ ಕನಿಷ್ಠ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಸಾಮಾನ್ಯ ಜನರು ನಿಯಂತ್ರಿಸಬಹುದು.

 ಇನ್ನು ರಾಜಕಾರಣ ಗಳು, ಅಧಿಕಾರಿಗಳು, ಇತರ ವೃತ್ತಿಪರರು, ಉದ್ಯಮಿಗಳು ಭ್ರಷ್ಟಾಚಾರವನ್ನು ನೇರವಾಗಿ ಮಾಡುತ್ತಾ ಸಮಾಜ ಕಂಟಕರಾಗುತ್ತಿದ್ದಾರೆ. ಅವರ ವಿರುದ್ಧ ನಮ್ಮ ಕೈಲಾದ ಮಟ್ಟಿಗೆ ಧ್ವನಿ ಎತ್ತುವ ಮೂಲಕ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ.  

ನಮ್ಮ ಮುಂದಿನ ಮಕ್ಕಳ ಭವಿಷ್ಯ ಮತ್ತಷ್ಟು ಭ್ರಷ್ಟಗೊಂಡು ಅವರಲ್ಲಿ ಜೀವನೋತ್ಸಾಹವೇ ಇಲ್ಲದಂತಾಗಬಹುದು, ಅಸಹಾಯಕತೆ ಮತ್ತು ನಿರಾಸೆ ಕಾಡಬಹುದು. ಅದಕ್ಕೆ ಮೊದಲೇ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.