ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಳದಡಗಿಯಲ್ಲಿ ಮಹಾತ್ಮರ ಜಯಂತಿ ಆಚರಣೆ.
(ವಡಗೇರಾ ತಾಲೂಕ ವರದಿಗಾರರು ಮಹಾದೇವಪ್ಪ ಗಂಗಣ್ಣೋರ್)
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಳದಡಗಿಯಲ್ಲಿ ಮಹಾತ್ಮರ ಜಯಂತಿ ಆಚರಣೆ.
ಯಾದಗಿರ/ವಡಗೇರಾ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಳದಡಗಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿಅವರ ಅವರ ಜನುಮದಿನವನ್ನು ಆಚರಿಸಲಾಯಿತು. ಅವರ ಆದರ್ಶ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಉತ್ತಮ ಪ್ರಜೆಗಳು ಆಗಬೇಕೆಂದು ಪ್ರಭಾರ ಮುಖ್ಯ ಗುರುಗಳು ಶ್ರೀ ಬನಶಂಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕರಾದ ಮಹಾದೇವ ರವಿಶಂಕರಯ್ಯ, ಶರಣಪ್ಪ, ಹಾಗೂ ವಿದ್ಯಾರ್ಥಿಗಳು, ಗ್ರಾಮದ ಯುವಕರು, ಗಣ್ಯರು ಭಾಗವಹಿಸಿದ್ದರು.