ಈಡಿಗ - ಬಿಲ್ಲವ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಲು ಡಿಕೆಶಿಗೆ ಒತ್ತಾಯ

ಈಡಿಗ - ಬಿಲ್ಲವ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಲು ಡಿಕೆಶಿಗೆ ಒತ್ತಾಯ

ಈಡಿಗ - ಬಿಲ್ಲವ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಲು ಡಿಕೆಶಿಗೆ ಒತ್ತಾಯ

ಬಿ..ಕೆ ಹರಿಪ್ರಸಾದ್, ಬೇಳೂರು ಗೋಪಾಲಕೃಷ್ಣ ರಿಗೆ ಸಚಿವ ಸ್ಥಾನಕ್ಕೆ ಪರಿಗಣಿಸಿ

ಕಲಬುರಗಿ : ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಸಚಿವ ಸಂಪುಟ ರಚನೆ ಮಾಡುವ ಸಂದರ್ಭದಲ್ಲಿ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳನ್ನು ಪ್ರತಿನಿಧಿಸುವ ಜನಾಂಗಕ್ಕೆ ಎರಡು ಸಚಿವ ಸ್ಥಾನ ನೀಡಿ ನ್ಯಾಯ ನೀಡಬೇಕು ಎಂದು ಚಿತ್ತಾಪುರ ತಾಲೂಕು ಕರದಾಳ್ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಹಾಗೂ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ಡಿ.ಕೆ ಶಿವಕುಮಾರ್ ಅವರಿಗೆ ಒತ್ತಾಯಿಸಿದೆ. 

     ರಾಜ್ಯ ಸರಕಾರದಲ್ಲಿ ರಚನೆಯಾಗುವ ನೂತನ ಸಚಿವ ಸಂಪುಟದಲ್ಲಿ ಈ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಪ್ರಾತಿನಿಧ್ಯ ನೀಡಲು ಈ ಹಿಂದೆ ಬಿಜೆಪಿ ಸರಕಾರ ನೀಡಿದಂತೆ ಎರಡು ಸಚಿವ ಸ್ಥಾಗಳನ್ನು ನೀಡಿ ನ್ಯಾಯ ಒದಗಿಸಬೇಕು. ಇದ್ದ ಸಚಿವರನ್ನು ಕೈ ಬಿಟ್ಟು ನೂತನ ಸಚಿವರನ್ನು ನೇಮಕ ಮಾಡುವ ಪ್ರಸ್ತಾಪ ಇರುವುದರಿಂದ ಸಮಾಜದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ ಬಿ.ಕೆ ಹರಿಪ್ರಸಾದ್ ಮತ್ತು ಬೇಳೂರು ಗೋಪಾಲಕೃಷ್ಣ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿದೆ. 

   ಕರಾವಳಿ ಕರ್ನಾಟಕದಿಂದ ಬಿಲ್ಲವ ಸಮುದಾಯವನ್ನು ಪ್ರತಿನಿಧಿಸುವ ಬಿ.ಕೆ ಹರಿಪ್ರಸಾದ್ ಹೈಕಮಾಂಡ್ ನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಪಕ್ಷಕ್ಕಾಗಿ ಅವಿರತವಾಗಿ ದುಡಿದಿದ್ದಾರೆ ಹಾಗೂ ಈಡಿಗ ಸಮುದಾಯದಿಂದ ಮಲೆನಾಡನ್ನು ಪ್ರತಿನಿಧಿಸುವ ಬೇಳೂರು ಗೋಪಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹೆಜ್ಜೆಯಲ್ಲಿ ಸಮಾಜದಲ್ಲಿ ಗುರುತಿಸಿಕೊಂಡವರು ಹಾಗೂ ನಾಲ್ಕು ಬಾರಿ ಶಾಸಕರಾಗಿ ಗೆದ್ದು ಬಂದವರು. ಇವರಿಬ್ಬರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿ ಹಿಂದುಳಿದ ಸಮಾಜಕ್ಕೆ ನ್ಯಾಯ ಕಲ್ಪಿಸಬೇಕಾಗಿದೆ ಮತ್ತು ಅತ್ಯಂತ ಹಿಂದುಳಿದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್, ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ ಕಡೇಚೂರ್, ಕುಪೇಂದ್ರ ಗುತ್ತೇದಾರ್ ನಾಗೂರ್,ತಿಮ್ಮಪ್ಪ ಗಂಗಾವತಿ, ಸುರೇಶ ಗುತ್ತೇದಾರ್ ಮಟ್ಟೂರ್, ರಾಜೇಶ್ ಡಿ.ಗುತ್ತೇದಾರ್,

ಪ್ರವೀಣ್ ಜತ್ತನ್ , ದಯಾನಂದ ಪೂಜಾರಿ ಮೈಖಾನ, ಪಂಚಮಿ ಸಂತೋಷ್ ಪೂಜಾರಿ ,ಪ್ರದೀಪ್ ಪೂಜಾರಿ, ಶರಣಯ್ಯ ಗುತ್ತೇದಾರ್ ಕೊಂಚೂರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್,

ಮಹೇಶ್ ಯರಗೋಳ, ಸಂತೋಷ್ ಚೌಧರಿ , ಕಾಶಿನಾಥ್ ಗುತ್ತೇದಾರ್ ಚಿತ್ತಾಪುರ, ಮಲ್ಲಣ್ಣ ಜೀವಣಗಿ, ಅನಿಲ್ ಯರಗೋಳ,ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಗುತ್ತೇದಾರ್, , ಶಿವಯ್ಯ 

ಪೇಟಶಿರೂರು, ಬಿಜಿ ಶಕ್ತಿ ಪೀಠದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಗುಂಡಾನೂರು, ಟ್ರಸ್ಟಿಗಳಾದ ವಿನೋದ್ ಗುತ್ತೇದಾರ್, ಸುರೇಶ್ ಗುತ್ತೇದಾರ್ ಕರದಾಳ, ಮತ್ತಿತರರು ಒತ್ತಾಯಿಸಿದ್ದಾರೆ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಡಿಸಿಎಂ ಸ್ಥಾನ ಈಡಿಗರಿಗೆ ನೀಡಲು ಡಾ.ಪ್ರಣವಾನಂದ ಶ್ರೀಗಳ ಹೇಳಿಕೆಗೆ ಬೆಂಬಲ*

ನೂತನ ಸಚಿವ ಸಂಪುಟದಲ್ಲಿ ಡಿಸಿಎಂ ಹುದ್ದೆ ನೀಡುವಾಗ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳನ್ನು ಪ್ರತಿನಿಧಿಸುವ ಒಬ್ಬರನ್ನು ಗುರುತಿಸಿ ಸ್ಥಾನ ನೀಡುವಂತೆ ಕರೆದಾಳ ಶಕ್ತಿ ಪೀಠದ ಪೂಜ್ಯ ಡಾ. ಪ್ರಣವಾನಂದ ಶ್ರೀಗಳ ಹೇಳಿಕೆಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಈ ಹಿಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ನಂತರ ಇದುವರೆಗೆ ಈ ಸಮುದಾಯದಿಂದ ಡಿಸಿಎಂ ಆಗಲಿ ಅಥವಾ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನೂ ಪರಿಗಣಿಸದೆ ಇರುವುದರಿಂದ ಈ ಬಾರಿ ಡಿಸಿಎಂ ಹುದ್ದೆಯನ್ನಾದರೂ ನೀಡಬೇಕು ಎಂದು ಒತ್ತಾಯಿಸಲಾಗಿದೆ.