ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಜನ್ಮದಿನಾಚರಣೆ

ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಜನ್ಮದಿನಾಚರಣೆ

ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಜನ್ಮದಿನಾಚರಣೆ

ಗುರುಮಿಠಕಲ್, ಜೂ.10:ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 60ನೇ ಜನ್ಮದಿನವನ್ನು ಗುರುಮಿಠಕಲ್ ತಾಲೂಕು ಘಟಕದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಾಲೂಕು ಅಧ್ಯಕ್ಷ ಶರಣಬಸಪ್ಪ ಎಲ್ಲೇರಿ ಅವರ ನೇತೃತ್ವದಲ್ಲಿ ಎಲ್ಲೇರಿ ಗ್ರಾಮದ ನವ ನಂದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 200 ಸಸಿಗಳನ್ನು ನೆಡುವುದರೊಂದಿಗೆ 200 ವಿದ್ಯಾರ್ಥಿಗಳಿಗೆ ಕನ್ನಡ ಅಂಕಲಿಪಿ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶರಣಬಸಪ್ಪ ಎಲ್ಲೇರಿ, ಕನ್ನಡ ನಾಡು-ನುಡಿಗಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹೋರಾಟ ನಡೆಸುತ್ತಿರುವ ಟಿ.ಎ. ನಾರಾಯಣಗೌಡ ಅವರ ಸೇವೆ ಕನ್ನಡಿಗರಿಗೆ ಮಾದರಿಯಾಗಿದೆ. ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳು ಹಾಗೂ ಯುವಕರ ಉದ್ಯೋಗಕ್ಕಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರಿಗೆ ದೇವರು ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಕನ್ನಡದ ಪರ ಹೋರಾಟ ಮುಂದುವರಿಸುವ ಶಕ್ತಿ ನೀಡಲೆಂದು ಹಾರೈಸಿದರು. ಅಲ್ಲದೆ ಕನ್ನಡ ಶಾಲೆಗಳ ಉಳಿವು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳ ಒದಗಿಕೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನವ ನಂದಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಬಸವರಾಜಗೌಡ ಶಿವರಾಜ್, ಸೋಮನಾಥ್ ರೆಡ್ಡಿ ಬೋರೆಡ್ಡಿ, ಶಂಕ್ರಪ್ಪಗೌಡ ಶಿವರಾಯ್, ಡಾ. ಸಿದ್ದಲಿಂಗರೆಡ್ಡಿ ಕಂದುಕೂರು, ಪ್ರಕಾಶ್ ಪಾಟೀಲ್ ಜೈಗ್ರಾಮ್, ತಾಲೂಕು ಪ್ರಧಾನ ಕಾರ್ಯದರ್ಶಿ ಮೌನೇಶ್ ಮಾದ್ವಾರ್, ದೇವಸಿಂಗ್, ಜಗದೀಶ್ ನಸಲುವಾದಿ, ನಗರಾಧ್ಯಕ್ಷ ಶರಣು ಮೇಧ, ವೆಂಕಟೇಶ್ ಚಿಟ್ಕಂಪಳ್ಳಿ, ಭೀಮಾಶಂಕರ ಗಣಪೂರ ಸೇರಿದಂತೆ ಹಲವಾರು ಕರವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.