ನಿಸರ್ಗದ ರಕ್ಷಣೆ ನಮ್ಮೆಲ್ಲರ ಹೊಣೆ: ಅನಿತಾ ವಳಕೇರಿ
ನಿಸರ್ಗದ ರಕ್ಷಣೆ ನಮ್ಮೆಲ್ಲರ ಹೊಣೆ: ಅನಿತಾ ವಳಕೇರಿ
ಕಲಬುರಗಿ. ಜೂ. 5- ಪ್ರತಿ ಮನೆಗೊಂದು ಸಸಿ ನೆಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಹಾಳಾಗುತ್ತಿರುವ ಪ್ರಕೃತಿಯನ್ನು ಉಳಿಸಿಕೊಳ್ಳುವುದು ಇಂದಿನ ಯುವಕರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಸಸಿ ನೆಟ್ಟು ನಿಸರ್ಗವನ್ನು ಕಾಪಾಡಿಕೊಂಡು ಹೋಗಬೇಕೆಂದು ಜಿ. ಪಂ. ಮಾಜಿ ಉಪಾಧ್ಯಕ್ಷರು ಅನಿತಾ ಪವನಕುಮಾರ ವಳಕೇರಿ ಹೇಳಿದರು.
ನಗರದ ಹೊರವಲಯದಲ್ಲಿರುವ ತೇಲ್ಕರ್ ಬಡಾವಣೆ ನಂದಿಕೂರ್ ಭಾರತ ಸೇವಾದಳದ ಕಲ್ಬುರ್ಗಿ ಜಿಲ್ಲಾ ಘಟಕ ಹಾಗೂ ಶ್ರೀ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರದ ಸಹಕಾರ ನಿಯಮಿತ ( ರಿ ) ಹಮ್ಮಿಕೊಂಡಿರುವ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ, ಮುಂದಿನ ಭವಿ ಷ್ಯತ್ತನಲ್ಲಿ ಆಮ್ಲಜನಕದ ಕೊರತೆ ಉಂಟಾಗಬಹುದು. ಈಗಲೇ ನಾಗರಿಕ ಸಮಾಜ ಎಚ್ಚೆತ್ತುಕೊಂಡು ಅತಿ ಹೆಚ್ಚು ಸಸಿಗಳನ್ನು ನೆಡುದರೊಂದಿಗೆ ಕಾಡನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ನಂದಿಕೂರು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಪವನಕುಮಾರ ಬಿ ವಳಕೇರಿಯವರು, ಕಾಡು ಮತ್ತು ನಾಡು ಒಂದೇ ನಾಣ್ಯದ ಎರಡು ಮುಖಗಳು. ನಾವು ವಾಸಿಸುವ ನಾಡನ್ನು ಎಷ್ಟು ಜವಾಬ್ದಾರಿಯಿಂದ ರಕ್ಷಣೆ ಮಾಡುತ್ತೇವೆಯೋ ಅಷ್ಟೇ ಜಾಣ್ಮೆಯಿಂದ ಕಾಡನ್ನು ಸಹ ರಕ್ಷಣೆ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ಶಿವಲಿಂಗ ಶರಣರು ನಂದಿಕೂರ pಸಾನಿಧ್ಯ , ಭಾರತ ಸೇವಾದಳದ ಜಿಲ್ಲಾ ಸಂಘಟಿಕರಾದ ಚಂದ್ರಶೇಖರ ಜಮಾದಾರ, ಶ್ರೀಮತಿ ರೇಣುಕಾದೇವಿ ಗಣಪತಿ ಬದಲಾದ ಮಾಜಿ ಅಧ್ಯಕ್ಷರು ಗ್ರಾ ಪಂ ಬಬಲಾದ ( IK ), ಲಕ್ಷ್ಮಣ ಪೂಜಾರಿ, ಹೂವಣ್ಣ ಗೌಡ, ಶಾಖಿಲ್ ಉತ್ತನಾಳ, ಸಂಧ್ಯಾಕಿರಣ ವರುಣ, ವೈಭವ ಬಬಲಾದ, ಅಂಜುಬಾಯಿ ಚವ್ಹಾಣ , ವಿಠ್ಠಬಾಯಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
