ಟೆಂಗಳಿ ಕಸಾಪ ವಲಯ ಘಟಕದಲ್ಲಿ ಒಡೆಯರ್ ಜಯಂತಿ ಆಚರಣೆ
ಟೆಂಗಳಿ ಕಸಾಪ ವಲಯ ಘಟಕದಲ್ಲಿ ಒಡೆಯರ್ ಜಯಂತಿ ಆಚರಣೆ
ಕನ್ನಡವೇ ರಾಜ್ಯ ಭಾಷೆ ಮಾಡಿದ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ -ಶಿವರಾಜ ಅಂಡಗಿ
೧೯೧೩ ರಲ್ಲಿ ಕೋರ್ಟ್, ಸರ್ಕಾರಿ ಕಛೇರಿ ಎಲ್ಲಾ ಕಡೆ ಕನ್ನಡವೇ ಆಡಳಿತ ಭಾಷೆ ಮಾಡಿ ಆದೇಶ ಹೊರಡಿಸಿ, ಕನ್ನಡ ಕಾಯೋಕೆ ಕನ್ನಡ ಸಾಹಿತ್ಯ ಪರಿಷತ್ ಹುಟ್ಟು ಹಾಕಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಟ್ಟಡ ಕಟ್ಟಿಸಿದ ರಾಜರೇ,ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಪ್ರಮುಖರಾದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು.
ಇಂದು ದಿನಾಂಕ: ೦೪-೦೬-೨೦೨೬ ರಂದು ಬೆಳಿಗ್ಗೆ ಟೆಂಗಳಿ ಕಸಾಪ ವಲಯ ಘಟಕದ ವತಿಯಿಂದ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಒಡೆಯರ್ರವರ ಕನ್ನಡ ನಾಡಿಗೆ ನೀಡಿದ ಅಪಾರ ಕೊಡುಗೆ ಎನ್ನುತ್ತಾ, ಕನ್ನಡ ಪುಸ್ತಕ ಮುದ್ರಣಕ್ಕೆ ಸಹಾಯ, ಲೇಖಕರಿಗೆ ವಿದ್ಯಾರ್ಥಿ ವೇತನ, ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ, ನಡೆಸುವಂತಹ ಯೋಜನೆಯಿಂದಲೆ ಕನ್ನಡ ಭಾಷೆಗೆ ಮಹತ್ವ ಕೊಟ್ಟಿರುವವರೇ ಒಡೆಯರ್ರವರು ಎಂದು ಮಾತನಾಡಿದರು.
ಪ್ರಾರಂಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶರಣಬಸಪ್ಪ ಮುನೊಳೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ಟೆಂಗಳಿ ಕಸಾಪ ವಲಯ ಘಟಕದ ಪದಾಧಿಕಾರಿಗಳಾದ ರಾಜು ಪಟ್ಟೇದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಶಿಕ್ಷಕರಾದ ಶರಣಬಸಪ್ಪ ಎಂ. ಧನೊಜಿ ಸ್ವಾಗತಿಸಿದರು, ಅನುರಾಧಾ ನಾಯಕ ವಂದಿಸಿದರು, ಉದಯಕುಮಾರ ಪಟ್ಟೇದ, ಜಗು ಪಟ್ಟೇದ, ಭಾರತಿ ಎಸ್, ಅರವಿಂದ ಚವ್ಹಾಣ ಉಪಸ್ಥಿತರಿದ್ದರು.
ಫೋಟೊ: ಟೆಂಗಳಿ ಕಸಾಪ ವಲಯ ಘಟಕದಿಂದ ಒಡೆಯರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ,
ಶಿವರಾಜ ಅಂಡಗಿ, ಶರಣಬಸಪ್ಪ ಮುನೊಳೆ,ರಾಜು ಪಟ್ಟೇದ,ಶರಣಬಸಪ್ಪ ಎಂ. ಧನೊಜಿ, ಅನುರಾಧಾ ನಾಯಕ, ಉದಯಕುಮಾರ ಪಟ್ಟೇದ, ಜಗು ಪಟ್ಟೇದ, ಭಾರತಿ ಎಸ್, ಅರವಿಂದ ಚವ್ಹಾಣ ಉಪಸ್ಥಿತರಿದ್ದರು.
