ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನಡೆಯಬೇಕು : ನೀಲಾಂಬಿಕಾ

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನಡೆಯಬೇಕು : ನೀಲಾಂಬಿಕಾ

   ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನಡೆಯಬೇಕು : ನೀಲಾಂಬಿಕಾ 

ಕಲಬುರಗಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಇದ್ದು, ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಶಕ್ತಿ ಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯಬೇಕು ಎಂದು ಪ್ರೊ.ನೀಲಾಂಬಿಕಾ ಪೊಲೀಸ್ ಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ನಿಂದ ಏರ್ಪಡಿಸಿದ್ದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ, ಕವಿಗೋಷ್ಠಿ ಹಾಗೂ ಕಲಬುರಗಿ ಕಣ್ಮಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಹಿತ್ಯ ತನ್ನದೇ ಸ್ಥಾನ ಹೊಂದಿದ್ದು, ಕಸಾಪದಂತ ಸಂಸ್ಥೆಯಲ್ಲಿ ಅಧಿಕಾರ ದೊರಕಿದರೆ ಇನ್ನಷ್ಟು ಪ್ರಾಧಾನ್ಯತೆ ದೊರೆಯಲಿದೆ ಎಂದರು.

ನಗರದ ಪ್ರತಿಷ್ಠಿತ ಕದಳಿ ಸಿರಿ ಆಸ್ಪತ್ರೆ ವೈದ್ಯ ಡಾ.ಭಾಗ್ಯಶ್ರೀ ಪಾಟೀಲ್ ಮಾತನಾಡಿ, ಮುಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದು ಸಾಧನೆ ಮಾಡಬೇಕು. ಅದಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಧೈರ್ಯದಿಂದ ಮುನ್ನುಗ್ಗಿದ್ದಾಗ ಪದವಿ ಮತ್ತು ಗೌರವ, ಅಧಿಕಾರ ಪಡೆಯಲು ಸಾಧ್ಯ ಎಂದರು.

ನಾಲ್ಕು ಚಕ್ರ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೆ ಮಹಿಳೆಯರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಅಲಂಕರಿಸದಿರುವುದಕ್ಕೆ ಖೇದಕರ. ಮುಂದಿನ ದಿನಗಳಲ್ಲಿ ಕಸಾಪ ಕೇಂದ್ರ, ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಮಹಿಳೆಯರು ಸ್ಪರ್ಧಿಸಬೇಕು ಎಂದರು. ಪ್ರಮಿಳಾ ಎಮ್‌ಕೆ ಉಪ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ ಮಾತನಾಡಿ

ಸಾಹಿತೀಕವಾಗಿ ಚರ್ಚೆ ಕಮ್ಮಟಗಳು‌ ನಡೆಯಬೇಕು. ವಿದ್ಯಾರ್ಥಿಗಳಲ್ಲಿ‌ ಕನ್ನಡ ಭಾಷೆ ಜಾಗೃತಗೋಳಿಸಬೇಕು

ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಎಂ.ಕೆ, ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ದಿಶಾ ಕಾಲೇಜಿನ ಅಧ್ಯಕ್ಷ ಶಿವಾನಂದ ಖಜೂರ್ಗಿ, ಪ್ರಮುಖರಾದ ರಮೇಶ ತಿಪನೂರ, ಉಮೇಶ ಶೆಟ್ಟಿ, ಶರಣು ಪಾಟೀಲ್ ಇತರರಿದ್ದರು. ಅಂಬುಜಾ ಎಂ.ಡಿ. ನಿರೂಪಣೆ ಮಾಡಿದರು.

ಶ್ರೇಷ್ಠ ಕನ್ನಡಿ ಪ್ರಶಸ್ತಿ ಪ್ರದಾನ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರಿಗೆ ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಡಾ.ಸೀಮಾ ಪಾಟೀಲ್ (ಶಿಕ್ಷಣ), ರೇಣುಕಾ ಹೆಳವರ (ಪೊಲೀಸ್ ಇಲಾಖೆ), ಮಂಜುಳಾ ಬಿರಾದಾರ (ಸಹಕಾರ ಕ್ಷೇತ್ರ), ಬಾಬುಮೀಯ ಪುಲಾರಿ (ಸಾಹಿತ್ಯ ಮತ್ತು ಸಂಟನೆ), ರವಿ ದೇಗಾಂವ (ಕನ್ನಡ ಪರ ಹೋರಾಟಗಾರ), ಬಿ.ಎಚ್.ನಿರಗುಡಿ (ಸಾಹಿತ್ಯ), ಕಲ್ಯಾಣರಾವ ಶೀಲವಂತ (ಶಿಕ್ಷಣ), ಅಂಬುಜಾ ಮಳಖೇಡಕರ್ (ಸಾಹಿತ್ಯ), ಶಾಂತಮಲ್ಲಪ ಕರೆಕಲ್ (ಸಾಹಿತ್ಯ), ರೇಣುಕಾ ಸರಡಗಿ (ಮಹಿಳಾ), ಪವನಕುಮಾರ ವಳಕೇರಿ (ಸಾಮಾಜಿಕ) ಅವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿಗೋಷ್ಠಿಯಲ್ಲಿ ರಾಜಕುಮಾರ ಉದನೂರ, ಕೆ.ಗಿರಿಮಲ್ಲ. ಡಾ.ಪ್ರವಿಣ ಸುಲ್ತಾನ್, ಡಾ.ರಾಜಶೇಖರ ಮಾಂಗ್, ರೇಣುಕಾ ಡಾಂಗೆ, ಬಾಬು ಜಾಧವ್ ಕವನ ವಾಚಿಸಿದರು.

ಸಾಹಿತ್ಯ ಸಂಭ್ರಮಿಸುವ ಆಶಯ

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಕವಿಗಳು, ಸಾಹಿತಿಗಳು ಸಾಹಿತ್ಯ ನಿಂತ ನೀರಾಗಬಾರದು, ಯುವ ಸಾಹಿತಿಗಳಿಗೆ ಪ್ರೋತ್ಸಾಹ ದೊರೆಯಬೇಕು, ಜಾತಿಯ ಲೇಪನ ಹಚ್ಚಬಾರದು, ಗುಂಪುಗಾರಿಕೆ ಇರಬಾರದು, ಮಹಿಳೆಯರಿಗೂ ಆದ್ಯತೆ ದೊರೆಯಬೇಕು, ಕಲಬುರಗಿ ಜಿಲ್ಲೆಯಲ್ಲಿ ಮಹಿಳಾ ಅಧ್ಯಕ್ಷತೆ ದೊರೆಯಬೇಕು, ರಾಜಕೀಯ ಮಿಶ್ರಣ ಆಗದೇ ಸಾಹಿತ್ಯ ಸಂಭ್ರಮಿಸುವ ಕೆಲಸವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.