ಚಿಂಚೋಳಿ : ತಾ. ಪಂ. ಗೆ ಶಾಶ್ವತ ಕಾರ್ಯನಿರ್ವಾಹಕ ಅಧಿಕಾರಿಗೆ ನಿಯೋಜಿಸಲು ಶರಣು ಪಾಟೀಲ್ ಮೋತಕಪಳ್ಳಿ ಆಗ್ರಹ

ಚಿಂಚೋಳಿ : ತಾ. ಪಂ. ಗೆ ಶಾಶ್ವತ ಕಾರ್ಯನಿರ್ವಾಹಕ ಅಧಿಕಾರಿಗೆ ನಿಯೋಜಿಸಲು ಶರಣು ಪಾಟೀಲ್ ಮೋತಕಪಳ್ಳಿ ಆಗ್ರಹ

ತಾ. ಪಂ : ಶಾಶ್ವತ ಅಧಿಕಾರಿ ನಿಯೋಜನೆಗೆ ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ

ಚಿಂಚೋಳಿ : ತಾ. ಪಂ. ಗೆ ಶಾಶ್ವತ ಕಾರ್ಯನಿರ್ವಾಹಕ ಅಧಿಕಾರಿಗೆ ನಿಯೋಜಿಸಲು ಶರಣು ಪಾಟೀಲ್ ಮೋತಕಪಳ್ಳಿ ಆಗ್ರಹ 

ಚಿಂಚೋಳಿ: ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಹುದ್ದೆಗೆ ಶಾಶ್ವತ ಅಧಿಕಾರಿಯನ್ನು ನಿಯೋಜನೆ ಮಾಡಬೇಕೆಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಆಗ್ರಹಿಸಿದ್ದಾರೆ.

ಪ್ರಕಟಣೆ ನೀಡಿರುವ ಅವರು, ಚಿಂಚೋಳಿ ಗ್ರಾಮೀಣ ಪ್ರದೇಶಗಳಿಂದ ಕುಡಿರುವ ತಾಲೂಕು ಜಿಲ್ಲೆಯಲ್ಲಿಯೇ ಅತೀ ದೊಡ್ಡ ತಾಲೂಕವಾಗಿದೆ. ಆದರೆ ತಾ. ಪಂ. ಇಲಾಖೆ ಕಾರ್ಯನಿರ್ವಾಹಕ ಹುದ್ದೆಗೆ ಕಳೆದ 15 ವರ್ಷಗಳಿಂದ ಸರಕಾರ ಶಾಶ್ವತ ಅಧಿಕಾರಿಯನ್ನೇ ನೀಡಿಲ್ಲ. ನಿರಂತರವಾಗಿ ಬೇರೆ ಇಲಾಖೆಯ ಅರ್ಹರಲ್ಲದ ಅಧಿಕಾರಿಗಳನ್ನು ಕಾರ್ಯನಿರ್ವಾಹ ಹುದ್ದೆಗೆ ನಿಯೋಜನೆ ಮಾಡಿ ಪ್ರಭಾರ ವಹಿಸಿ ಕೊಡುತ್ತಾ ಬರುತ್ತಿರುವುದು ವಿಪರ್ಯಾಸ. ಸ್ವಂತ ವೇತನದ ಮೇಲೆ ಹತ್ತು ವರ್ಷಕ್ಕೂ ಅಧಿಕ ದಿನಗಳ ಕಾಲ ಕೃಷಿ ಇಲಾಖೆಯ ನಿರ್ದೇಶಕರಿಗೆ ಹೆಚ್ಚುವರಿ ಜವಾಬ್ದಾರಿ ಕೊಡಲಾಗಿತ್ತು. ಸ್ಯಾಂಖಿಕ ಇಲಾಖೆಯ ಅಧಿಕಾರಿ ಹಲವು ವರ್ಷಗಳ ಕಾಲ ಅಧಿಕಾರ ಅನುಭವಿಸಿ ಹೊರಟ್ಟಿದ್ದ ಬಳಿಕ ಈವಾಗ ಮತ್ತೇ ಕಮಲಾಪೂರದ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಿಗೆ ಸ್ವಂತ ವೇತನದ ಮೇಲೆ ಪ್ರಭಾರ ವಹಿಸಿಕೊಡಲಾಗಿದೆ. ತಾ. ಪಂ ಕಾರ್ಯನಿರ್ವಾಹಕ ಹುದ್ದೆ ಜಿಲ್ಲಾ ಉಪ ವಿಭಾಗದ ಎಸಿ ಹುದ್ದೆಗೆ ಸರಿಸಮಾನವಾದ ಹುದ್ದೆ ಆಗಿದೆ. ಇಂತಹ ಹುದ್ದೆಯಲ್ಲಿ 15 ವರ್ಷ ಅನರ್ಹ ಅಧಿಕಾರಿಗಳೇ ನಿಯೋಜನೆಗೊಂಡು ಕಾರುಬಾರು ನಡೆಸುತ್ತಿರುವುದು ಪಾರದರ್ಶಕ ಆಡಳಿತಕ್ಕೆ ಇದು ಸರಿಯಾದ ಕ್ರಮ ಅಲ್ಲ. ಮೀಸಲು ಕ್ಷೇತ್ರ ಹೊಂದಿರುವ ಚಿಂಚೋಳಿಯಲ್ಲಿ ಹಿಂದೆ ಕಾಂಗ್ರೆಸ್ ಶಾಸಕರು, ನಂತರ ಬಿಜೆಪಿ ಶಾಸಕರು, ತದನಂತರ ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಯಾವೆಲ್ಲ ಬದಲಾವಣೆಗಳು ಆದರೂ ಚಿಂಚೋಳಿ ಇಓ ಹುದ್ದೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಕಾರ್ಯನಿರ್ವಾಹಕ ಹುದ್ದೆಗೆ ಅನಿವಾರ್ಯ ಕಾರಣಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಮಾತ್ರ ಕೆಳಹಂತದ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ಕೊಡುವುದನ್ನು ಕೇಳಿದ್ದೇವೆ ಮತ್ತು ಕಂಡಿದ್ದೇವೆ . ಆದರೆ ಚಿಂಚೋಳಿಯಲ್ಲಿನ ಪರಿಸ್ಥಿತಿ ವಿಚಿತ್ರವಾಗಿದೆ. ಕಳೆದ 15 ವರ್ಷಗಳಿಂದ ಕೆಳ ಹಂತದ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡುತ್ತಾ ಬರಲಾಗುತ್ತಿದೆ. ಇಂತಹ ಕೆಟ್ಟ ಸಂಪ್ರದಾಯಕ್ಕೆ ಈ ಕೂಡಲೇ ಪ್ರಭಾರ ಅಧಿಕಾರಿಗಳ ಹಾವಳಿಯಿಂದ ವಿಮುಕ್ತಿ ನೀಡಿ, ಶಾಶ್ವತವಾಗಿ ಪಂಚಾಯತ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಅರ್ಹ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಿಯೋಜನೆ ಮಾಡಬೇಕು. ಹಿಂದುಳಿದ ಚಿಂಚೋಳಿ ತಾಲೂಕಿನ ಅಭಿವೃದ್ಧಿ ಸಮಸ್ಯೆಯನ್ನು ಕೇವಲ ಹೇಳಿಕೆಗೆ ಸೀಮಿತಗೊಳಿಸದೇ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಾರ್ಯರೂಪಕ್ಕೆ ತರಬೇಕೆಂದು ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಅವರು ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.