ಪ್ರಶಸ್ತಿಗಳು ಸಾಧಕರಿಗೆ ಸ್ಫೂರ್ತಿ- ಬಸವರಾಜ ದೇಶಮುಖ
ಪ್ರಶಸ್ತಿಗಳು ಸಾಧಕರಿಗೆ ಸ್ಫೂರ್ತಿ- ಬಸವರಾಜ ದೇಶಮುಖ
ಕಲಬುರಗಿ: ಕನ್ನಡ ಕಲಿಯುವುದು ಕಲಿಸುವುದು ಇಂದು ತುರ್ತಾದ ಅಗತ್ಯವಿದೆ. ಸಿರಿಗನ್ನಡ ವೇದಿಕೆ ಆ ಕೆಲಸ ಮಾಡತ್ತಿದೆ. ಕನ್ನಡಕ್ಕಾಗಿ ಡಾ. ದೊಡ್ಡಪ್ಪ, ಡಾ.ಶರಣಬಸವಪ್ಪ ಅಪ್ಪ ಅವರ ಕಾರ್ಯ ಅನುಕರಣೀಯ ಇಂದು ಪ್ರಶಸ್ತಿ ಪುರಸ್ಕೃತರು ತಮ್ಮ ಸಾಧನೆಗೆ ಸಂದ ಗೌರವ ಈ
ಪ್ರಶಸ್ತಿಗಳು ಸಾಧಕರಿಗೆ ಸ್ಫೂರ್ತಿಯಾಗಲಿ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಬಸವರಾಜ ದೇಶಮುಖ ಬಣ್ಣಿಸಿದರು.
ರಂಗಾಯಣ ಸಭಾಂಗಣದಲ್ಲಿ ಸಿರಿಗನ್ನಡ ವೇದಿಕೆ ಹಮ್ಮಿಕೊಂಡ ಬುದ್ಧ- ಬಸವ- ಅಂಬೇಡ್ಕರ್ ಉಪನ್ಯಾಸ ಮತ್ತು ತ್ರಿರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಬದುಕಿನಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಕಾರ್ಯ ಮಾಡಿದವರು ಬುದ್ಧ, ಬಸವ, ಅಂಬೇಡ್ಕರ್. ಅವರ ತತ್ವಗಳನ್ನು ಅನುಸರಿಸಬೇಕೆಂದರು.
ವಿಶೇಷ ಉಪನ್ಯಾಸ ನೀಡಿದ ಚಿಂತಕಿ ಡಾ.ಜಯದೇವಿ ಗಾಯಕವಾಡ ಅವರು ನಮ್ಮ ದೇಶದ ಮೂರು ವಸಂತ ಕಂಡವರು ಬುದ್ಧ ಬಸವ ಅಂಬೇಡ್ಕರ್ ಅವರ ತತ್ವಸಿದ್ದಾಂತವು ನಮಗೆ ಮಾದರಿಯಾಗಬೇಕು. ಜಗತ್ತು ಯುದ್ಧ ಬಾಂಬುಗಳಿಂದ ತಲ್ಲಣಗೊಂಡಿದೆ ಇದಕ್ಕೆ ಉತ್ತರ ಬುದ್ಧ ಬಸವ ಅಂಬೇಡ್ಕರ್ ಎಂದರು.
ಅಧ್ಯಕ್ಷತೆವಹಿಸಿದ್ದ ಡಾ.ಗವಿಸಿದ್ಧಪ್ಪ ಪಾಟೀಲರು ಮಾತನಾಡಿ ವೇದಿಕೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಕನ್ನಡ ಕಟ್ಟುವಲ್ಲಿ ದೊಡ್ಡಪ್ಪ ಅಪ್ಪ ಮತ್ತು ಶರಣಬಸವಪ್ಪ ಅಪ್ಪ ಸಾಧನೆ ಹೇಳುತ್ತ ಬುದ್ದಬಸವ ಅಂಬೇಡ್ಕರ್ ಅವರು ಯಾವ ಕಾಲಕ್ಕೂ ಪ್ರಸ್ತುತ ಎಂದರು.
ಸಾನಿಧ್ಯ ವಹಿಸಿದ ಬೇಲೂರು ಉರಿಲಿಂಗಪೆದ್ದಿ ಮಠದ ಪೂಜ್ಯಶ್ರೀ ಡಾ.ಪಂಚಾಕ್ಷರಿ ಸ್ವಾಮೀಜಿಗಳು ಪ್ರಶಸ್ತಿ ತಗೆದುಕೊಂಡು ಮನಸ್ಸು ಕೊಡುವ ಕೈ ಸ್ವಚ್ಛವಾಗಿರಬೇಕು ಅಂದಾಗ ಪ್ರಶಸ್ತಿಗೆ ಗೌರವ. ಇಂದು ಮಹಾತ್ಮರ ತತ್ವಗಳು, ಸಂದೇಶಗಳು ಕೇವಲ ಜಾತಿಗೆ ಸಿಮಿತರಾಗಿಲ್ಲ ಅವರದ್ದು ವಿಶ್ವ ಶಾಂತಿ, ಸಮಾನತೆ, ಮಾನವೀಯತೆಗೆ ಸಂದ ಗೌರವಗಳಾಗಿವೆ ಎಂದರು. ಸಾಹಿತಿ ಶ್ರೀಮತಿ ಶಾಂತಾ ಪಸ್ತಾಪೂರ ಮಾತನಾಡಿದರು.
ಡಾ.ಪೀರಪ್ಪ ಸಜ್ಜನ, ಪ್ರಾರ್ಥನೆ ಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಸ್ವಾಗತಿಸಿದರು.
ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ಕಾರ್ಯದರ್ಶಿ ಡಾ. ಶೀಲಾದೇವಿ ಬಿರಾದಾರ ವಂದಿಸಿದರು.
ಡಾ.ಬಿ.ಕೆ.ಪಂಡಿತ, ಬಸವರಾಜ ನಂದಿಧ್ವಜ, ಡಾ. ಭೀಮಾ ಶಂಕರ ತಳವಾರ, ಡಾ.ಶಿವಪುತ್ರ ಹೊಳ್ಕರ್, ದಶರಥ ತೆಗನೂರು, ಉತ್ತಮ ದೊಡ್ಮನಿ, ಸುರೇಶ ಕೊರವಿ, ಮಲ್ಲಣ್ಣ ಸೂರ್ಯವಂಶಿ, ಶಶಿ ಚೆಂಗಟಾ, ಡಾ.ಗಾಂಧೀಜಿ ಮೊಳಕೇರಿ, ಡಾ.ಮಲ್ಲಿನಾಥ ನಿಂಬರಗಿ, ಶ್ಯಾಮ ಮಾಡಾಳ್ಯ, ಡಾ.ಶಿವಕುಮಾರ ಸಿಂಗೆ ಮತ್ತಿತರು ಇದ್ದರು.
ಬುದ್ಧರತ್ನ ಪ್ರಶಸ್ತಿ ಪುರಸ್ಕೃತರು:
ಡಾ. ನಾನಾಗೌಡ ಜಿ. ಪಾಟೀಲ
ಡಾ. ನಾಗನಾಥ ಬೆಂಡೆ,ಶ್ರೀಮತಿ ಆಶಾ ವಿ. ಹೆಗಡೆ
ಶ್ರೀ ಮಹಾಂತಯ್ಯ ಕೆ. ಮಠ,ಡಾ. ಸುದರ್ಶನ ಎನ್. ಮದನಕರ್,ಶ್ರೀಮತಿ ವಿಜಯಲಕ್ಷ್ಮೀ ಸಿ. ಸಿಂಗೋಡಿ
ಶ್ರೀ ಸುಭಾಶ ಮೊಗ,ಶ್ರೀ ಅನಿಲಕುಮಾರ ಮಂದೋಲಕರ್
ಶ್ರೀ ಆನಂದ ಚವ್ಹಾಣ,ಡಾ. ಪ್ರಕಾಶ ಜಿ. ಬಳ್ಳಾರಿ
ಶ್ರೀ ಶಮೇಶ ಎಸ್.ಕೆ.,ಡಾ. ಪ್ರಕಾಶ ಸಿ. ಪೊಲೀಸಪಾಟೀಲ
ಡಾ. ಮಹೇಶ ರುದ್ರಕರ್,ಶ್ರೀಮತಿ ಮೀನಾಕ್ಷೀ ವಾಯ್. ಕೇಸರಿ,ಭೀಮಸೇನ ಎಂ. ಗಾಯಕವಾಡ
ಬಸವರತ್ನ ಪ್ರಶಸ್ತಿ ಪರಸ್ಕೃತರು:
ಶ್ರೀ ಮಲ್ಲಯ್ಯ ಶಿವಮೂರ್ತಿಯ್ಯ ಕೋಮಾರಿ,ಡಾ. ದತ್ತಾತ್ರೇಯ ಸಿ.ಎಚ್.ಡಾ. ಶಿವಲೀಲಾ ಬಾಯಿ ಎಸ್. ಪಾಟೀಲ,ಶ್ರೀ ಮಲ್ಲಿನಾಥ ಶರಣಪ್ಪ ನಾಟೀಕಾರ,ಡಾ. ಭಾಗ್ಯಜ್ಯೋತಿ,ಶ್ರೀ ಅಶೋಕ ಅಲ್ಲಿಪುರ್ಕಾರ,ಶ್ರೀ ಬಸಪ್ಪ ಷಕಲಾಸಪಲ್ಲಿ,ಡಾ. ಅರುಣಾ ಸತೀಶಕುಮಾರ ತೆಂಗಳಿ,ಶ್ರೀಮತಿ ಸವಿತಾ ಶಿವರಾಯ ದೊಡ್ಕನಿ,ಡಾ. ವಿಶ್ವನಾಥರಡ್ಡಿ,ಡಾ.ಸುರೇಶ ಮಾಣಿಕರಾವ ಮೊಳೆ,ಶ್ರೀಮತಿ ಭಾರತಿ ತುಳಸಿರಾಮ ಚವ್ಹಾಣ,ಶ್ರೀಜಲೀ ಲ ಪಟೇಲ,ಶ್ರೀ ನಾಗರಾಜ ಬೈರಾಮಡಗಿ,ಶ್ರೀ ವಿರುಪಾ ಕ್ಷಯ್ಯ ಗಣಾಚಾರಿ,ಡಾ. ಹಣಮಂತರಾಯ ಎಂ. ಬರಗಾಲಿ ಶ್ರೀ ಪರಶುರಾಮ ಪೀರಪ್ಪ ಕೂಚಬಾಳ
ಡಾ. ಬಿ. ಆರ್. ಅಂಬೇಡ್ಕರ್ ರತ್ನ ಪ್ರಶಸ್ತಿ ಪುರಸ್ಕೃತರು:
ಡಾ.ಸಾಕೇರಾ ತನ್ನೀರ,ಶ್ರೀ ಶಿವಯೋಗಿ ದೇವನೂರ
ಡಾ. ಮಂಜು ಮಾರುತಿ ಮಾಲೇಕರ್,ಶ್ರೀ ಬಷಿರ ಅಹ್ಮದ್
ಡಾ ಮಹೇಶಕುಮಾರ ಶಿವಶರಣಪ್ಪ ಸಂಕನೂರ,ಶ್ರೀಮತಿ ಮಮತಾ ಜಾನೆ,ಡಾ ರವಿಕುಮಾರ ಏಮಾಜಿ
ಶ್ರೀಮತಿ ಸುರೇನಾಬಾನು ಎಂ,ಶ್ರೀ ಯಮನೂರಪ್ಪ
ಶ್ರೀ ಮಾರುತಿ ಪಿ. ಅಪ್ಪಣೋರ್,ಶ್ರೀಮತಿ ಲಕ್ಷ್ಮೀ ಕೆ ಕೋರೆ
ಶ್ರೀ ಅಶೋಕ ನಾಗಪ್ಪ,ಶ್ರೀ ಶಂಕರ ಎನ್ ಚಿನಮಳ್ಳಿ
ಶ್ರೀಮತಿ ಮಂಜುಳಾ ಎಂ. ಮೇತ್ರಿ,ಶ್ರೀ ಸಂಜುಕುಮಾರ ಎಸ್ .ಜಟ್ಟೆನೋರ,ಶ್ರೀ ಮಲ್ಲಿಕಾರ್ಜುನ ದೊಡ್ಡನಿ
ಡಾ. ಶ್ರೀಕಾಂತ,ಶ್ರೀ ಬಾಬು ಎ. ದೊಡಮನಿ,ಶ್ರೀಮತಿ ಮಂಗಲಾ ಜಿ. ಕುಮಟಾಕರ್ ಅವರಿಗೆ ಪ್ರದಾನ ಮಾಡಲಾಯಿತು.
