31 ರಂದು ರಂಗಾಯಣದಲ್ಲಿ ಬುದ್ಧಬಸವ ಅಂಬೇಡ್ಕರ್ ಉಪನ್ಯಾಸ,ಪ್ರಶಸ್ತಿ ಪ್ರದಾನ
31 ರಂದು ರಂಗಾಯಣದಲ್ಲಿ
ಬುದ್ಧಬಸವ ಅಂಬೇಡ್ಕರ್ ಉಪನ್ಯಾಸ,ಪ್ರಶಸ್ತಿ ಪ್ರದಾನ
ಕಲಬುರಗಿ: ರಂಗಾಯಣ ಸಭಾ ಭವನದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕವು ರವಿವಾರ ಬೆಳಿಗ್ಗೆ ೧೦ ಗಂಟೆಗೆ
ಬುದ್ಧ- ಬಸವ- ಅಂಬೇಡ್ಕರ್ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವರ್ಷಾ ಆರ್.ಜಾನೆ ಅವರು ಉದ್ಘಾಟಿಸಲಿದ್ದು,ಶರಣಬಸವೇಶ್ವರ ವಿದ್ಯಾವರ್ಧಕ ಟಸ್ಟ್ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಪ್ರಶಸ್ತಿ ಪ್ರದಾನ ಮಾಡುವರು,ಸಿಯುಕೆ ಸಹಾಯಕ ಕುಲಸಚಿವ ಡಾ.ಅಜೀಮ್ ಪಾಷಾ ಉಪನ್ಯಾಸ ನೀಡುವರು,ಚಿಂತಕಿ ಡಾ.ಜಯದೇವಿ ಗಾಯಕವಾಡ,ಗ್ರಂಥಪಾಲಕಿ ಶ್ರೀಮತಿ ಸುಜಾತ ಚಿನ್ನಾಆಶಪ್ಪ ಅತಿಥಿಗಳಾಗಿ,ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಧ್ಯಕ್ಷತೆ ಮತ್ತು ಬೇಲೂರು ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಪೂಜ್ಯಶ್ರೀ ಪಂವಾಕ್ಷರಿ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಲಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಬುದ್ಧರತ್ನ,ಬಸವರತ್ನ, ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು
ಸಿರಿಗನ್ನಡ ವೇದಿಕೆ ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಸಿದ್ಧಪ್ಪ ಹೊಸಮನಿ ಮತ್ತು ಡಾ.ಶೀಲಾದೇವಿ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
