ಡಾ. ಬಾಬಾಸಾಹೇಬ ರವರ 135ನೇ ಜಯಂತಿ : ಮೇ.26 ರಂದು ಅಂಬೇಡ್ಕರ್ ಹಬ್ಬ ಆಚರಣೆ
ಡಾ. ಬಾಬಾಸಾಹೇಬ ರವರ 135ನೇ ಜಯಂತಿ : ಮೇ.26 ರಂದು ಅಂಬೇಡ್ಕರ್ ಹಬ್ಬ ಆಚರಣೆ
ಶಹಾಬಾದ : - ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ವನ್ನು *ಅಂಬೇಡ್ಕರ್ ಹಬ್ಬ* ಎಂದು ಮೇ.26 ರಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ದಲಿತ ಮುಖಂಡ ಮರಿಯಪ್ಪ ಹಳ್ಳಿ ಮತ್ತು ಸಮಿತಿಯ ಅಧ್ಯಕ್ಷ ರಾಜೇಶ ಯನಗುಂಟಿಕರ ರವರು ತಿಳಿಸಿದರು.
ಅವರು ಡಾ.ಬಿಆರ ಅಂಬೇಡ್ಕರ ರವರ 135ನೇ ಜಯಂತ್ಯೋತ್ಸವ ಸಮಿತಿ ವತಿಯಿಂದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅಂಬೇಡ್ಕರ್ ಹಬ್ಬದ ಕುರಿತು ಮಾತನಾಡಿದರು.
ಅಂದು ಮಧ್ಯಾಹ್ನ 2 ಗಂಟಗೆ ಬಸವೇಶ್ವರರ ವೃತ್ತದಿಂದ ಹೈ ಸ್ಕೂಲ್ ಮೈದಾನದ ವರೆಗೆ (ಡಿ.ಜೆ ಹೊರತು ಪಡಿಸಿ) ಸಾಂಸ್ಕೃತಿಕ ಕಲಾ ತಂಡದಿಂದ ಹಲಗೆ,ಲೇಜಿಮ್,ಕೋಲಾಟ, ಡೊಳ್ಳಿನ ಕುಣಿತ,ಬಂಜಾರ ನೃತ್ಯ ದಂತ ಭವ್ಯವಾದ ಮೆರವಣಿಗೆಯನ್ನು ಡಿವೈಎಸ್ಪಿ ಶಂಕರಗೌಡ ಪಾಟೀಲ ಉಧ್ಘಾಟಿಸುವರು.
ಬೆಳಗ್ಗೆ ನಗರ ಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ ಧ್ವಜಾರೋಹಣ ಮಾಡುವರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಅಣದೂರಿನ ಪೂಜ್ಯ ಬಂತೆ ವರಜ್ಯೋತಿ ಮಹಾಥೇರೋ, ಮೈಸೂರಿನ ಪೂಜ್ಯ ಜ್ಞಾನಪ್ರಕಾಶ ಸ್ವಾಮಿಜೀ ವಹಿಸಿಕೊಳ್ಳುವರು.
ರಾಜ್ಯ ಸರಕಾರದ ಗ್ರಾಮೀಣಾಬಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಯವರು ಸಮಾರಂಭವನ್ನು ಉಧ್ಘಾಟಿಸುವರು.
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಸಮಾರಂಭದ ಜ್ಯೋತಿ ಬೆಳಗಿಸುವರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರು ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು.
ಮುಖ್ಯ ಭಾಷಣಕಾರರಾಗಿ ಕೆಪಿಸಿಸಿ ಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ರವರು ಮಾತನಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಾಜೇಶ ಯನಗುಂಟಿಕರ ವಹಿಸಿಕೊಳ್ಳುವರು.
ಅಥಿತಿಗಳಾಗಿ ರೇವು ನಾಯಕ ಬೆಳಮಗಿ, ತಿಪ್ಪಣಪ್ಪ ಕಮಕನೂರ,ಜಗದೇವ ಗುತ್ತೇದಾರ,ಡಾ.ಎಂಎ ರಶೀದ,ಪ್ರವೀಣ ಪಾಟೀಲ,ಮಜರ ಆಲಂ ಖಾನ,ಚಂದ್ರಿಕಾ ಪರಮೇಶ್ವರ,ದೇವಿಂದ್ರಪ್ಪ ಮರತೂರ,ಡಾ.ಡಿಜಿ ಸಾಗರ,ಶಿವಾನಂದ ಪಾಟೀಲ,ಡಾ.ಫಾರೂಕ ಮನ್ನೂರ,ಮರಿಯಪ್ಪ ಹಳ್ಳಿ,ಸುರೇಶ ಮೆಂಗನ ಮತ್ತು ತಾಲ್ಲೂಕ ತಹಶೀಲ್ದಾರ ನೀಲಪ್ರಭಾ ಬಬಲಾದ ಉಪಸ್ಥಿತರಿರುವರು.
ಜಯಂತೋತ್ಸವ ಸಮಾರಂಭಕ್ಕೆ ರಾಜ್ಯದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಗಣ್ಯರು ಹಾಗೂ ತಾಲ್ಲೂಕ ಅಧಿಕಾರಿಗಳ ವರ್ಗ ಭಾಗವಹಿಸಲಿದ್ದಾರೆ ಎಂದರು.
ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವದು.
ಕಾರಣ ತಾಲ್ಲೂಕಿನ ಡಾ.ಅಂಬೇಡ್ಕರ ರವರ ಅಭಿಮಾನಿಗಳು, ಮಹಿಳೆಯರು, ವಿಧ್ಯಾರ್ಥಿಗಳು ಜಾತಿ, ಧರ್ಮ ಎನ್ನದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ ರಾಜನ,ಪರಶುರಾಮ ಚಲುವಾದಿ, ಮಲ್ಲಿಕಾರ್ಜುನ ಪೋಲಿಸಪಾಟೀಲ ಉಪಸ್ಥಿತರಿದರು.
