ಚಂದಾಪೂರ್ : ಮಳೆರಾಯನ ಮನವೋಲಿಸಲು ಕತ್ತೆಗಳ ಮದುವೆ ಜರುಗಿಸಿದ ರೈತರು

ಚಂದಾಪೂರ್ : ಮಳೆರಾಯನ ಮನವೋಲಿಸಲು ಕತ್ತೆಗಳ ಮದುವೆ ಜರುಗಿಸಿದ ರೈತರು

ಚಂದಾಪೂರ್ : ಮಳೆರಾಯನ ಮನವೋಲಿಸಲು ಕತ್ತೆಗಳ ಮದುವೆ ಜರುಗಿಸಿದ ರೈತರು 

ಚಿಂಚೋಳಿ : ಮುಂಗಾರು ಬಿತ್ತನೆಯ ಬೆಳೆಗಳಾದ ಹೆಸರು, ಉದ್ದು, ಸೋಯಾ ಸೇರಿದಂತೆ ಇತರೆ ಬೆಳೆಗಳ ಫಸಲು ಪಡೆಯಲು ರೈತ ಭೂಮಿಗೆ ಫಸಲಿನ ಬಿತ್ತನೆ ಬೀಜ ಹಾಕಿ ಮಳೆರಾಯನ ಆಗಮನಕ್ಕೆ ಜಾತಕ ಪಕ್ಷಿಗಳಂತೆ ಕಾಯುತ್ತಾ ಎದುರು ನೋಡುತ್ತಿದಾನೆ. ಆದರೆ ಮಳೆರಾಯ ಮಾತ್ರ ರೈತರ ಮೇಲೆ ಕೃಪೆ ತೋರಲು ಹಿದೆಟ್ಟು ಹಾಕುತ್ತಿರುವುದರಿಂದ ರೈತ ಕುಟುಂಬಗಳು ಕಂಗಾಲು ಆಗಿವೆ. ಈ ಹಿನ್ನಲೆಯಲ್ಲಿ ಮುನಿಸಿಕೊಂಡ ಮಳೆರಾಯನ ಮನವೋಲಿಸಲು ರೈತರು ವಿಶಿಷ್ಟವಾದ ಕತ್ತೆಗಳ ಮದುವೆ ಮಾಡಿಸಿ ಮಳೆಗಾಗಿ ಮಳೆರಾಯನಲ್ಲಿ ಪ್ರಾರ್ಥಿಸಿರುವುದು ಜರುಗಿದೆ.

ಹೌದು ಇಲ್ಲಿನ ಚಿಂಚೋಳಿ ಅವಳಿ ಪಟ್ಟಣ ಚಂದಾಪೂರದ ಗಂಗೂ ನಾಯಕ ತಾಂಡಾದ ಶ್ರೀ ಸೇವಾಲಾಲ್ ದೇವಸ್ಥಾನದಲ್ಲಿ ರೈತರು ಕತ್ತೆಗಳ ಮದುವೆ ಮಾಡಿಸಿ, ಅವುಗಳನ್ನು ಪಟ್ಟಣದ ಪ್ರಮುಖ ಬಿದಿಗಳ ಮೂಲಕ ಮೆರವಣಿಗೆ ಜರುಗಿಸಿದರು. ನಂತರ ಜನತೆಗೆ ಸಿಹಿ ತಿಂಡಿ ಊಟ ಉಣ ಬಡಿಸಿದರು.

ಹಿಂದಿನ ಪೂರ್ವಜ್ಜರು ಹಾಗೂ ಹಿರಿಯರು ಮಳೆರಾಯ ಮುನಿಸಿಕೊಂಡ ಸಂದರ್ಭದಲ್ಲಿ ಈ ರೀತಿಯ ಕತ್ತೆಗಳ ಮದುವೆ ಮಾಡಿಸಿ ಮನವೊಲಿಸುವ ಪ್ರಯತ್ನಗಳು ಮಾಡುತ್ತಾ ಬಂದಿರುತ್ತಾರೆ. ಹಾಗಾಗಿ ನಾವೇಲ್ಲ ರೈತರು ತೀರ್ಮಾನಿಸಿ ಮಳೆರಾಯಣ ಮನವೋಲಿಸಲು ಈ ರೀತಿ ಕತ್ತೆಗಳ ಮದುವೆ ಮಾಡಿಸಿದ್ದೇವೆ ಎಂದು ರೈತರು ಹೇಳಿದರು. ಇದು ನೋಡಲು ವಿಶಿಷ್ಟವಾದರೂ ಮಳೆರಾಯನ ಆಗಮನಕ್ಕೆ ಮನವೊಲಿಸಲು ರೈತರು ಇದೊಂದು ನಂಬಿಕೆಯಾಗಿ ಮಾಡಿಕೊಂಡಿದ್ದು, ಮಳೆರಾಯ ಕೃಪೆ ತೋರಿದರೆ ಬೆಳೆಯನ್ನೇ ನಂಬಿಕೊಂಡ ರೈತರ ಬದುಕು ಹಸನಾಗಲಿದೆ ಎಂದರು.

ಈ ಸಂದರ್ಭದಲ್ಲಿ ರೈತರಾದ ಸುಭಾಷ ಪವಾರ, ತಿಪ್ಪಣ್ಣ ಬಸಪ್ಪ ಗುಣಾಜಿ, ರಾಜು ಚವ್ಹಾಣ, ಲಕ್ಷ್ಮಣ, ರಾಜಪ್ಪ ನಿಂಗದಳ್ಳಿ, ರಾಜಪ್ಪ ಕಮಲಾಪೂರ್, ಜಗನ್ನಾಥ ಬೀರನಳ್ಳಿ, ಸುಧಾಕರ ಪವಾರ, ಅಂಬರೀಶ ಓಲಗೇರಿ, ರಾಕೇಶ ಕುಪನೂರ್, ಬಾಲು ಪೂಜಾರಿ, ರಾಜು ಪವಾರ, ಗೋಪಾಲ ಪವಾರ, ಪಪ್ಪು ಕಮಲಾಪೂರ್, ಕಿಶನ್ ಕಾರಬಾರಿ, ರಾಮಶೇಟ್ಟಿ ಕುರುಕುಂಟಾ, ಭೀಮು ಪವಾರ, ಶಿವು ಪವಾರ, ಮೋಹನ್ ಕೊರವಿ ಸೇರಿದಂತೆ ಪಟ್ಟಣದ ರೈತ ಕುಟುಂಬದ ಮಹಿಳೆಯರು ಇದ್ದರು.