ಗುರುಗಳಿಗೆ ಶಿಷ್ಯರ ಕೃತಜ್ಞ ನಮನ : ಕಲಬುರಗಿಯಲ್ಲಿ ಗುರುನಮನ ಕಾರ್ಯಕ್ರಮ
ಗುರುಗಳಿಗೆ ಶಿಷ್ಯರ ಕೃತಜ್ಞ ನಮನ : ಕಲಬುರಗಿಯಲ್ಲಿ ಗುರುನಮನ ಕಾರ್ಯಕ್ರಮ
ಕಲಬುರಗಿ : ಅಥ್ಲೆಟಿಕ್ಸ್ ಗೆಳೆಯರ ಬಳಗ ಹಾಗೂ ಶಿಷ್ಯವೃಂದದ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿರಿಯ ಗುರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಗುರುನಮನ ಕಾರ್ಯಕ್ರಮವನ್ನು ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಆಮಂತ್ರಣ ನೆಕ್ಸ್ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೋ. ಎಂ.ಎಸ್. ದೇವರಮನಿ, ನಿವೃತ್ತ ಹಿರಿಯ ಅಥ್ಲೆಟಿಕ್ಸ್ ತರಬೇತಿದಾರರಾದ ಡಾ. ವಸಂತ ಕುಮಾರ, ಹಾಗೂ ನಿವೃತ್ತ ಹಿರಿಯ ವಾಲಿಬಾಲ್ ತರಬೇತಿದಾರರು ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಂಡೆಪ್ಪ ಗಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ಪದವಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೋ. ಎಸ್.ಎಂ. ಹೊಳಿ ಅವರು ಉದ್ಘಾಟಿಸಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಮಾರ್ಗದರ್ಶನದಿಂದ ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಪ್ರತಾಪ್ ಸಿಂಗ್ ತಿವಾರಿ ಅವರು ಗುರು-ಶಿಷ್ಯ ಸಂಬAಧದ ಮಹತ್ವವನ್ನು ವಿವರಿಸಿದರು.
ಗೌರವ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಂ.ಎಸ್. ಪಾಸೋಡಿ, ಖ್ಯಾತ ಉದ್ಯಮಿದಾರ ಹಾಗೂ ಕಲಬುರಗಿ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಮೆಹಬೂಬ್ ಪಟೇಲ್, ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಸಿ.ಎನ್. ಬಾಬಳಗಾಂವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದ ಗಣ್ಯರು, ತರಬೇತಿದಾರರು, ಹಳೆಯ ಹಾಗೂ ಹಾಲಿ ಕ್ರೀಡಾಪಟುಗಳು ಮತ್ತು ಶಿಷ್ಯರು ಭಾಗವಹಿಸಿ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಗುರುಗಳ ಸೇವೆ ಮತ್ತು ಕೊಡುಗೆಗಳನ್ನು ಸ್ಮರಿಸಿ ಅವರನ್ನು ಸನ್ಮಾನಿಸಲಾಯಿತು.
ಅಥ್ಲೆಟಿಕ್ ತರಬೇತಿದರಾದ ನಾಗರಾಜ ಮಾಳಗೆ, ಜಿಲ್ಲಾ ಹ್ಯಾಂಡ್ ವಾಲ್ ಅಸೋಸಿಯೇಷನ್‌ರಾದ ದತ್ತಾತ್ರೇಯ ಜೇವರ್ಗಿ, ವಾಸುದೇವ ಕುಲಕರ್ಣಿ, ಚಿನ್ನಮ್ಮ, ದೇವರಾಜ, ಸಂಜು ಕುಮಾರ, ಶೇಖರ ಹಿರೇ ಸೋಮನೂರ್, ಬಸವರಾಜ ಸಜ್ಜನ್, ವಿನೋದ, ಮನೀಶ ತಿವಾರಿ, ಪ್ರವೀಣ ಪುಣೆ ಉಪಸ್ಥಿತರಿದ್ದರು. ಶ್ರೀಮತಿ ರಾಧ ಲೋಕೇಶ್ ನಿರೂಪಣೆ ಮಾಡಿದರು. ಮಾಳಗೆ ಸ್ವಾಗತ ಕೋರಿದರು, ದತ್ತಾತ್ರೇಯ ಜೇವರ್ಗಿ ಅವರು ಪ್ರಾಸ್ತಾವಿಕ ನುಡಿಗಳ ನಾಡಿದರು. ಸಿದ್ದು ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
