ನಾಳೆ ಜಗದ್ಗುರು ರೇಣುಕಾಚಾರ್ಯ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಆಚರಣೆ

ನಾಳೆ ಜಗದ್ಗುರು ರೇಣುಕಾಚಾರ್ಯ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಆಚರಣೆ

ನಾಳೆ ಜಗದ್ಗುರು ರೇಣುಕಾಚಾರ್ಯ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಆಚರಣೆ

ಕಾಯಕ ರತ್ನ, ಪುರೋಹಿತ ರತ್ನ, ಸಂಗೀತ ರತ್ನ ಹಾಗೂ ಆಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ | 

ಜಂಗಮ ವಟುಗಳ ಅಯ್ಯಾಚಾರ ಹಾಗೂ ಭಕ್ಷರಿಗೆ ಲಿಂಗದಿಕ್ಷೆ ನಡೆಯಲಿದೆ 

ಚಿಂಚೋಳಿ : ಮೇ 25 ರಂದು ಪಟ್ಟಣದ ಪಾದಗಟ್ಟಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಅಣವಾರ ಕ್ರಾಸ್‌ ಬಳಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಹಾಗೂ ಮಹಾತ್ಮ ಬಸವೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆ ಹಾಗೂ ಅದ್ಧೂರಿಯಾಗಿ ಜರುಗಿಸಲು ಜಯಂತ್ಯೋತ್ಸವ ಸ್ವಾಗತ ಸಮಿತಿ ನಿರ್ಧರಿಸಿದೆ ಎಂದು ಅಮಿತಿ ಅಧ್ಯಕ್ಷ ಸಂಗಯ್ಯಸ್ವಾಮಿ ಅಣವಾರ ತಿಳಿಸಿದ್ದಾರೆ.

ಪಟ್ಟಣದ ಮೌನೇಶ್ವರ ದೇವಾಲಯದಲ್ಲಿ ಪೂರ್ವಭಾವಿ ಸಭೆ ಮತ್ತು ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಉಜ್ಜಯಿನಿ ಮಹಾಪೀಠದ ಶ್ರೀಮದ್‌ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲ ಮಹಾಪೀಠದ ಶ್ರೀಮದ್‌ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಜಯಂತಿ ಕಾರ್ಯಕ್ರಮ ಹಾಗೂ ಧರ್ಮಸಭೆಯ ದಿವ್ಯಸಾನಿಧ್ಯವಹಿಸಿಕೊಳ್ಳಲಿದ್ದಾರೆ.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ, ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರು ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಡಾ. ಅವಿನಾಶ ಜಾಧವ್‌ ವಹಿಸಲಿದ್ದಾರೆ. ಬೀದರ ಸಂಸದ ಸಾಗರ ಖಂಡ್ರೆ , ವಿಜಯಪೂರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜವಹಾರ ಬಾಲಭವನ ಉಪಾಧ್ಯಕ್ಷ ಅನೀಲ ದೇವಿಂದ್ರಪ್ಪ ಜಮಾದಾರ, ಮಾಜಿ ಶಾಸಕ ಎಂ. ವೀರಯ್ಯಸ್ವಾಮಿ, ಕೈಲಾಸ ವೀರೇಂದ್ರ ಪಾಟೀಲ, ಭಗವಂತ ಖೂಬಾ, ಡಾ.ಉಮೇಶ ಜಾಧವ, ರಾಜಕುಮಾರ ಪಾಟೀಲ ತೇಲ್ಕೂರ್‌, ಬಾಬುರಾವ ಪಾಟೀಲ, ಸುಭಾಷ ರಾಠೋಡ್‌, ಸಂಜೀವನ ಯಾಕಾಪೂರ, ಶರಣು ಪಾಟೀಲ ಮೋತಕಪಳ್ಳಿ, ದೀಪಕನಾಗ್‌ ಪುಣ್ಯಶೆಟ್ಟಿ, ಗೌತಮ್‌ ಪಾಟೀಲ, ವಿಜಯಕುಮಾರ ಚೇಂಗಟಿ ಅವರು ಮುಖ್ಯಾಅತಿಥಿ ಸ್ಥಾನ ಅಲಂಕರಿಸಲಿದ್ದಾರೆ.

ಆಲೂರು ಕೆಂಚವೃಷಭೇಂದ್ರ ಶಿವಾಚಾರ್ಯರು, ಕೇಸರಿಬೆಟ್ಟ ತಪೋರತ್ನ ದ್ವೀತಿಯ ಸಾಂಬ ಶಿವಾಚಾರ್ಯರು, ನಿಡಗುಂದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು ಹಾಗೂ ಚಂದನಕೇರಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸುವರು. ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು, ಸೇಡಂನ ಶಿವಶಂಕರ ಶಿವಾಚಾರ್ಯರು, ಭರತನೂರ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ನವದೆಹಲಿ ಹವಾ ಮಲ್ಲಿನಾಥ ಮಹಾರಾಜರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಕಾಯಕ ರತ್ನ, ಪುರೋಹಿತ ರತ್ನ, ಸಂಗೀತ ರತ್ನ ಹಾಗೂ ಆಚಾರ್ಯ ಸೇವಾ ರತ್ನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಜಂಗಮ ವಟುಗಳ ಅಯ್ಯಾಚಾರ ಹಾಗೂ ಭಕ್ಷರಿಗೆ ನಿಂಗದಿಕ್ಷೆ ನಡೆಯಲಿದೆ ಎಂದು ಅಧ್ಯಕ್ಷ ಸಂಗಯ್ಯಸ್ವಾಮಿ ಹಾಗೂ ಗೌರವಾಧ್ಯಕ್ಷ ವೀರಣ್ಣ ಗಂಗಾಣಿ ಅವರು ತಿಳಿಸಿದ್ದಾರೆ.