ಮನೆ ಮನವನ್ನು ಬೆಳಗಲು ಪುಸ್ತಕ ಬೇಕು -ಪರುತೆ
ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ
ಮನೆ ಮನವನ್ನು ಬೆಳಗಲು ಪುಸ್ತಕ ಬೇಕು -ಪರುತೆ
ನಮಗಿಷ್ಟವಾದ ಪುಸ್ತಕಗಳು ನಮ್ಮ ಜೊತೆಗಿದ್ದರೆ ನಾವು ಬಯಸಿದ್ದೆಲ್ಲವನ್ನು ಸಾಧಿಸಬಹುದು,ಮನೆ ಮತ್ತು ಮನ ಬೆಳಗಲು ಪುಸ್ತಕದಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಾಹಿತಿ ಡಾ. ವಿಜಯಕುಮಾರ ಪರುತೆ ಹೇಳಿದರು.
ಕಲ್ಬುರ್ಗಿ ನಗರದ ಬಸವೇಶ್ವರ ಬಡಾವಣೆಯ ಹಿರಿಯ ಸಾಹಿತಿಗಳು ಹಾಗೂ ಸಮಾಜ ಚಿಂತಕರಾದ ಅಪ್ಪಾರಾವ ಅಕ್ಕೋಣೆ ಅವರ ಮನೆಯಲ್ಲಿ "ಮನೆಗೊಂದು ಗ್ರಂಥಾಲಯ" ಕಾರ್ಯಕ್ರಮದಲ್ಲಿ ಅವರನ್ನು ಕನ್ನಡ ಪುಸ್ತಕ ಪ್ರಾದಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಮಾತನಾಡುತ್ತ ಕನ್ನಡ ಪುಸ್ತಕಗಳನ್ನು ಕೊಂಡು ಓದುವವರು ಕಡಿಮೆ ಆಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕನ್ನಡ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ,ಇದರಿಂದ ಸಾಧ್ಯವಾಗಬಹುದು ಎಂದು ಡಾ ಪರುತೆ ಹೇಳಿದರು. ಈ
ಕಾರ್ಯಕ್ರಮದಲ್ಲಿ ಆಶಯ ಮಾತುಗಳನ್ನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ರಾಜ್ಯ ಸದಸ್ಯರಾದ ಬಿ.ಎಚ್.ನಿರಗುಡಿ ಅವರು ಮಾತನಾಡುತ್ತಾ ಮನೆಯಲ್ಲಿ ದೇವರ ಕೋಣೆ, ಅಡುಗೆ ಕೋಣೆ ಹೇಗೆ ಅವಶ್ಯಕವೊ ಹಾಗೆ ಜ್ಞಾನ ಸಂಪಾದನೆಗೆ ಪುಸ್ತಕ ಕೋಣೆಯ ಅವಶ್ಯಕತೆ ಇದೆ ಎಂದರು. ಅವರು ಮಾತು ಮುಂದುವರಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದೆ ಪುಸ್ತಕ ಪ್ರದರ್ಶನ, ಪುಸ್ತಕ ಮೇಳ, ವಿಚಾರ ಸಂಕೀರ್ಣ, ಅಂಗಳದಲ್ಲಿ ತಿಂಗಳ ಪುಸ್ತಕ, ನನ್ನ ನೆಚ್ಚಿನ ಪುಸ್ತಕ, ಸಂಪುಟಗಳ ಬಿಡುಗಡೆ ಸಮಾರಂಭ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ,ರಸಪ್ರಶ್ನೆ ಸ್ಪರ್ಧೆ ಹೀಗೆ ಒಂದಲ್ಲ ಎರಡಲ್ಲ ಇಂತಹ ಅನೇಕ ಕಾರ್ಯಕ್ರಮಗಳನ್ನು ಪುಸ್ತಕ ಪ್ರಾಧಿಕಾರ ಮಾಡುತ್ತಾ ಬರುತ್ತಿದೆ ಎಂದು ಬಿ.ಎಚ್. ನಿರಗುಡಿಯವರು ಹೇಳಿದರು.
ಸಾಹಿತಿಗಳು ಹಾಗೂ ಚಿಂತಕರಾದ ಅಪ್ಪಾರಾವ ಅಕ್ಕೋಣೆ ಅವರು ಮಾತನಾಡುತ್ತ 'ಓದುವ ಹವ್ಯಾಸ ಬೆಳೆಸಿಕೊಂಡು ಮನೆಯಲ್ಲಿ ಪುಸ್ತಕಗಳ ರಾಶಿ ತುಂಬಿದೆ ಸುಮಾರು ಐದು ದಶಕಗಳಿಂದ ಪುಸ್ತಕದ ನಂಟನ್ನು ಹೊಂದಿರುವ ನನ್ನನು ಇಷ್ಟು ಎತ್ತರಕ್ಕೆ ಬೆಳೆಯುವ ಹಾಗೆ ಪುಸ್ತಕಗಳು ಮಾಡಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶರಣ ಚಿಂತಕರಾದ ಧರ್ಮಪ್ರಕಾಶ್ ಪಾಟೀಲ್, ಬಸವರಾಜ್ ಪಾರಾ, ಬಸವರಾಜ ಆವಂಟಿ ,ಬಿ ಎಸ್ ಮಾಲಿ ಪಾಟೀಲ್,ಸಾಹಿತಿ ರೇವಣಸಿದ್ದಪ್ಪ ದುಕಾನ್, ಡಾ ಶರಣಬಸಪ್ಪ ವಡ್ಡನಕೇರಿ, ಶ್ರೀಶೈಲ್ ಮದಾನಿ, ಚಾಮರಾಜ ದೊಡ್ಡಮನಿ ಮತ್ತು ಡಾ. ಸಂಗಮೇಶ್ ಹಿರೇಮಠ ಇತರರು ಇದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
