ಸಮಾನತೆಗಾಗಿ ಬಾಬುಜೀ ಶ್ರಮ ಅನನ್ಯ ಕಾಡಾ ಅಧ್ಯಕ್ಷ ಡಾ.ಎಂಎ ರಶೀದ ರವರು ಹೇಳಿದರು.

ಸಮಾನತೆಗಾಗಿ ಬಾಬುಜೀ ಶ್ರಮ ಅನನ್ಯ ಕಾಡಾ ಅಧ್ಯಕ್ಷ ಡಾ.ಎಂಎ ರಶೀದ ರವರು ಹೇಳಿದರು.

ಸಮಾನತೆಗಾಗಿ ಬಾಬುಜೀ ಶ್ರಮ ಅನನ್ಯ ಕಾಡಾ ಅಧ್ಯಕ್ಷ ಡಾ.ಎಂಎ ರಶೀದ ರವರು ಹೇಳಿದರು.

ನಾಗರಾಜ್ ದಂಡಾವತಿ ವರದಿ ಶಹಾಬಾದ: ಭಾರತದ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 40ನೇ ಪುಣ್ಯಸ್ಮರಣೆಯ ಈ ಸಂದರ್ಭವು, ಅವರು ದೇಶಕ್ಕೆ ನೀಡಿದ ಅಪ್ರತಿಮ ಕೊಡುಗೆಗಳನ್ನು ಗೌರವದಿಂದ ಸ್ಮರಿಸುವ ಪವಿತ್ರ ಕ್ಷಣವಾಗಿದೆ ಎಂದು ಕಾಡಾ ನಿಗಮದ ಅಧ್ಯಕ್ಷ ಡಾ.ಎಂಎ ರಶೀದ ರವರು ಹೇಳಿದರು.

ಅವರು ಬಾಬು ಜಗಜೀವನರಾಂ ರವರ 40ನೇ ಪುಣ್ಯಸ್ಮರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ದೇಶದ ಶೋಷಿತರ, ದೀನದಲಿತರ ಧ್ವನಿಯಾಗಿ ಬಾಬೂಜಿಯವರು ತೋರಿದ ದಾರಿ ಇಂದಿಗೂ ಇಡೀ ರಾಷ್ಟ್ರಕ್ಕೆ ದಾರಿ ದೀಪವಾಗಿದೆ. ಬಾಬುಜೀ ಅವರು ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ಸುಮಾರು 31 ವರ್ಷಗಳು ಕೇಂದ್ರ ಸಚಿವರಾಗಿ ರಕ್ಷಣೆ, ಕಾರ್ಮಿಕ, ರೈಲ್ವೆ ಮತ್ತು ಕೃಷಿಯಂತಹ ಪ್ರಮುಖ ಖಾತೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು ಎಂದರು.

ಪಂಚ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಮೃತ್ಯುಂಜಯ ಹಿರೇಮಠ ಮಾತನಾಡಿ, ಭಾರತದ ಹಸಿರು ಕ್ರಾಂತಿಯ ಹಿಂದೆ ಹಾಗೂ 1971ರ ಭಾರತ-ಪಾಕಿಸ್ತಾನ ಯುದ್ಧದ ವಿಜಯದ ಹಿಂದೆ ಇವರ ಆಡಳಿತಾತ್ಮಕ ಚಾತುರ್ಯವಿತ್ತು. ತದನಂತರ ಅವರು ಭಾರತದ ಉಪಪ್ರಧಾನ ಮಂತ್ರಿಯಾಗಿ

ಸೇವೆ ಸಲ್ಲಿಸುವ ಮೂಲಕ ದೇಶದ ಅತ್ಯುನ್ನತ ನಾಯಕತ್ವವನ್ನು ಅಲಂಕರಿಸಿದರು. ಕೇವಲ ರಾಜಕಾರಣಿಯಾಗಿ ಮಾತ್ರವಲ್ಲದೆ, ಬ್ರಿಟಿಷರ ವಿರುದ್ಧದ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ಸಾಮಾಜಿಕ ಸಮಾನತೆಗಾಗಿ ಅವರು ಪಟ್ಟ ಶ್ರಮ ಅನನ್ಯವಾದುದು ಎಂದು ಸ್ಮರಿಸಿದರು.

ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ ಮಾತನಾಡಿ, ಕಾರ್ಮಿಕರ ಕಲ್ಯಾಣ, ಕೃಷಿ ಕ್ರಾಂತಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿ ಬಾಬೂಜಿ ಅವರು ಹಾಕಿಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದೆ. ಅವರ 40ನೇ ಪುಣ್ಯಸ್ಮರಣೆಯ ಈ ದಿನದಂದು, ಆ ಮಹಾನ್ ಚೇತನಕ್ಕೆ ಇಡೀ ದೇಶವು ಶಿರಬಾಗಿ ನಮಿಸುತ್ತದೆ. ಅವರ ಆದರ್ಶಗಳು ನಮ್ಮ ದೇಶದ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಲಿ ಎಂದು ಹೇಳಿದರು.

ನಗರ ಸಭೆಯ ಸಿಬ್ಬಂದಿ ಶರಣಗೌಡ ಸಾಬಣ್ಣ ಸುಂಗುಲಕರ, ಪ್ರಭಾರ ಕರದಳ್ಳಿ, ಶಿವಪುತ್ರ ಕಣ್ಣಿ ಮತ್ತು ನಗರಸಭೆ ಮಾಜಿ ಸದಸ್ಯ ಬಾಬು ಆಶಪ್ಪ, ಕರವೇ ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ, ಕಾಂಗ್ರೇಸ ಯುವ ಅಧ್ಯಕ್ಷ ಕಿರಣ ಚವ್ಹಾಣ, ಜೆಡಿಎಸ ಪಕ್ಷದ ಕಾರ್ಯದರ್ಶಿ ಶ್ರೀಧರ ಕೊಲ್ಲೂರ, ಸಾಹೇಬಗೌಡ ಬೊಗುಂಡಿ, ಹನುಮೇಶ ಕುಲಕರ್ಣಿ, ಮುನ್ನಾ ಪಟೇಲ, ಭೀಮರಾಯ ಕನಗನಳ್ಳಿ, ಮಕ್ಖುಮ ಬಾಬಾ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.