ಪಿ. ಕೆ. ಪಿ. ಎಸ್. ಗೊಬ್ಬುರ(ಬಿ) ಗ್ರಾಮದಲ್ಲಿ ಸಹಕಾರ ಸಪ್ತಾಹ ಆಚರಣೆ
ಪಿ. ಕೆ. ಪಿ. ಎಸ್. ಗೊಬ್ಬುರ(ಬಿ) ಗ್ರಾಮದಲ್ಲಿ ಸಹಕಾರ ಸಪ್ತಾಹ ಆಚರಣೆ
ಇಂದು 07/07/2026 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೊಬ್ಬುರ( ಬಿ )ಕಚೇರಿಯಲ್ಲಿ ಸಹಕಾರ ಸಪ್ತಾಹ ಆಚರಣೆ ಅಂಗವಾಗಿ ಶಾಂತಾ ಆಸ್ಪತ್ರೆ ಕಲಬುರಗಿ, ಸುರಕ್ಷಾ ಆಸ್ಪತ್ರೆ ಕಲಬುರಗಿ ಮತ್ತು ನಂದ್ಯಾಳ ಆಸ್ಪತ್ರೆ ಕಲಬುರಗಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘ ಗೊಬ್ಬುರ (ಬಿ )ಇವರುಗಳ ಸಂಯುಕ್ತಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ ನಡೆಯಿತು.
ಸಂಘದ ಅಧ್ಯಕ್ಷರಾದ ಶ್ರೀ ರವಿಶಂಕರ ಕುಲಾಲಿ ಅವರು ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದರು . ಸಹಕಾರ ಸಂಘಗಳ ಸಹಾಯಕ ನಿಭಂದಕರಾದ ಶ್ರೀ ಸಂಜಯ ಕಪೂರ್ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದಲ್ಲಿ ಸಹಕಾರ ಇಲಾಖೆಯ ಸ್ವತಂತ್ರ (ಮಂತ್ರಾಲಯ) ಸಚಿವಾಲಯ ಪ್ರಾರಂಭವಾಗಿ ಐದು ವರ್ಷಗಳು ಪೂರೈಸಿದ್ದರಿಂದ ಸಹಕಾರ ಸಪ್ತಾಹ ಆಚರಣೆ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದರ ಸದುಪಯೋಗ ಪಡೆದು ಕೊಳ್ಳಲು ಕರೆ ನೀಡಿದರು.
ಸಹಕಾರ ಅಭಿವೃದ್ಧಿ ಅಧಿಕಾರ ಅಫಜಲಪುರ್, ಸಹಕಾರ ಅಭಿವೃದ್ಧಿ ಅಧಿಕಾರಿ ಆಳಂದ್, ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಫಜಲಪುರ ತಾಲೂಕಿನ ಎಲ್ಲಾ ಪಿ. ಕೆ. ಪಿ. ಎಸ್. ಗಳ ಮುಖ್ಯಕಾರ್ಯನಿರ್ವಹಣಾ ಧಿಕಾರಿಗಳು ಉಪಸ್ಥಿತರಿದ್ದರು..
