ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿಡುವುದು ಇಲಾಖೆಯ ಜವಬ್ದಾರಿ : ತಾ.ಪಂ. ಇಓ ಸಂತೋಷಕುಮಾರ ಚವ್ಹಾಣ
ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿಡುವುದು ಇಲಾಖೆಯ ಜವಬ್ದಾರಿ : ತಾ.ಪಂ. ಇಓ ಸಂತೋಷಕುಮಾರ ಚವ್ಹಾಣ
ಚಿಂಚೋಳಿ : ಇಲ್ಲಿನ ತಾಲೂಕ ಪಂಚಾಯತ ಸಭಾಂಗಣದಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ ಮಲಿ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು.
ಸಭೆಯಲ್ಲಿ ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವ ನಿಧಿ, ಅನ್ನಭಾಗ್ಯ ಯೋಜನೆ ಮತ್ತು ಶಕ್ತಿ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆ ನಡೆಸಿದರು.
ಕಳೆದ 3 ತಿಂಗಳಿಂದ ವಿದ್ಯುತ್ ಸಮಸ್ಯೆಗಳಿರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಸಭೆಯ ಮೂಲಕ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಜೇಸ್ಕಾಂ ಅಧಿಕಾರಿಗಳು ಅದನ್ನು ಕೈಗೆತ್ತಿಕೊಂಡು ಸಮಸ್ಯೆ ನಿವಾರಿಸದ ಜೇಸ್ಕಾಂ ಅಧಿಕಾರಿಗಳಿಗೆ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದು ಜರುಗಿತು. ತಾಲೂಕಿನಲ್ಲಿ ಒಟ್ಟು 375 ಅಂಗನವಾಡಿ ಕೇಂದ್ರಗಳಿವೆ. ಮರಣ ಹೊಂದಿರುವ 877 ಗೃಹಲಕ್ಷ್ಮೀ ಫಲಾನುಭವಿಗಳು ಕಳೆದ 14 ತಿಂಗಳುಗಳಿಂದ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಕೋರಿ ಲೀಡ್ ಬ್ಯಾಂಕುಗಳಿಗೆ ಇಲಾಖೆ ಪತ್ರ ಬರೆದು ಕೇಳಲಾಗಿದೆ. ಆದರೆ ಲಿಂಡ್ ಬ್ಯಾಂಕಿನವರು ನಮ್ಮ ಪತ್ರಗಳಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸವಿತಾ ಮಡಿವಾಳ ಅವರು ಸಭೆಗೆ ತಿಳಿಸಿದರು. ತಾ. ಪಂ. ಇಓ ಸಂತೋಷಕುಮಾರ ಚವ್ಹಾಣ ಅವರು ಮಧ್ಯ ಪ್ರವೇಶಿಸಿ ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಟ್ಟುಕೊಂಡು ಯೋಜನೆ ಉಳಿಸುವುದು ನಿಮ್ಮಇಲಾಖೆಯ ಕರ್ತವ್ಯವಾಗಿದೆ ಎಂದು ಹೇಳಿದರು. ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಅಂಕಿ ಅಂಶಗಳ ಮಾಹಿತಿ ಪಡೆಯಲು ಜಾಲತಾಣಗಳ ಮಾಹಿತಿ ಕೊರತೆ ಆಗುತ್ತಿದ್ದು, ತಿಳಿದುಕೊಳ್ಳಲು ಸ್ವಲ್ಪ ಸಮಯಬೇಕಾಗಲಿದ್ದು, ಅಂಗನವಾಡಿ ಕಾರ್ಯಕರ್ತರು ಎಸ್.ಐ.ಆರ್ ನಲ್ಲಿ ತೊಡಗಿಕೊಂಡಿರುವುದರಿಂದ ಮಾಹಿತಿ ನೀಡಲು ಸಮಯಬೇಕಾಗುತ್ತದೆ ಎಂದು ಅಧಿಕಾರಿ ಸವಿತಾ ಅವರು ತಿಳಿಸಿದರು. ತಾಲೂಕಿನ 1811 ಜನ ಏಪ್ರೀಲ್ ತಿಂಗಳವರೆಗೆ ಯುವ ನಿಧಿ ಯೋಜನೆಯ ಹಣ ಜಮೆ ಮಾಡಲಾಗಿದೆ. 300 ಜನರನ್ನು ಸರಿಯಾಗಿ ಮಾಹಿತಿ ಒದಗಿಸದ ಹಿನ್ನಲೆ ಅವರ ಅರ್ಜಿಗಳು ರದ್ದು ಪಡಿಸಲಾಗಿದೆ. ಒಂದು ಬಾರಿ ರದ್ದುಪಡಿಸಿದ ಅರ್ಜಿಯನ್ನು ಪುನಃ ಅರ್ಜಿ ಹಾಕಲು ವೆಬ್ ಪೋರ್ಟಲ್ ನಲ್ಲಿ ಅವಕಾಶ ಇಲ್ಲ. ಯುವ ನಿಧಿಗಾಗಿ ತೆರೆಯಲ್ಪಟ್ಟ 18005997154 ಸಂಖ್ಯೆ ಹೇಲ್ಪ್ ಲೈನ್ ಸರಿಯಾಗಿ ಕಾರ್ಯನಿರ್ವಹಿಸಿ ಸ್ಪಂದಿಸದೇ ಇರುವುದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಅದನ್ನು ಸರಿಪಡಿಸುವಂತೆ ಅಧಿಕಾರಿ ಸಭೆ ಮನವಿ ಮಾಡಿಕೊಂಡರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಘೋಷಿಸಿರುವಂತೆ ತಾಲೂಕಿನ 833 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿದೆ. ಉಚಿತ ಪಾಸ್ ಘೋಷಣೆ ಆಗುವ ಮುಂಚಿತವಾಗಿ ಹಣ ಕೊಟ್ಟು ಪಡೆದ 118 ವಿದ್ಯಾರ್ಥಿಗಳಿಗೆ ಹಣ ಮರು ಸಂದಾಯವಾಗಲಿದೆ . 60 ಕಿ.ಲೋ. ವ್ಯಾಪ್ತಿಯೊಳಗೆ ಬರದ ಕಾರಣ 20 ಪಾಸ್ ಗಳು ರದ್ದು ಪಡಿಸಲಾಗಿದೆ ಎಂದು ಚಿಂಚೋಳಿ ಬಸ್ ಡಿಪೋ ವ್ಯವಸ್ಥಾಪಕರು ಹೇಳಿದರು.
ಸಭೇಯಲ್ಲಿ ತಾ.ಪಂ.ಇಓ ಸಂತೋಷಕುಮಾರ ಚವ್ಹಾಣ, ಪಂಚ ಗ್ಯಾರೆಂಟಿ ಯೋಜನೆಗಳ ಇಲಾಖೆಯ ಅಧಿಕಾರಿಗಳು ಮತ್ತು ಗ್ಯಾರೆಂಟಿ ಸಮಿತಿ ನಿರ್ದೇಶಕರು ಉಪಸ್ಥಿತರಿದರು.
