ಮೇ 24ರಂದು ಶಹಪುರ ಸಾಹಿತ್ಯ ಸಂಭ್ರಮ

ಮೇ 24ರಂದು ಶಹಪುರ ಸಾಹಿತ್ಯ ಸಂಭ್ರಮ

ಮೇ 24ರಂದು ಶಹಪುರ ಸಾಹಿತ್ಯ ಸಂಭ್ರಮ.

ಶಹಪುರ : ತಾಲೂಕಿನ ಸಮಗ್ರ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೈಭವ ಉಳಿಸಿ ಬೆಳೆಸುವುದರ ಜೊತೆಗೆ ಐತಿಹಾಸಿಕ ಪರಂಪರೆಯ ಮೇಲೆ ಮತ್ತಷ್ಟು ಬೆಳಕು ಚೆಲುವ ಹಿತ ದೃಷ್ಟಿಯಿಂದ ಈ ಶಹಪುರ ಸಾಹಿತ್ಯ ಸಂಭ್ರಮ ಹಾಗೂ ನಾಡಿನ ವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಗರ ನಾಡಿನ ಹಿರಿಯ ಸಾಹಿತಿ ದಿ.ಸಗರ ಕೃಷ್ಣಾಚಾರ್ಯರ ಪ್ರಧಾನ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಕಟಣೆಗೆ ತಿಳಿಸಿದ್ದಾರೆ.

ಇದು ಕೇವಲ ಸಾಂಪ್ರದಾಯಿಕ ಸಮ್ಮೇಳನವಾಗದೆ ವಿಶಿಷ್ಟ ಹಾಗು ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗಿದ್ದು,ಇಲ್ಲಿ ಮುಕ್ತ ಚಿಂತನೆ ಮತ್ತು ಸಂವಾದಗಳಿಗೆ ಅವಕಾಶವಿದ್ದು,ಕನ್ನಡ ಭಾಷಾ ಹಾಗೂ ಸಂಸ್ಕೃತಿಯ ಜ್ವಲಂತ ಸಮಸ್ಯೆಗಳು,ತುಡಿತ ತಲ್ಲಣಗಳು ವೈಚಾರಿಕತೆಯ ವಿಷಯಗಳನ್ನು ಒಳಗೊಂಡಂತೆ ಗಂಭೀರ ಚರ್ಚೆಗಳು ನಡೆಯಲಿವೆ ಎಂದು ನುಡಿದರು.

ಶಹಪುರ ನಗರದ ಬೀದರ ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಇಬಿ ಹತ್ತಿರದ ಹೋಟೆಲ್ ಮಾತೋಶ್ರೀ (ಎಸಿ) ಫಂಕ್ಷನ್ ಹಾಲ್ ನಲ್ಲಿ ಮೇ 24ರಂದು ಬೆಳಗ್ಗೆ 10.30 ಕ್ಕೆ ಆಯೋಜಿಸಲಾಗಿದೆ.ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಉದ್ಘಾಟಿಸುವರು, ಹಿರಿಯ ಮುಖಂಡ ಸಿದ್ದಲಿಂಗಣ್ಣ ಆನೆಗುಂದಿ ಅಧ್ಯಕ್ಷತೆ ವಹಿಸುವರು, ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು,ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಸಿದ್ದರಾಮ ಪ್ರಶಸ್ತಿ ಪ್ರದಾನ ಮಾಡುವರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸುವರು,

ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ವಾಸುದೇವ ಸೇಡಂ "ಶಹಾಪುರ ಸಾಹಿತ್ಯದ ಸಾಮರಸ್ಯ ನೆಲೆಗಳು" ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು,ಡಾ.ದೇವೇಂದ್ರಪ್ಪ ಹಡಪದ,ಕವಯತ್ರಿ ಸುರಯ್ಯ ಬೇಗಂ,ಡಾ:ಜಾಫರ್ ಷರೀಫ್ ನಿಡಗುಂದಿ ಅತಿಥಿಗಳಾಗಿ ಭಾಗವಹಿಸುವರು,

ನಂತರದಲ್ಲಿ ಹಿರಿಯ ಸಂಶೋಧಕರು ಹಾಗೂ ಖಜಾನೆ ಅಧಿಕಾರಿಗಳು ಡಾ.ಮೋನಪ್ಪ ಶಿರವಾಳ ಕವಿ ಗೋಷ್ಠಿಗೆ ಚಾಲನೆ ನೀಡುವರು,ಸಾಹಿತಿಗಳಾದ ಡಾ. ಅಬ್ದುಲ್ ಕರೀಂ ಕನ್ಯ ಕೊಳ್ಳೂರ ಕವಿ ಗೋಷ್ಠಿ ಅಧ್ಯಕ್ಷತೆ ವಹಿಸಿಕೊಳ್ಳುವರು,ಶರಣ ಸಾಹಿತಿ ಶಿವಣ್ಣ ಇಜೇರಿ ಉಪಸ್ಥಿತಿಯಲ್ಲಿರುವರು.30 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಸುವರು.ನಂತರದಲ್ಲಿ ಹಲವಾರು ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗುವವು.