ಕರ್ನಾಟಕ ಜಾನಪದ ಪರಿಷತ್ ಶಹಾಬಾದ ತಾಲೂಕು ಘಟಕದ ಅಧ್ಯಕ್ಷರಾಗಿ ಬಸವರಾಜ ವಿ. ಮದ್ರಿಕಿ ನೇಮಕ

ಕರ್ನಾಟಕ ಜಾನಪದ ಪರಿಷತ್ ಶಹಾಬಾದ ತಾಲೂಕು ಘಟಕದ ಅಧ್ಯಕ್ಷರಾಗಿ ಬಸವರಾಜ ವಿ. ಮದ್ರಿಕಿ ನೇಮಕ

ಕರ್ನಾಟಕ ಜಾನಪದ ಪರಿಷತ್ ಶಹಾಬಾದ ತಾಲೂಕು ಘಟಕದ ಅಧ್ಯಕ್ಷರಾಗಿ ಬಸವರಾಜ ವಿ. ಮದ್ರಿಕಿ ನೇಮಕ

ಕಲಬುರಗಿ, ಮೇ 22: ಕರ್ನಾಟಕ ಜಾನಪದ ಪರಿಷತ್ತಿನ ಶಹಾಬಾದ ತಾಲೂಕು ಘಟಕದ ಅಧ್ಯಕ್ಷರಾಗಿ ಸಂಘಟಕ, ಹೋರಾಟಗಾರ ಹಾಗೂ ಸಮಾಜ ಸೇವಕರಾದ ಬಸವರಾಜ ವಿ. ಮದ್ರಿಕಿ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ.ಎಸ್. ಮಾಲಿಪಾಟೀಲ ಅವರ ಸೂಚನೆ ಮೇರೆಗೆ ಈ ನೇಮಕಾತಿ ಮಾಡಲಾಗಿದ್ದು, ಜಿಲ್ಲಾ ಕಾರ್ಯದರ್ಶಿಗಳಾದ ಡಾ. ಹಣಮಂತ್ರಾಯ ರಾಂಪುರೆ ಅವರು ಆದೇಶ ಹೊರಡಿಸಿದ್ದಾರೆ.

ಬಸವರಾಜ ವಿ. ಮದ್ರಿಕಿ ಅವರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜಾನಪದ ಕಲೆ, ಸಾಹಿತ್ಯ ಮತ್ತು ಪರಂಪರೆಯ ಉಳಿವಿಗಾಗಿ ಶ್ರಮಿಸಲಿ ಎಂಬ ವಿಶ್ವಾಸವನ್ನು ಪರಿಷತ್ ಮುಖಂಡರು ವ್ಯಕ್ತಪಡಿಸಿದ್ದಾರೆ.