ಅರುಣ ಮುಳ್ಳೂರ ಸಂಸ್ಮರಣ ಗ್ರಂಥ ‘ಅರುಣ-ಕಿರಣ’ ಮೇ 24ರಂದು ಲೋಕಾರ್ಪಣೆ
ಅರುಣ ಮುಳ್ಳೂರ ಸಂಸ್ಮರಣ ಗ್ರಂಥ ‘ಅರುಣ-ಕಿರಣ’ ಮೇ 24ರಂದು ಲೋಕಾರ್ಪಣೆ
ಕಲಬುರಗಿ, ಮೇ 21: ಧಾರ್ಮಿಕ ಹಾಗೂ ಸಾಮಾಜಿಕ ಕಾಳಜಿಯ ಚಿಂತಕರಾಗಿ, ಸೇವಾ ಮನೋಭಾವದಿಂದ ಗುರುತಿಸಿಕೊಂಡಿದ್ದ ದಿವಂಗತ ಅರುಣಕುಮಾರ ಮುಳ್ಳೂರ ಅವರ ಬದುಕು, ವ್ಯಕ್ತಿತ್ವ ಮತ್ತು ಸಾಧನೆಯನ್ನು ದಾಖಲಿಸುವ ಸಂಸ್ಮರಣ ಗ್ರಂಥ ‘ಅರುಣ-ಕಿರಣ’ ಲೋಕಾರ್ಪಣೆ ಸಮಾರಂಭವು ಮೇ 24ರಂದು ರವಿವಾರ ಸಂಜೆ 5.30 ಗಂಟೆಗೆ ನಗರದ ಜಯತೀರ್ಥ ಕಾಲನಿಯ ಜಯತೀರ್ಥ ಕಲ್ಯಾಣ ಮಂಟಪದ ಸಭಾಗೃಹದಲ್ಲಿ ನಡೆಯಲಿದೆ.
ಉತ್ತರಾದಿ ಮಠದ ಮಠಾಧಿಕಾರಿಗಳಾದ ಶ್ರೀ ರಾಮಾಚಾರ್ಯ ಘಂಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಸಂಪಾದಿಸಿರುವ ‘ಅರುಣ-ಕಿರಣ’ ಕೃತಿಯನ್ನು ಹಿರಿಯ ಸಾಹಿತಿ ಶ್ರೀನಿವಾಸ ಸಿರನೂರಕರ ಅವರು ಲೋಕಾರ್ಪಣೆ ಮಾಡುವರು.
ಲೇಖಕಿ ಹಾಗೂ ಸಂಘಟಕಿ ಡಾ. ಅಂಬುಜಾ ಮಳಖೇಡಕರ ಅವರು ಕೃತಿಯನ್ನು ಪರಿಚಯಿಸಲಿದ್ದು, ದಿ. ಅರುಣಕುಮಾರ ಮುಳ್ಳೂರ ಅವರ ಧರ್ಮಪತ್ನಿ ಶ್ರೀಮತಿ ಛಾಯಾ ಅರುಣ ಮುಳ್ಳೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದ ಅಂಗವಾಗಿ ರಾಜುಪಾಟೀಲ ಗದಗ, ದೀಪ್ತಿ ಪಾಠಕ ಗದಗ, ಡಾ. ಲಕ್ಷ್ಮೀಶಂಕರ ಜೋಶಿ, ಸುನೀತಾ ಝಳಕಿಕರ್, ಜ್ಯೋತಿ ಲಾತೂರಕರ ಹಾಗೂ ತಂಡದವರಿಂದ ಸಂಗೀತ ವೈವಿಧ್ಯ ಕಾರ್ಯಕ್ರಮವೂ ನಡೆಯಲಿದೆ.
ಗ್ರಂಥದ ಸಂಪಾದಕರಾದ ಡಾ. ಸ್ವಾಮಿರಾವ ಕುಲಕರ್ಣಿಯವರು ಉಪಸ್ಥಿತರಿರುವರು. ಲೇಖಕ ನಾರಾಯಣ ಕುಲಕರ್ಣಿ ಕಾರ್ಯಕ್ರಮ ನಿರ್ವಹಣೆ ಮಾಡುವರು.
ಈ ಕುರಿತು ಕಾರ್ಯಕ್ರಮದ ಸಂಘಟಕರಾದ ಬಾಲಕೃಷ್ಣ ಹಾಗೂ ರವಿ ಲಾತೂರಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
