ಕಲೆಗಳು ದೇಶ ಬೆಳಗಿಸುವ ದೀಪಗಳು- ಬಸವರಾಜ್ ಧನ್ನೂರ

ಕಲೆಗಳು ದೇಶ ಬೆಳಗಿಸುವ ದೀಪಗಳು- ಬಸವರಾಜ್ ಧನ್ನೂರ

ಕಲೆಗಳು ದೇಶ ಬೆಳಗಿಸುವ ದೀಪಗಳು- ಬಸವರಾಜ್ ಧನ್ನೂರ

 ಬೀದರ: ಇವತ್ತಿನ ಯಾಂತ್ರಿಕ ಯುಗದಲ್ಲಿ ನಾವೆಲ್ಲರೂ ಒತ್ತಡದ ಬದುಕಿನಲ್ಲಿ ಬಾಳುತ್ತಿದ್ದೇವೆ ಯಾರಿಗೂ ಸಮಯವಿಲ್ಲದಂತಾಗಿದೆ. ಇಂತಹದರಲ್ಲಿ ನಾವೆಲ್ಲರೂ ಮತ್ತೊಮ್ಮೆ ನೆಮ್ಮದಿ, ಶಾಂತಿಗಾಗಿ ಸಂಗೀತದ ಮೊರೆ ಹೋಗಬೇಕಾಗಿದೆ. ಏಕೆಂದರೆ ಸಂಗೀತ ಮತ್ತು ಸಾಹಿತ್ಯ ನಮ್ಮ ಮನಸ್ಸಿಗೆ ಶಾಂತಿ, ತೃಪ್ತಿ, ನೆಮ್ಮದಿಗಳು ಕೊಡುತ್ತವೆ.ಅವುಗಳು ಬದುಕಿನ ಅವಿಭಾಜ್ಯ ಅಂಗಗಳು ಎಂದರೆ ತಪ್ಪಲ್ಲ. ಸಾಹಿತ್ಯ, ಸಂಗೀತ ಕೇವಲ ಅಕ್ಷರಗಳಲ್ಲ ಭಾವನಾತ್ಮಕವಾಗಿ ಬೆಸೆಯುವ ಸಂಬಂಧಗಳು. ನಾಡು ಕಟ್ಟುವ ದೇಶ ಮುನ್ನಡೆಸುವ ಕಾರ್ಯ ಮಾಡುವಂತಹ ಈ ಕಲೆಗಳು ದೇಶ ಬೆಳಗಿಸುವ ದೀಪಗಳು.ಸಾಹಿತ್ಯ ವೈಚಾರಿಕತೆಯಿಂದ ಬೆಳಗುತ್ತದೆ, ಅದು ನಮ್ಮ ಸಂಸ್ಕೃತಿಗೆಯ ಬೆನ್ನೆಲುಬು ಎಂದು ಖ್ಯಾತ ಉದ್ದಿಮೆದಾರರಾದ ಶ್ರೀ ಬಸವರಾಜ್ ಧನ್ನೂರ ಅವರು ನುಡಿದರು. ನಗರದ ಮೈಲೂರು ಕ್ರಾಸ್ ಹತ್ತಿರವಿರುವ ಶ್ರೀ ಕೃಷ್ಣ ಉಡುಪಿ ಹೋಟೆಲನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಮಂದಾರ ಕಲಾವಿದರ ವೇದಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯೋಗದಲ್ಲಿ ಏರ್ಪಡಿಸಿದ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಸಂಗೀತಕ್ಕೆ ಯಾವ ಭಾಷೆಯಿಲ್ಲ, ಜಾತಿ ಇಲ್ಲ ಮತ ಪಂಥಗಳ ಬಂಧನವಿಲ್ಲ. ಅದೊಂದು ಎಲ್ಲರಿಗೂ ಒಂದೆಡೆ ಸೇರಿಸಬಲ್ಲ ಮತ್ತೆ ಸಂಸ್ಕೃತಿ, ಸೃಜನಶೀಲತೆಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಎಲೆಮರೆಯ ಕಾಯಿಯಂತಿರುವ ಅನೇಕ ಕಲಾವಿದರಿಗೆ ಪ್ರೋತ್ಸಾಹಿಸುವ ಸಂಘ ಸಂಸ್ಥೆಗಳ ಕಾರ್ಯವಾಗಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಖ್ಯಾತ ಕವಿಗಳಾದ ಮಾಣಿಕ ನೇಳಗೆರವರು ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಕಾವ್ಯ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ಪಂಪ, ರನ್ನರ ಸಾಹಿತ್ಯ,ವಚನ ಸಾಹಿತ್ಯ, ದಾಸರ ಕೀರ್ತನೆಗಳು ಕಾವ್ಯ ಲೋಕಕ್ಕೆ ಬೆಳಕನ್ನು ಹರಿಸುತ್ತವೆ. ಅವುಗಳ ಅಧ್ಯಯನದಿಂದ‌ಕವಿ, ಕವಯಿತ್ರಿಯರು ಸಾರ್ಥಕ ಕಾವ್ಯಗಳನ್ನು ಬರೆಯಲು ಸಾಧ್ಯ ಮತ್ತು ಅಧ್ಯಯನ, ಅನುಭವಗಳಿಂದ ಪಕ್ವವಾದ ಕಾವ್ಯ ಹೊರಬರಬಹುದು ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾದ ಡಾ.ರಘುಶಂಖ ಭಾತಂಬ್ರಾರವರು ಸಂಗೀತವೆಂಬುದು ಅದೊಂದು ಧ್ವನಿ, ತರಂಗಗಳಿಂದ ಕೂಡಿದ ಅಲಾಪ. ಅದನ್ನು ಆಲಿಸುವುದರಿಂದ ಮನಕ್ಕೆ ಶಾಂತಿ ದೊರೆಯುತ್ತದೆ ಎಂದರು. ಈ ವೇದಿಕೆಯಲ್ಲಿ ಸಂಜೀವ ಕುಮಾರ ಅತಿವಾಳೆ, ಶಂಭುಲಿಂಗ ವಾಲ್ದೊಡ್ಡಿ, ಪ್ರಾಚಾರ್ಯ ಅಶೋಕ ಬೂದಿಹಾಳ, ಬಾಬುರಾವ ಗೊಂಡ ಹಾಗೂ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಕಿರಣ್ ಮಹಾರಾಜರು ವಹಿಸಿದ್ದು ಇವರು ಆಶೀರ್ವಚನ ನೀಡಿದರು. ಎಂ.ಜಿ. ದೇಶಪಾಂಡೆಯವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಶೈಲಜಾ ಹುಡುಗಿ, ವೀರೇಶ್ವರಿ ಮೂಲಗೆ, ಬಸವ ಪ್ರಕಾಶ ಕೋಡಂಬಲ, ವಿನುತಾ ಎಚ್. ಹಿರೇಮಠ್, ಓಂಕಾರ್ ಪಾಟೀಲ್, ಶ್ರೀದೇವಿ ಪಾಟೀಲ್ ಸೇರಿದಂತೆ ಕವಿ ಕವಯಿತ್ರಿಯರು ತಮ್ಮ ಸ್ವರಚನ ಕವಿತೆಗಳನ್ನು ವಾಚನ ಮಾಡಿದರು. ಬಸವರಾಜ ಧನ್ನೂರ, ಬಾಲಾಜಿ ಕುಂಬಾರ, ಧರ್ಮೇಂದ್ರ ಪೂಜಾರಿ, ಶ್ರೇಯಾ ಮಹೀಂದ್ರಕರ್ ,ಕಲ್ಲಪ್ಪ ಚನ್ನಬಸಪ್ಪ ಮಲ್ಲಿಗೆವಾಡ್ ಧಾರವಾಡ, ಮಲ್ಲಿಕಾರ್ಜುನ ರಾಂಪುರೆ, ಡಾ. ಮಕ್ತುಂಬಿ, ಗಂಗಮ್ಮಾ ಕೂಡ್ಲೀಕರ್, ಶ್ರೀಮತಿ ಅಂಕಿತಾ ಬಚ್ಚಣ್ಣ ಯೋಗೇಂದ್ರ ಯದಲಾಪುರೆ, ಶಿಲ್ಪಾ ಪಾಟೀಲ್ ಸೇರಿದಂತೆ ಹಲವು ಗಣ್ಯರಿಗೆ ಗೌರವ ಸನ್ಮಾನಗಳನ್ನು ಮಾಡಲಾಯಿತು. ಸಂಗೀತ ಕಾರ್ಯಕ್ರಮದಲ್ಲಿ ಶಿವಕುಮಾರ ಪಾಂಚಳ, ಹಾವಗಿರಾವ, ಶೆಂಬೆಳ್ಳಿ, ಜಗನ್ನಾಥ್ ಯರ್ನಳ್ಳಿ, ದೇವದಾಸ ಚಿಮಕೋಡ್, ಮಲ್ಲಿಕಾರ್ಜುನ್ ರಾಂಪುರೆ, ರೇವಣಪ್ಪ ಮೂಲಗೆ, ಚಂದ್ರಕಾಂತ ಪೂಜಾರಿ, ರಮೇಶ ಕೊಳಾರ,ಶ್ರೀಮತಿ ಗಂಗಮ್ಮ, ಶ್ರೀಮತಿ ಮಹಾದೇವಿ ಪಾಟೀಲ, ಸಂಜೀವ್ ಕುಮಾರ ಸ್ವಾಮಿ ಉಜನಿ, ಶೇಶಪ್ಪ ಚಿಟ್ಟಾ, ಕಾಂಚನ ಜೋಳದಾಬಕೆ,ಶ್ರೀಮತಿ ಲಕ್ಷ್ಮೀ ಬಾಯಿ ಚಿದರಿ ಸೇರಿದಂತೆ ಹಲವು ಕಲಾವಿದರು ಮತ್ತು ಅವರ ತಂಡಗಳಿಂದ ಅದ್ಧೂರಿಯಾದ ಸಂಗೀತವನ್ನು ಪ್ರದರ್ಶನಮಾಡಿ ಪ್ರೇಕ್ಷಕರ ಮನ ತಣಿಸಿದರು. ಕಾರ್ಯಕ್ರಮದಲ್ಲಿ ಕುಮಾರಿ ಆಸ್ತಾ , ಕು. ಅವಿಷ್ಕಾ, ಹಾಗೂ ಕು. ನಿರೂಪಮಾರವರು ನೃತ್ಯಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾಶಿನಾಥ್ ಖಪ್ಲೆ, ರಮೇಶ ಇಟಗಿ, ಸೇರಿದಂತೆ ಅನೇಕ ಕಲಾವಿದರು ನೂರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು. ಶಿಲ್ಪಾ ಮಜ್ಜಗೆ ಅವರು ಸ್ವಾಗತವನ್ನು ಕೋರಿದರೆ ಶ ದೇವದಾಸ್ ಜೋಶಿ ಹಾಗೂ ಶ್ರೀಮತಿ ಸುನೀತಾ ಬಿರಾದ ಮತ್ತು ಯೋಗೇಂದ್ರ ಯದಲಾಪೂರೆರವರು ಕಾರ್ಯಕ್ರಮವನ್ನು ನಿರೂಪಿಸಿದರು. ಆರ್ .ಎಸ್ .ಬಿರಾದರರವರು ಕಾರ್ಯಕ್ರಮಕ್ಕೆ ವಂದನಾರ್ಪಣೆ ಸಲ್ಲಿಸಿದರು.