ಪ್ರಧಾನಿ ವಿದೇಶ ಪ್ರವಾಸವನ್ನು ಟೀಕಿಸುವ ಅಪ್ಪ- ಮಗನ ವಾಸ್ತವ ಮೌಢ್ಯತನಕ್ಕೆ ಸಾಕ್ಷಿ : ಡಾ ಉಮೇಶ್ ಜಾಧವ್ ಟೀಕೆ

ಪ್ರಧಾನಿ ವಿದೇಶ ಪ್ರವಾಸವನ್ನು ಟೀಕಿಸುವ ಅಪ್ಪ- ಮಗನ ವಾಸ್ತವ ಮೌಢ್ಯತನಕ್ಕೆ ಸಾಕ್ಷಿ :  ಡಾ ಉಮೇಶ್ ಜಾಧವ್ ಟೀಕೆ

ಪ್ರಧಾನಿ ವಿದೇಶ ಪ್ರವಾಸವನ್ನು ಟೀಕಿಸುವ ಅಪ್ಪ- ಮಗನ ವಾಸ್ತವ ಮೌಢ್ಯತನಕ್ಕೆ ಸಾಕ್ಷಿ : ಡಾ ಉಮೇಶ್ ಜಾಧವ್ ಟೀಕೆ 

ನೀಟ್ ಅಕ್ರಮ ಟೀಕಿಸುವವರಿಗೆ ಕೃಷಿ ಪರೀಕ್ಷಾ ಅಕ್ರಮ ಕಂಡಿಲ್ಲವೇಕೆ? ಪ್ರಶ್ನೆ

ಕಲಬುರಗಿ : ಪ್ರಧಾನಿಯವರ ವಿದೇಶಿ ಪ್ರವಾಸ ಟೀಕಿಸುವ ಅಪ್ಪ ಮಗ ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕ ಖರ್ಗೆ ರಾಹುಲ್ ವಿದೇಶ ಪ್ರವಾಸದ ಬಗ್ಗೆ ಮೌನ ವಹಿಸಿರುವುದು ಅವರು ಗಾಂಧಿ ಮನೆತನಕ್ಕೆ ತೋರುವ ನಿಷ್ಠೆಯೇ? ವಾಸ್ತವ ತಿಳಿಯದ ಮೌಢ್ಯತನಕ್ಕೆ ಇದು ಸಾಕ್ಷಿ ಎಂದು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಟೀಕಿಸಿದ್ದಾರೆ.

    ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸ ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸುತ್ತಿದ್ದು ಆರ್ಥಿಕ ಬಲ ವೃದ್ಧಿ ಮಾಡುತ್ತಿದೆ. ಆದರೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕೈಗೊಂಡ ವಿದೇಶ ಪ್ರವಾಸ ಯಾರ ಹಣದಿಂದ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ 11 ಕೋಟಿ ಆಸ್ತಿ ಘೋಷಣೆ ಮಾಡಿರುವ ರಾಹುಲ್ ಗಾಂಧಿಯವರು ಇಲ್ಲಿಯವರೆಗೆ 22 ವರ್ಷಗಳಲ್ಲಿ ಸಂಸದರಾಗಿ ಆಯ್ಕೆ ಹೊಂದಿ ಸುಮಾರು 54 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅದರ ಖರ್ಚು ಸುಮಾರು 60 ಕೋಟಿ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಹಣ ಯಾರ ಪ್ರಾಯೋಜಕತ್ವದಿಂದ ಆಗಿದೆ ಎಂಬುದನ್ನು ಜನತೆಗೆ ತಿಳಿಯಪಡಿಸಲಿ. ದೇಶದ ಎಲ್ಲ ವಿದ್ಯಮಾನಗಳ ಬಗ್ಗೆ ತುತ್ತೂರಿ ಬಾರಿ ಸುತ್ತಿರುವ ಪ್ರಿಯಾಂಕ ಖರ್ಗೆಯವರ ಹೇಳಿಕೆಗಳ ಭರಾಟೆ ಈಗ ನಗೆ ಪಾಟಲಿಗೀಡಾಗುತ್ತಿದೆ. ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಬಿಕ್ಕಟ್ಟಿನ ಪರಿಣಾಮದಿಂದ ತೈಲ ಬೆಲೆ ಏರಿಕೆಗೊಂಡ ನಗ್ನ ಸತ್ಯ ಜನಸಾಮಾನ್ಯರಿಗೆ ಅರ್ಥವಾಗುತ್ತಿದ್ದರೂ ಪ್ರಿಯಾಂಕ ಖರ್ಗೆಗೆ ಮಾತ್ರ ಇದು ಅರ್ಥವಾಗದಿರುವುದು ಅವರ ಬಾಲಿಶತನಕ್ಕೆ ಸಾಕ್ಷಿಯಾಗಿದೆ.ಪುಕ್ಕಟೆ ಹೇಳಿಕೆಗಳ ಮೂಲಕ ಹಿಟ್ ಅಂಡ್ ರನ್ ಆಗುವ ಖರ್ಗೆಯವರು ನೀಟ್ ಅಕ್ರಮವನ್ನು ಸಿಬಿಐಗೆ ಒಪ್ಪಿಸಿ ಸರಣಿ ಬಂಧನ ನಡೆಸಿ ಕಂಬಿ ಎನಿಸುವಂತೆ ಮಾಡಿ ಕೇಂದ್ರ ಸರ್ಕಾರವು ದಿಟ್ಟ ಹೆಜ್ಜೆ ಇಟ್ಟಿರುವ ಬಗ್ಗೆ ಗಮನಕ್ಕೆ ಬಂದಿಲ್ಲವೇ? ಆದರೆ ರಾಜ್ಯದಲ್ಲಿ ಕೃಷಿ ಪರೀಕ್ಷೆ ಅಕ್ರಮ ನಡೆದು ರೈತರ ಮಕ್ಕಳ ಭವಿಷ್ಯವನ್ನು ಚಿವುಟಿ ಹಾಕಿದ ರಾಜ್ಯ ಸರ್ಕಾರ ಯಾರನ್ನು ಬಂಧಿಸಿದೆ? ಈ ಬಗ್ಗೆ ಸರಕಾರದ ವೈಫಲ್ಯ ಪ್ರಿಯಾಂಕ ಖರ್ಗೆ ಯವರಿಗೆ ಕಾಣುತ್ತಿಲ್ಲವೇ ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ದೇಶದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೆದ ಎಲ್ ಟಿ ಟಿ ಇ ಮುಖ್ಯಸ್ಥ ಪ್ರಭಾಕರ ಹತ್ಯೆ ದಿನದಂದು ತಮಿಳುನಾಡಿನ ಕಾಂಗ್ರೆಸ್ ಬೆಂಬಲಿತ ಮುಖ್ಯಮಂತ್ರಿ ಜೋಸೆಫ್ ವಿಜಯ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಹಂಚಿಕೊಂಡ ಬಗ್ಗೆ ಅಪ್ಪ - ಮಗ ಮೌನ ವಹಿಸಿದ್ದು ಯಾಕೆ ? ತಮ್ಮ ನಾಯಕನನ್ನು ಕೊಂದವರ ಬಗ್ಗೆ ಶ್ರದ್ಧಾಂಜಲಿ ಸಲ್ಲಿಸಿದರೂ ಪ್ರತಿಕ್ರಿಯೆಸದೆ ಅವನತಿ ಹಾದಿ ಹಿಡಿದ ಕಾಂಗ್ರೆಸ್ ತನ್ನ ಮಾನ ಉಳಿಸಲು ಅಪವಿತ್ರ ಮೈತ್ರಿ ಮಾಡಿಕೊಂಡ ಪರಿಣಾಮವಾಗಿ ಮೌನವಾಗಿ ಈ ನಾಟಕ ಮಾಡುತ್ತಿದೆ ಎಂದು ದೂರಿದ್ದಾರೆ.

ಲೋಕಸಭಾ ಸದಸ್ಯರನ್ನು ಹುಡುಕಿಕೊಡಿ

   ನವ ಕಲಬುರಗಿ ನಿರ್ಮಾಣ ಗ್ಯಾರಂಟಿ ಘೋಷಣೆ ಮಾಡುವ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ನಗರದಲ್ಲಿ ಒಂದು ಬಾರಿ ಪ್ರದಕ್ಷಿಣೆ ಬಂದರೆ ಗಬ್ಬು ವಾಸನೆ ಬೀರುವ ಚರಂಡಿಗಳು,

ಧೂಳು ತಿನ್ನುತ್ತಿರುವ ರಸ್ತೆ, ಹದಗೆಟ್ಟ ಟ್ರಾಫಿಕ್ ಸಿಗ್ನಲ್, ಕೆಟ್ಟ ಸ್ಥಿತಿಯ ಉದ್ಯಾನವನಗಳು, ಕುಸಿದು ಬೀಳುತ್ತಿರುವ ಸರಕಾರಿ ಕಟ್ಟಡಗಳು, ಕಿತ್ತು ಹೋದ ಪಾದಾಚಾರಿ ರಸ್ತೆ, ತ್ಯಾಜ್ಯದ ರಾಶಿಗಳ ದರ್ಶನವಾಗುತ್ತದೆ. ಕಲಬುರಗಿ ಲೋಕಸಭಾಸದಸ್ಯ ರನ್ನು ಹುಡುಕಿಕೊಡಿ ಎಂದು ಜನತೆ ಪ್ರಶ್ನಿಸುತ್ತಿದ್ದರೂ ಈ ಬಗ್ಗೆ ಖರ್ಗೆ ಮಾತ್ರ ಚಕಾರವೆತ್ತುತ್ತಿಲ್ಲ. ಕಾಂಗ್ರೆಸ್ ಸರಕಾರವು ಕಳೆದ ಮೂರು ವರ್ಷಗಳಲ್ಲಿ ಕೊಟ್ಟ ಅಭಿವೃದ್ಧಿ ಶೂನ್ಯದ ಸಮರ್ಪಣೆ ತುಮಕೂರಿನಲ್ಲಿ ಮಾಡಿ ತನ್ನ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದೆ ಎಂದು ಡಾ.ಜಾಧವ್ ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.