2026-27 ನೇ ಶೈಕ್ಷಣಿಕ ಸಾಲಿನ ಪಿಯುಸಿ ತರಗತಿಗಳ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ
2026-27 ನೇ ಶೈಕ್ಷಣಿಕ ಸಾಲಿನ ಪಿಯುಸಿ ತರಗತಿಗಳ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ
ಕಲಬುರ್ಗಿ: ಅನೇಕ ಶೈಕ್ಷಣಿಕ ಸಮಸ್ಯೆಗಳು, ಗೊಂದಲದ ಇಲಾಖೆಯ ಆದೇಶಗಳ ಒತ್ತಡಗಳ ಮಧ್ಯೇಯು ಈ ಬಾರಿಯ ಪಿಯುಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿದ ಉಪನ್ಯಾಸಕರು ನಿಜವಾಗಿಯು ಅಭಿನಂದನೆಗೆ ಅರ್ಹರು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದರು.
ಅವರು ಕಲಬುರ್ಗಿ ನಗರದ ಸರ್ಕಾರಿ ಬಾಲಿಕೆಯರ ಪದವಿಪೂರ್ವ ಕಾಲೇಜು ಹಾಗೂ ಆದರ್ಶನಗರ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಜರುಗಿದ 2026-27 ನೇ ಸಾಲಿನ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ತಮ್ಮ ನಿರಂತರ ಪರಿಶ್ರಮ, ಬೋಧನಾ ಕೌಶಲ್ಯ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನೀಡಿದ ಮಾರ್ಗದರ್ಶನವು ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳ ಸಾಧನೆ ಮತ್ತು ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣದಲ್ಲಿ ದಾಖಲಾಗಿರುವ ಏರಿಕೆಯು ಶ್ಲಾಘನೀಯ ಎಂದು ಹೇಳಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಪನ್ಯಾಸಕರ ಕೊರತೆಯಿದೆ ಹೀಗಾಗಿ ಫಲಿತಾಂಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ ಇರಬಹುದು ಆದರೆ ಶೇಕಡಾವಾರು ಫಲಿತಾಂಶದಲ್ಲಿ ಸುಧಾರಣೆಯಾಗಿದ್ದು ಇಡಿ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ, ರ್ಯಾಂಕ್ ವಿಜ್ಞಾನ , ವಾಣಿಜ್ಯ ವಿಭಾಗದಲ್ಲಿಯು ರಾಜ್ಯದ 10 ರ್ಯಾಂಕ್ ಗಳ ಪಟ್ಟಿಯಲ್ಲಿ ಗುರುತಿಸಿ ಕೊಂಡಿರುವದು ನಮ್ಮ ಜಿಲ್ಲೆಗೆ ಸಂತಸದ ವಿಷಯ, ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ಜಾಣ್ಮೆಯನ್ನು ಈ ಭಾರಿಯ ಫಲಿತಾಂಶದ ಸ್ಪಷ್ಟವಾಗಿ ನಿರೂಪಿಸಿದ್ದಾರೆ ಎಂದು ಹೇಳಿದರು
ನಂತರ ವಿದ್ಯಾರ್ಥಿಗಳಿ ಪುಷ್ಪ ವಿತರಿಸುವ ಮೂಲಕ ಸ್ವಾಗತಿಸಿ ಪಿಯುಸಿ ವಿದ್ಯಾರ್ಥಿ ಜೀವನವು ಮಾನವನ ಜೀವನದ ಸುವರ್ಣ ಕಾಲ ಮತ್ತು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಿದೆ. ಈ ಹಂತದಲ್ಲಿ ಕಲಿಯುವ ಗುಣಗಳು, ಶಿಸ್ತು ಮತ್ತು ಮೌಲ್ಯಗಳು ವ್ಯಕ್ತಿಯ ಇಡೀ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಭವಿಷ್ಯದಲ್ಲಿ ಏನಾಗಬೇಕು ಎಂಬ ಸ್ಪಷ್ಟ ಗುರಿಯನ್ನು ರೂಪಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಹೇಳಿದರು
ಈ ಸಂದರ್ಭದಲ್ಲಿ ಸರ್ಕಾರಿ ಬಾಲಿಕೆಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ದೇವನಗೌಡ ಪಾಟೀಲ್, ಆದರ್ಶನಗರ ಕಾಲೇಜಿನ ಪ್ರಾಚಾರ್ಯರಾದ ರಾಜು ಗಂಗಾಧರ್ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಜೆ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ ಹಾಗೂ ಎರಡು ಕಾಲೇಜಿನ ಎಲ್ಲ ಉಪನ್ಯಾಸಕರು ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು
