ಹಿರಿಯರು ಸಂಘಟಿಸಿದ ಪಕ್ಷ ಹೆಮ್ಮರವಾಗಿ ಬೆಳೆದಿದೆ
ಹಿರಿಯರು ಸಂಘಟಿಸಿದ ಪಕ್ಷ ಹೆಮ್ಮರವಾಗಿ ಬೆಳೆದಿದೆ
ನಾಗರಾಜ್ ದಂಡಾವತಿ ವರದಿ ಶಹಾಬಾದ: ಬಿಜೆಪಿ ಮಂಡಲದ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಪ್ರಯುಕ್ತ ಪಕ್ಷದ ಧ್ವಜಾರೋಹಣ ನೆರವೇರಿಸಿ ಸಮಾರಂಭಆಚರಿಸಲಾಯಿತು.
ಮಂಡಲ ಅಧ್ಯಕ್ಷ ನಿಂಗಪ್ಪ ಹುಳಗೊಳಕರ ರವರು ಪಕ್ಷದ ಧ್ವಜ ಧ್ವಜಾರೋಹಣ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಬಿಜೆಪಿಯ ಹುಟ್ಟು, ಬೆಳೆದು ಬಂದ ಹಾದಿಯನ್ನು ವಿವರಿಸಿದರು.
ಭೀಮರಾವ ಸಾಳುಂಕೆ, ಅರುಣ ಪಟ್ಟಣಕರ, ಕನಕಪ್ಪ ದಂಡಗುಲಕರ, ಬಸವರಾಜ ಬಿರಾದಾರ ಮಾತನಾಡಿ,ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಥಾಪನೆಗೊಂಡು ಇಂದಿಗೆ 46 ವರ್ಷಗಳು, 1980ರ ಏಪ್ರಿಲ್ 6ರಂದು ಸ್ಥಾಪನೆಗೊಂಡ ಬಿಜೆಪಿ ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದೇವೆ,
ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ
ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿ. ಹಲವು ಹಿರಿಯ-ಕಿರಿಯ ನಾಯಕರು ಸಂಘಟಿಸಿದ ಪಕ್ಷವು ಈಗ ಹೆಮ್ಮರವಾಗಿ ಬೆಳೆದಿದೆ ಎಂದರು.
ಬಳಿಕ ನಡೆದ ಸರಳ ಕಾರ್ಯಕ್ರಮದಲ್ಲಿ ಪಕ್ಷದ ಮೂಲ ಸಂಘಟನೆ ಜನಸಂಘದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಹಿರಿಯ ಬಿಜೆಪಿ ಮುಖಂಡರು ಸನ್ಮಾನಿಸಿದರು.
ದೇವದಾಸ ಜಾಧವ ಸ್ವಾಗತಿಸಿ, ನಿರೂಪಿಸಿದರು, ದಿನೇಶ ಗೌಳಿ ವಂದನಾರ್ಪಣೆ ಮಾಡಿದರು.
ಅನೀಲ ಬೊರಗಾಂಕರ, ನವನಾಥ ಕುಸಾಳೆ, ಮಹದೇವ ಗೊಬ್ಬರ, ಸಿದ್ರಾಮ ಕುಸಾಳೆ, ಗೊವಿಂದ ಕುಸಾಳೆ, ಶರಣು ಕೌಲಗಿ, ಲೋಹಿತ ಮಳಖೇಡ, ರೇವಣಸಿದ್ದ ಮತ್ತಿಮಡು, ಶ್ರೀನಿವಾಸ ದೇವಕರ, ಉಮೇಶ ನಿಂಬಾಳಕರ, ಭೀಮಯ್ಯ ಗುತ್ತೆದಾರ, ಮೋಹನ ಗಂಟ್ಲಿ, ದತ್ತಾತ್ರೇಯ ಘಂಟಿ, ಅನೀಲ ದೊಡಮನಿ, ಜ್ಯೋತಿ ಶರ್ಮಾ ಶಶಿಕಲಾ ಸಜ್ಜನ, ನಂದಾ ಗುಡೂರ, ಶ್ರೀಧರ ಜೋಶಿ, ಸತೀಶ್ ರಾಪನೂರ, ಸುನಿಲ ಪುಜಾರಿ, ಅವಿನಾಶ್ ಸಾಳುಂಕೆ, ವಿಕಾಶ ಕರಣಿಕ ಉಪಸ್ಥಿತರಿದರು.
