ರಾವೂರ ಶ್ರೀ ಸಿದ್ದಲಿಂಗ ಶ್ರೀಗಳ ಜನ್ಮ ದಿನದಂದು ಉಚಿತ ಕ್ಷೌರ ಸೇವೆ:..
ರಾವೂರ ಶ್ರೀ ಸಿದ್ದಲಿಂಗ ಶ್ರೀಗಳ ಜನ್ಮ ದಿನದಂದು ಉಚಿತ ಕ್ಷೌರ ಸೇವೆ:..
ಶಹಾಬಾದ : - ತಾಲ್ಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಸಿದ್ದಲಿಂಗ ಮಹಾಸ್ವಾಮಿಗಳ 34ನೇ ಜನ್ಮದಿನವನ್ನು ಉಚಿತ ಕ್ಷೌರ ಸೇವೆಯ ಮೂಲಕ ಆಚರಣೆ ಮಾಡಲಾಯಿತು.
ರಾವೂರ ಗ್ರಾಮದ ಗುರು ಮೆನ್ಸ್ ಪಾರ್ಲರ್ ವತಿಯಿಂದ ನಿರಂತರ 3ನೇ ವರ್ಷ ಉಚಿತ ಕ್ಷೌರ ಸೇವೆಯನ್ನು ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಹುಟ್ಟು ಹಬ್ಬಗಳನ್ನು ಸಮಾಜಮುಖಿಯಾಗಿ ಆಚರಣೆ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ.
ಬಡವರಿಗೆ, ಅಂಗವಿಕಲರಿಗೆ, ದುರ್ಬಲರಿಗೆ ಸಹಾಯ ಮಾಡುವ ಮೂಲಕ ಮಾದರಿಯಾಗಬೇಕು ಅಂತಹ ಕಾರ್ಯವನ್ನು ಶ್ರೀಗುರು ಮೆನ್ಸ್ ಪಾರ್ಲರ್ ಉಚಿತ ಕ್ಷೌರ ಸೇವೆ ಮಾಡುವ ಮೂಲಕ ಮಾದರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
150ಕ್ಕೂ ಹೆಚ್ಚಿನ ಜನರಿಗೆ ಕ್ಷೌರ ಸೇವೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾದೇವ ವಡಗೇರಿ, ಗಂಗೂ ವಡಗೇರಿ, ಭಾಗಣ್ಣ ವಡಗೇರಿ, ಅಂಬರೀಷ್, ಶರಣಪ್ಪ, ಮಹೇಶ ಬಾಳಿ, ಶಾಂತು ಬಾಳಿ, ಭೀಮರಾವ ಪಾಟೀಲ್, ಈರಣ್ಣ ಕಲ್ಯಾಣಿ,ಶಿವಾನಂದ ಕೋರಿ ಸಿದ್ದು ಪೂಜಾರಿ, ಬಸವರಾಜ ಪೂಜಾರಿ, ಗುರು ಗುತ್ತೇದಾರ, ಅಂಬರೀಶ್ ಸಾಂಗ್ಲಿಯಾನ, ಅಶೋಕ್ ಗೋಳಾ,ನಾಗು ಮಾಲಗತ್ತಿ, ರೇವಣಸಿದ್ಧ ವಲoಡಿ,ಸಿದ್ದು ಮದಗುಣಕಿ,ಈರಣ್ಣ ಪೂಜಾರಿ ಇದ್ದರು.
