ಎಸ್.ಎಸ್.ಎಲ್.ಸಿ ಯಲ್ಲಿ ಅಮೂಲ್ಯ ಉತ್ತಮ ಸಾಧನೆ
ಎಸ್.ಎಸ್.ಎಲ್.ಸಿ ಯಲ್ಲಿ ಅಮೂಲ್ಯ ಉತ್ತಮ ಸಾಧನೆ
ಶಹಪುರ : ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಅಮೂಲ್ಯ ತಂದೆ ಬಸವಲಿಂಗಪ್ಪ ಜಾಯಿ 2025 - 26 ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾಳೆ.ಶಾಲೆಗೆ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದಾಳೆ.
ಒಟ್ಟು 625/597 ಅಂದರೆ ಪ್ರತಿಶತ 95:52 % ಅಂಕಗಳು ಗಳಿಸುವ ಮೂಲಕ ಕಲಿತ ಶಾಲೆಗೂ ಹಾಗೂ ಹುಟ್ಟಿದ ಊರಿಗೆ ಕೀರ್ತಿ ತಂದಿದ್ದಾಳೆ.ಈ ಶಾಲೆಯಲ್ಲಿ ಒಟ್ಟು 134 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು,ಅದರಲ್ಲಿ 102 ವಿದ್ಯಾರ್ಥಿಗಳು ಉತ್ತೀರ್ಣಗೊಂಡರು,ಡಿಸ್ಟಿಂಕ್ಷನಲ್ಲಿ - 5,ಪ್ರಥಮ-33.ದ್ವಿತೀಯ - 25, ತೃತಿಯ 39 - ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಶಾಲೆಯಲ್ಲಿ ಗುರುಗಳು ಹೇಳಿಕೊಟ್ಟ ಪಾಠ,ತಂದೆ ತಾಯಿಯ ಆಶೀರ್ವಾದ,ಸತತ ಪ್ರಯತ್ನದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಂತೋಷದಿಂದ ಹೇಳಿದರು. ಸಾಧನೆಗೆ ಶಾಲೆಯ ಮುಖ್ಯ ಗುರುಗಳಾದ ವಿಶ್ವನಾಥ್ ಯರಗೋಳ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
