ಒಳಮೀಸಲಾತಿ ಜಾರಿ: ಮಾದಿಗ ಸಮುದಾಯದ ಹೋರಾಟಕ್ಕೆ ಜಯ – ಶ್ರೀನಿವಾಸ್ ರಾಮನಾಳಕರ್ ಹರ್ಷ

ಒಳಮೀಸಲಾತಿ ಜಾರಿ: ಮಾದಿಗ ಸಮುದಾಯದ ಹೋರಾಟಕ್ಕೆ ಜಯ – ಶ್ರೀನಿವಾಸ್ ರಾಮನಾಳಕರ್ ಹರ್ಷ

ಒಳಮೀಸಲಾತಿ ಜಾರಿ: ಮಾದಿಗ ಸಮುದಾಯದ ಹೋರಾಟಕ್ಕೆ ಜಯ – ಶ್ರೀನಿವಾಸ್ ರಾಮನಾಳಕರ್ ಹರ್ಷ

ಕಲಬುರಗಿ: ಮಾದಿಗ ಸಮುದಾಯದ ಬಹು ದಿನಗಳ ಬೇಡಿಕೆಯಾದ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಲಬುರಗಿ ದಕ್ಷಿಣ ಮತಕ್ಷೇತ್ರ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಮಾದಿಗ ಸಮಾಜದ ಯುವ ಮುಖಂಡರಾದ ಶ್ರೀನಿವಾಸ್ ರಾಮನಾಳಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಪರಿಶಿಷ್ಟ ಜಾತಿಗಳ ಒಳಗೆ ಬರುವ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ರಾಮನಾಳಕರ್ ಗೌರವಪೂರ್ವಕ ಅಭಿನಂದನೆ ಸಲ್ಲಿಸಿದರು.

ಇದು ಮಾದಿಗ ಸಮುದಾಯದ ಹೋರಾಟಗಾರರು ನಡೆಸಿದ ದೀರ್ಘಕಾಲದ ಹೋರಾಟದ ಫಲವಾಗಿದ್ದು, ಸಮುದಾಯದ ನ್ಯಾಯವಾದ ಬೇಡಿಕೆಗೆ ದೊರೆತ ಮಹತ್ವದ ಜಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಂಜುನಾಥ ಲೆಂಗಟಿ (ವಕೀಲರು), ರಾಜು ವರವಿ, ಸಾಗರ ಸಾವುರ್, ರಾಜು ಜಿನಕೇರಿ, ಅಶ್ವತಮ್ ಬೆಳಗುಂದಿ ಉಪಸ್ಥಿತರಿದ್ದರು.