ಶಮೀಮ್ ಬೇಗಂಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 77.44% ಅಂಕ — ಉತ್ತಮ ಸಾಧನೆ

ಶಮೀಮ್ ಬೇಗಂಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 77.44% ಅಂಕ — ಉತ್ತಮ ಸಾಧನೆ

ಶಮೀಮ್ ಬೇಗಂಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 77.44% ಅಂಕ — ಉತ್ತಮ ಸಾಧನೆ

ಕಲಬುರ್ಗಿ: ನಗರದ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಶಮೀಮ್ ಬೇಗಂ ಅವರು ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 484 ಅಂಕಗಳನ್ನು ಗಳಿಸಿ ಶೇ.77.44 ಫಲಿತಾಂಶದೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.

ಶಮೀಮ್ ಬೇಗಂ ಅವರು ಮಹ್ಮದ್ ನವಾಜ್ ಅವರ ಪುತ್ರಿಯಾಗಿದ್ದು, ಕಲಬುರ್ಗಿಯ ಇಮ್ಲಿ ಮೊಹಲ್ಲಾ ಮೋಮಿನಪೂರ ನಿವಾಸಿಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಯಿಂದ ಕುಟುಂಬದವರಲ್ಲಿ ಸಂತಸ ವ್ಯಕ್ತವಾಗಿದೆ.

ತಮ್ಮ ಈ ಯಶಸ್ಸಿಗೆ ಪೋಷಕರ ಪ್ರೋತ್ಸಾಹ ಹಾಗೂ ಶಾಲಾ ಶಿಕ್ಷಕರ ಮಾರ್ಗದರ್ಶನವೇ ಮುಖ್ಯ ಕಾರಣವೆಂದು ಶಮೀಮ್ ಬೇಗಂ ತಿಳಿಸಿದ್ದಾರೆ. ಈ ಸಾಧನೆಗೆ ಶಾಲೆಯ ಮುಖ್ಯಗುರುಗಳು, ಆಡಳಿತ ಮಂಡಳಿ, ಶಿಕ್ಷಕವೃಂದ ಹಾಗೂ ಪಾಲಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.