ರಮೇಶ ಜಿಗಜಿಣಗಿ ಹೇಳಿಕೆಗೆ ಟೀಕೆ ಮಾಡುವುದು ಸರಿಯಲ್ಲ
ರಮೇಶ ಜಿಗಜಿಣಗಿ ಹೇಳಿಕೆಗೆ ಟೀಕೆ ಮಾಡುವುದು ಸರಿಯಲ್ಲ
ಕಲಬುರಗಿ: ವಿಜಯಪುರ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಜವಾಬ್ದಾರಿತ ಸ್ಥಾನದಲ್ಲಿದ್ದು ಕರ್ನಾಟಕದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ ಎಂದು ದಲಿತ ಮುಖಂಡರು ಟೀಕಿಸುತ್ತಿದ್ದು ಇದನ್ನು ಮಾದಿಗ ಸಮಾಜವು ತೀವ್ರವಾಗಿ ಖಂಡಿಸುತ್ತದೆ ಎಂದು ಮಾದಿಗ ಸಮಾಜದ ಯುವ ಮುಖಂಡ ಪ್ರದೀಪ ಬಾಚನಳ್ಳಿಕರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,
ರಮೇಶ ಜಿಗಜಿಣಗಿ ಅವರು ಹೇಳಿದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು ಒಬ್ಬ ದಲಿತ ಸಮುದಾಯದ ನಾಯಕ ಪ್ರಿಯಾಂಕ ಖರ್ಗೆಯವರು ಆರ್.ಎಸ್.ಎಸ್. ಕಛೇರಿಗೆ ಪತ್ರ ಬರೆದು ಪ್ರಶ್ನೆ ಕೇಳುವುದು ಎಷ್ಟರ ಮಟ್ಟಿಗೆ ಸರಿ ಇದೆ ಎನ್ನವುದು ಯೋಚನೆ ಮಾಡಿ.ಏಕೆಂದರೆ ಆರ್.ಎಸ್.ಎಸ್ ವಿಷಯ ಬಂದಾಗ ಮಾತ್ರ ದಲಿತರ ನಡುವೆ ಜಗಳ ಹಚ್ಚುವ ಕೆಲಸ ಆಗುತ್ತಿವೆ.ರಮೇಶ್ ಜಿಗಜಿಣಗಿ ಅವರು ದಲಿತ ಸಮುದಾಯದ ನಾಯಕರಾಗಿದ್ದು ಅವರು ಆರ್.ಎಸ್.ಎಸ್ ಪರವಾಗಿ ಮಾತನಾಡಿದ್ದಾರೆ ಹೊರತು ಯಾರ ವಿರುದ್ದವು ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಇಂತಹ ರಾಜಕೀಯ ವಿಷಯಗಳು ಬಂದಾಗ ಎಡಗೈ ಮತ್ತು ಬಲಗೈ ನಡುವೆ ಜಗಳ ಹಚ್ಚುವ ಕೆಲವಾಗಿತ್ತಿವೆ. ಎಡಗೈ ಮತ್ತು ಬಲಗೈ ಸಮುದಾಯದ ಮುಖಂಡರು ಅಣ್ಣ ತಮ್ಮಂದಿರ ಇದ್ದ ಹಾಗೆ ಇದ್ದೇವೆ ಅದನ್ನು ಬಿಟ್ಟು ರಾಜಕೀಯ ವಿಷಯಗಳು ಬಂದಾಗ ಟೀಕೆಗಳು ಮಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿದ್ದರು.
