ಬಡತನದಲ್ಲಿ ಅರಳಿದ ಪ್ರತಿಭೆ: ನಿಖಿಲ್‌ಗೆ 88.8% ಅಂಕ
ಬಡತನದಲ್ಲಿ ಅರಳಿದ ಪ್ರತಿಭೆ: ನಿಖಿಲ್‌ಗೆ 88.8% ಅಂಕ
ಅಫಜಲಪುರ ತಾಲೂಕು ಸಂಗಾಪುರ ಗ್ರಾಮದ ವಿದ್ಯಾರ್ಥಿ ಕು. ನಿಖಿಲ್ (ತಂದೆ: ನಿಂಗಪ್ಪ ಯಂಕಂಚಿ) ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 88.8% ಅಂಕಗಳನ್ನು ಗಳಿಸಿ ಸ.ಪ್ರೌ.ಶಾಲೆ ಹಸರಗುಂಡಗಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಬಡತನದ ನಡುವೆಯೂ ಸಾಧನೆ ಮಾಡಿರುವ ನಿಖಿಲ್, ಗ್ರಾಮ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ತಾಯಿ-ತಂದೆ ಹಾಗೂ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗುರುಗಳಾದ ಜಾವೀದ ಹುಂಡೇಕಾರ ಸೇರಿದಂತೆ ಗ್ರಾಮಸ್ಥರಾದ ರಾಜಕುಮಾರ ಯಂಕಂಚಿ, ಕಲ್ಯಾಣಿ ಯಂಕಂಚಿ, ಸಿದ್ದಾರಾಮ ಮಾಹುರ, ಮಲ್ಕಣಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ ಮತ್ತು ಸ್ನೇಹಿತರ ಬಳಗದವರು ಅಭಿನಂದನೆ ಸಲ್ಲಿಸಿ, ನಿಖಿಲ್ ಅವರ ಮುಂದಿನ ವಿದ್ಯಾಭ್ಯಾಸ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.
