ಬೆಳಕೋಣಿ(ಚೌ) ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ

ಬೆಳಕೋಣಿ(ಚೌ) ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ

ಬೆಳಕೋಣಿ(ಚೌ) ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ

ಔರಾದ(ಬಿ) ವಿಧಾನಸಭಾ ಕ್ಷೇತ್ರದ ಔರಾದ-ಸದಾಶಿವಘಡ ರಾಜ್ಯ ಹೆದ್ದಾರಿಯ ಬೆಳಕೋಣಿ(ಚೌ) ಗ್ರಾಮದ ಸಮೀಪ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಏಪ್ರಿಲ್ 23 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮಗಾರಿಯ ಪ್ರಗತಿಯನ್ನು ಸವಿಸ್ತಾರವಾಗಿ ಅವಲೋಕಿಸಿದ ಅವರು, ಸಂಬAಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಮಾಹಿತಿ ಪಡೆದುಕೊಂಡರು. ಕಾಮಗಾರಿಯ ಗುಣಮಟ್ಟ, ಬಳಸಲಾಗುತ್ತಿರುವ ಸಾಮಗ್ರಿಗಳ ಮಟ್ಟ, ತಾಂತ್ರಿಕ ಅಂಶಗಳ ಕುರಿತು ವಿಚಾರಿಸಿದರು.

ಮಳೆಗಾಲದ ಸಂದರ್ಭದಲ್ಲಿ ರಸ್ತೆ ಕಡಿತಗೊಂಡು ಸಾಕಷ್ಟು ಅನಾನುಕೂಲ ಆಗುತ್ತಿರುವುದನ್ನು ಕಂಡು ಅವಶ್ಯಕ ಅನುದಾನ ತಂದು ಕಾಮಗಾರಿ ಆರಂಭಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿ ಕಾಲಮಿತಿಯಲ್ಲಿ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ವಿಳಂಬ ಅಥವಾ ಗುಣಮಟ್ಟದಲ್ಲಿ ಕೊರತೆಯುಂಟಾದರೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ರಾಜಕುಮಾರ ಸೋರಾಳೆ, ಧೊಂಡಿಬಾ ನರೋಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಪಕ್ಷದ ಕಾರ್ಯಕರ್ತ ಸುಜಿತ ನ್ಯಾಲಕಲೆ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

 *ಎಕಂಬಾ ಸೇತುವೆ ಪರಿಶೀಲನೆ:* ಎಕಂಬಾ ಗ್ರಾಮದ ಹತ್ತಿರ 2 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶಾಸಕರು ಇತ್ತೀಚೆಗೆ ಭೇಟಿ ನೀಡಿದರು.

ಉತ್ತಮ ಗುಣಮಟ್ಟದ ಸಿಮೆಂಟ್, ಕಬ್ಬಿಣ ಹಾಗೂ ಮತ್ತಿತರೆ ಎಲ್ಲಾ ನಿರ್ಮಾಣ ಸಾಮಗ್ರಿಗಳನ್ನು ಬಳಸುವ ಮೂಲಕ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕು. ಕ್ಯೂರಿಂಗ್ ಕಲಸ ಸರಿಯಾಗಿ ಆಗಬೇಕು. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಿಸಿಸರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಮೇಶ ಉಪಾಸೆ, ಮಾರುತಿ ವಾಡೆಕರ್, ಯೋಗೇಶ ಸುರನಾರ, ರಾಮ ಪಾಟೀಲ, ಹರಿ, ಬಾಲಾಜಿ ಕಾಸಲೆ, ಶರತ ಧನಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು..