ಮುಧೋಳ( ಬಿ) ಗ್ರಾಮದಲ್ಲಿ ಬಸವಣ್ಣವರ ಭವ್ಯ ಮೆರವಣಿಗೆ ನಡೆಯಿತು
ಮುಧೋಳ( ಬಿ) ಗ್ರಾಮದಲ್ಲಿ ಬಸವಣ್ಣವರ ಭವ್ಯ ಮೆರವಣಿಗೆ ನಡೆಯಿತು
ಕಮಲನಗರ: ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಗುರುಬಸವೇಶ್ವರ ಅನುಭವ ಮಂಟಪ ಆಶ್ರಯದಲ್ಲಿ ವಿಶ್ವಗುರು ಬಸವಣ್ಣನವರ 893 ನೆ ಬಸವ ಜಯಂತಿ ಉತ್ಸವ ಮಾಡಬೇಕಾಗಿತ್ತು ಬಸವಮೂರ್ತಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಮಧ್ಯಾಹ್ನ 12 ಗಂಟೆಗೆ ಗುರುಬಸವೇಶ್ವರ ಅನುಭವ ಮಂಟಪದಲ್ಲಿ ಶರಣೆ ಮಾತೆಯರಿಂದ ಜಗಜ್ಯೋತಿ ಬಸವಣ್ಣನವರ ತೊಟ್ಟಿಲ ಕಾರ್ಯಕ್ರಮ ನಡೆಯಿತು.
ಕಾಯಕ ಶರಣ ಮಾತೆಯರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತ್ತು ಹಾಗೂ ಸಾಯಂಕಾಲ 5.30 ಗಂಟೆಗೆ ಮೆರವಣಿಗೆ ಪ್ರಾರಂಭವಾಗಿ ಮಾತೆಯರಿಂದ ಕೋಲಾಟ ಹಾಗೂ ಮೆರವಣಿಗೆ ರಸ್ತೆ ಬೀದಿಗಳಲ್ಲಿ ಸಾಗಿ ಬಂದಿತ್ತು. ಗ್ರಾಮದ ಜನರ ಗಮನ ಸೆಳೆಯುವಂತಿತ್ತು ಅಲಂಕೃತವಾದ ರಥದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಲಂಕರಿಸಿ ಗ್ರಾಮದ ಮಾಜಿ ಅಧ್ಯಕ್ಷರಾದ ಶರಣ ಧನರಾಜ ಗುಡ್ಡ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಜಾನಂದ ವಟಿಗೆ ಶರಣ ಉದಯ ಕುಮಾರ ಹಳಕಾಯಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವ ಮೂಲಕ ಹಾಗೂ ರಾಷ್ಟ್ರೀಯ ಬಸವ ದಳ ಕಮಲನಗರ ತಾಲೂಕಿನ ಅಧ್ಯಕ್ಷರಾದ ಶರಣ ನಾಗಯ್ಯ ಸ್ವಾಮಿ ಯವರು ಧ್ವಜಾರೋಹಣ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಕಾರ್ಯಕ್ರಮದಲ್ಲಿ ಹಾವಗಿ ರಾವ ಒಟ್ಟಿಗೆ ಗುರುನಾಥ ವಟಿಗೆ ರಾಜಕುಮಾರ ಕುಂಬಾರ ರತಿಕಾಂತ ಸುನಿಲ ಕುಂಬಾರಗುಡ್ಡಬಸವರಾಜ ಕೆಳಗೆ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ರಮೇಶ ಗುಡ್ಡ ಬಸವರಾಜ್ ಒಂಟೆ ಜನರಾಜ್ ಪಾಟೀಲ ಬಸವರಾಜ ಪಾಟೀಲ್ದಯಾನಂದ ಕತ್ತೆ ಹನುಮಂತ ನವ ಕಂಡೆ ಸಂತೋಷ ಗೋದಾಪುರಗೆ ಶಿವಕಾಂತ ಕಂಡೆ ಹಾಗೂ ನಾಗನಾಥ ಶಂಕು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ದತ್ತಾತ್ರೇಯ ಪೂಜಾರಿ ನಾಗರಾಜ ರಾಗ ಗುರುನಾಥ್ ಬಾವುಗೆ ತುಕಾರಾಂ ಕೋಳಿ ಮಹೇಶ್ ಬೀ ಜಲವಾಡೆ ಶಿವಕುಮಾರ ಅಂಬಲಗಿ ಹಾಗೂ ಗ್ರಾಮದ ಸಹಸ್ರಾರು ಶರಣೆ ಮಾತೆಯರು ನವ ಯುವಕರು ಭವ್ಯವಾದ ಮೆರವಣಿಗೆಯಲ್ಲಿ ಪಾಲ್ಗೊಂಡರು. 10.30 ಗಂಟೆಗೆ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.
