ಪಟ್ಟಣದ ಚಂದಾಪೂರ ಶ್ವೇತಾ ಹೇಲ್ತಕೇರ್ ಸೆಂಟರ್ ಉದ್ಘಾಟಿಸಿದ ಪ್ರಗತಿ ಪರ ರೈತ ಮುಖಂಡ ಬಾಬುರಾವ ಪಾಟೀಲ
ಪಟ್ಟಣದ ಚಂದಾಪೂರ ಶ್ವೇತಾ ಹೇಲ್ತಕೇರ್ ಸೆಂಟರ್ ಉದ್ಘಾಟಿಸಿದ ಪ್ರಗತಿ ಪರ ರೈತ ಮುಖಂಡ ಬಾಬುರಾವ ಪಾಟೀಲ
ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣ ಶಿಬಿರ ಆಯೋಜನೆ
ಚಿಂಚೋಳಿ : ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಪ್ರಯುಕ್ತ ಚಂದಾಪೂರದ ಶ್ವೇತಾ ಹೇಲ್ತಕೇರ್ ಸೆಂಟರ್ ರವರ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶ್ವೇತಾ ಹೇಲ್ತಕೇರ್ ಸೆಂಟರ್ ಆರೋಗ್ಯ ಶಿಬಿರ ಉದ್ಘಾಟಿಸಿ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ. ಗಫಾರ್ ಮಾತನಾಡಿ, ಮನುಷ್ಯನ ದೇಹ ಶಾರೀರಕವಾಗಿ ಮತ್ತು ದೈಹಿಕವಾಗಿ ಸದೃಢ ಆರೋಗ್ಯ ಪುರಿತವಾಗಿರಲು ಸರಿಯಾದ ಸಮಯದಲ್ಲಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬೇಕು. ಮಧುಮೇಹ ಮತ್ತು ರಕ್ತ ಒತ್ತಡಗಳಂತಹ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಪ್ರತಿ 3 ತಿಂಗಳಿಗೊಮ್ಮೆ ಬಿಪಿ, ಶೂಗರ್ ಪರೀಕ್ಷಿಸಿಕೊಳ್ಳಬೇಕೆನ್ನುವುದು ವೈದ್ಯಕೀಯ ನಿಯಮವಾಗಿದೆ. ಹೀಗೆ ಮಾಡಿಕೊಳ್ಳುವುದರಿಂದ ಬರುವ ದೊಡ್ಡ ಕಾಯಿಲೆಗಳ ಬಗ್ಗೆ ಮುನ್ನಚ್ಚರಿಕೆ ವಹಿಸಬಹುದು ಎಂದು ಹೇಳಿದರು. ಪ್ರಗತಿ ಪರ ರೈತ ಮುಖಂಡ ಬಾಬುರಾವ ಪಾಟೀಲ ಅವರು ಮಾತನಾಡಿ, ಚಿಂಚೋಳಿ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಆರೋಗ್ಯ ಸೇವೆ ಪಡೆಯಲು ದೂರದ ನಗರಗಳಿಗೆ ತೆರಳಬೇಕಾಗುತ್ತಿತ್ತು. ಆದರೆ ಈಗ ಅಂತಹ ಪರಿಸ್ಥಿಗಳು ಎದುರಾಗದಂತೆ ಸ್ಥಳೀಯ ನುರಿತ ಅನುಭವಿ ವೈದ್ಯರು ಜನರಿಗೆ ಹತ್ತಿರವಾಗಿ ಆರೋಗ್ಯ ಸೇವೆ ನೀಡಲು ಹೇಲ್ತ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಅವರ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಜನರು ವೈದ್ಯರನ್ನು ದೇವರಂತೆ ಕಂಡು ಅವರೊಂದಿಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳಬೇಕು ಎಂದರು.
ಶಹಾಪೂರ ಮಕ್ಕಳ ತಜ್ಞೆ ಡಾ. ಸಂತೋಷ ಪಾಟೀಲ್, ಡಾ. ವೀರೇಂದ್ರ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಆನಂದ ಟೈಗರ್, ವೀರಶೈವ ಲಿಂಗಾಯತ್ ಮಹಾಸಭಾದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ ಮುಖಂಡ ಗೌತಮ್ ಬೋಮ್ಮನಳ್ಳಿ,ಡಾ. ಮಲ್ಲಿಕಾರ್ಜುನ ಪಾಲಾಮೂರ್, ಸಂಘಟಕ ಮಾರುತಿ ಗಂಜಗಿರಿ, ಲಕ್ಷ್ಮಣ ಆವಂಟಿ, ಶಾಮರಾವ ಕೊರವಿ, ಶಂಕರಜೀ ಹಿಪ್ಪರಗಿ, ಜಗನ್ನಾಥ ಕಟ್ಟಿ, ಸತೀಶ ದೇಗಲ್ಮಡಿ, ಎಂ.ಡಿ. ಮನೋಹರ್, ನಾಗೇಶ ಗುಣಾಜಿ, ವಕೀಲ ಶ್ರೀಮಂತ ಕಟ್ಟಿಮನಿ, ಸುಭಾಷಚಂದ್ರ ಯಂಪಳ್ಳಿ ಅವರು ಉಪಸ್ಥಿತರಿದರು.
