ವಿದ್ಯಾನಗರದಲ್ಲಿ ಬಸವ ಜಯಂತಿ ಆಚರಣೆ
ವಿದ್ಯಾನಗರದಲ್ಲಿ ಬಸವ ಜಯಂತಿ ಆಚರಣೆ
ವಿದ್ಯಾನಗರ: ನಗರದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನ ಹಾಗೂ ಅಕ್ಕ ಮಹಾದೇವಿ ಮಹಿಳಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಅಂಡಗಿ ಪ್ರತಿಷ್ಠಾನದ ಕಾರ್ಯದರ್ಶಿ ರೇಖಾ ಅಂಡಗಿ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮಹಿಳಾ ಟ್ರಸ್ಟ್ ಅಧ್ಯಕ್ಷೆ ರತ್ನಮ್ಮ ನಿಂಬೂರ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಟಕಲ್ ಹಾಗೂ ಕಾರ್ಯದರ್ಶಿ ರಾಜೇಶ್ವರಿ ಕಂಠಿ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಧು ಹಿಂದೊಡ್ಡಿ, ತಾರಾ ಪಾಟೀಲ, ಶ್ರೀದೇವಿ ತಂಬಾಕೆ, ಸುಮಂಗಲಾ ನಾಗಶೆಟ್ಟಿ, ಲಲಿತಾ ಸಂಗೋಳಗಿ, ಉಮಾದೇವಿ ಹೆಬ್ಬಾಳ, ನಾಗರತ್ನ ಮುಗಳಿ, ವಿಜಯಶ್ರೀ ಹೆಬ್ಬಾಳ, ಪ್ರೀಯಾ ನಾಗಶೆಟ್ಟಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
