ಅನಧಿಕೃತ ಅಂಗಡಿಗಳ ತೆರವಿಗೆ ಒತ್ತಾಯಿಸಿ ಪ್ರತಿಭಟನೆ
ಅನಧಿಕೃತ ಅಂಗಡಿಗಳ ತೆರವಿಗೆ ಒತ್ತಾಯಿಸಿ ಪ್ರತಿಭಟನೆ
ನಾಗರಾಜ್ ದಂಡಾವತಿ ವರದಿ ಶಹಾಬಾದ:ನಗರ ಸಭೆಯ ಕಾರ್ಯಾಲಯದ ಮುಂಭಾಗದಲ್ಲಿ ಕಟ್ಟಲಾಗಿರುವ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಗೋಡೆ ಒಳಗಡೆ ಅನಧಿಕೃತವಾಗಿ ಇಟ್ಟ ಡಬ್ಬ ಅಂಗಡಿ ಶೀಘ್ರವಾಗಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ಶಹಾಬಾದ ಮಂಡಲ ಭಾರತೀಯ ಜನತಾ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಅರುಣ ಪಟ್ಟಣಕರ ಮಾತನಾಡಿ, ಸರಿಯಾಗಿ ಒಂದು ತಿಂಗಳ ಹಿಂದೆ ಇಂದಿರಾ ಕ್ಯಾಂಟೀನ್ ಕಂಪೌಂಡ್ ಒಳಗಡೆ ಅನಧಿಕೃತವಾಗಿ ಡಬ್ಬ ಅಂಗಡಿ ಇಡಲಾಗಿದ್ದು ಅದನ್ನು ತೆರವುಗೊಳಿಸಬೇಕೆಂದು ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿತ್ತು ಆದರೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಎಂಸಿ 176ನೇ ಕಲಂ ಸೇಕ್ಸನ್ 436ಎ ಪ್ರಕಾರ ಅನಧಿಕೃತವಾದಗಳನ್ನು ತೆರೆವು ಗೊಳಿಸಬಹುದು, ಹಾಗೆ ಐಪಿಸಿ ಸೇಕನ್ 441 ಮತ್ತು 447 ರ ಪ್ರಕಾರ ಪೊಲೀಸ ರ ಮುಂಖಾಂತರ ಒತ್ತುವರಿ ತೆರೆವುಗೋಳಿಸಬೇಕು ಎಂದರು.
ನಗರೋದ್ಧಾನದ ನಾಲ್ಕನೇ ಹಂತದ ಕಾಮಗಾರಿಗಳು ಅಪೂರ್ಣಗೊಂಡಿದ್ದು ಶೀಘ್ರ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. ಚಂದ್ರಕಾಂತ ಗೊಬ್ಬರಕರ
ವತಿಯಿಂದ ಸರಬರಾಜು ಮಾತನಾಡಿ, ನಗರಸಭೆ ಮಾಡುತ್ತಿರುವ 24ಥ7 ಕುಡಿಯುವ ನೀರು ಅಶುದ್ಧವಾಗಿದ್ದು ಕುಡಿಯಲಿಕ್ಕೆ ಯೋಗ್ಯವಾಗಿಲ್ಲ ಎಂದು ಆರೋಪಿಸಿದರು. ಮತ್ತು ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಕರಕ್ಕೆ ಹೆಚ್ಚು ಬಡ್ಡಿ ಹಾಕಿದ್ದು, ಬಡ್ಡಿ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಕನಕಪ್ಪ ದಂಡಗುಳ್ಳರಮತ್ತು ಜ್ಯೋತಿಶರ್ಮ ಮಾತನಾಡಿದರು. ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳುಗೋಳ್ಳರ ಮನವಿ ಪತ್ರ ಓದಿ ತಾಲ್ಲೂಕ ತಹಸೀಲ್ದಾರ ನೀಲಪ್ರಭಾ ಬಬಲಾದ ಅವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂಬರುವಂತ ದಿನಗಳಲ್ಲಿ ರಸ್ತಾರೋಕೋ ಬೀಗ್ ಮುದ್ರೆ ಹಾಕುವಂತಹ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗಿದೆ ಎಂದು ಎಚ್ಚರಿಸಿದ್ದರು. ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ಶಿವಕುಮಾರ ಇಂಗಿನಶೆಟ್ಟಿ,ಅನಿಲ ಬೋರಗಾಂಕರ, ಭೀಮರಾವ ಸಾಳುಂಕೆ, ಡಾ. ಅಶೋಕ ಜಿಂಗಾಡೆ, ದೇವದಾಸ ಜಾದವ, ದಿನೇಶ್ ಗೌಳಿ, ಸಿದ್ದರಾಮ ಕುಶಾಳೆ, ರಾಮು ಕುಶಾಲೆ, ಬಸವರಾಜ ಬಿರಾದಾರ, ನವನಾಥ ಕುಶಾಲೆ,ಡಿಸಿ ಹೊಸಮನಿ, ಸಂತೋಷ ಪಾಟೀಲ, ಅಮರ ಕೋರೆ, ಶಿವಕುಮಾರ ತಳವಾರ, ಬಸವರಾಜ್ ಹಳ್ಳಿ ಹಡಪದ, ಮಂಗಲ್ ನಾಯಕ ಮತ್ತು ಪದ್ಮಾ ಕಟಗೆ, ಶಶಿಕಲಾ ಸಜ್ಜನ ಉಪಸ್ಥಿತರಿದ್ದರು.
