ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹೊತ್ತಿದ್ದ ಹರಕೆ ಪೂರೈಸಿದ ಅಭಿಮಾನಿ

ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹೊತ್ತಿದ್ದ ಹರಕೆ ಪೂರೈಸಿದ ಅಭಿಮಾನಿ

ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹೊತ್ತಿದ್ದ ಹರಕೆ ಪೂರೈಸಿದ ಅಭಿಮಾನಿ

15 ಕಿ.ಮಿ ದೀರ್ಘ ದಂಡ ನಮಸ್ಕಾರ ಹಾಕಿದ ಸಚಿವ ಶರಣಪ್ರಕಾಶ ಪಾಟೀಲ ಅಭಿಮಾನಿ ಪ್ರಶಾಂತ್

ಸೇಡಂ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಹರಕೆ ಹೊತ್ತಿದ್ದ ಅಭಿಮಾನಿ ಪ್ರಶಾಂತ್ ಉಪ್ಪಿನ್ ದೀರ್ಘ ದಂಡ ನಮಸ್ಕಾರ ಪೂರೈಸಿ ತನ್ನ ಅಭಿಮಾನಿ ಮೆರೆದಿದ್ದಾರೆ.

ಸೇಡಂ ತಾಲೂಕಿನ ರುದ್ನೂರು ಗ್ರಾಮದ ಕಾಂಗ್ರೆಸ್ ಪಕ್ಷದ ಯುವಕ ಪ್ರಕಾಶ್ ಉಪ್ಪಿನ

ರುದ್ನೂರು ಗ್ರಾಮದಿಂದ ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದವರೆಗೆ 15 ಕಿ.ಮೀ ಧೀರ್ಘ ದಂಡ ನಮಸ್ಕಾರ ಮಾಡುವ ಮೂಲಕ ಹರಕೆ ಪೂರೈಸಿದ್ದಾರೆ.

ರುದ್ನೂರು ಗ್ರಾಮದಿಂದ ಬರೊಬ್ಬರಿ 15 ಕಿಮೀ ದೂರ ಧೀರ್ಘ ದಂಡ ನಮಸ್ಕಾರ ಹಾಕಿ ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನಕ್ಕೆ ತಲುಪಿ ಪೂಜೆ ಸಲ್ಲಿಸಲಾಯಿತು. ಪ್ರಶಾಂತ ಉಪ್ಪಿನ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಕಟ್ಟಾ ಅಭಿಮಾನಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೇಡಂ ಮತಕ್ಷೇತ್ರದಿಂದ ಡಾ.ಶರಣಪ್ರಕಾಶ ಪಾಟೀಲ ಅವರು ಬಹುಮತಗಳಿಂದ ಶಾಸಕರಾಗಿ ಆಯ್ಕೆಯಾಗಬೇಕೆಂದು ಹರಕೆ ಕಟ್ಟಲಾಗಿತ್ತು, ಹರಕೆಯ ಪೂರೈಯಿಸಲು 15 ಕಿ.ಮೀ ಧೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

ಸೇಡಂ ಕ್ಷೇತ್ರದ ಚಿತ್ರಣ ಬದಲಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಅನೇಕರು ಪ್ರಾರ್ಥಿಸಿದ್ದರು, ಅಂತಹ ಅಭಿಮಾನಿಗಳಲ್ಲಿ ನಾನು ಒಬ್ಬ, ದೀರ್ಘ ದಂಡ ನಮಸ್ಕಾರ ಹಾಕುವ ಮುಖಾಂತರ ಸಚಿವರ ಗೆಲುವಿನ ಹರಕೆಯನ್ನು ಈಡೇರಿಸಿರುವೆ. ದೇವರು ಡಾ.ಶರಣಪ್ರಕಾಶ ಪಾಟೀಲ ಅವರಿಗೆ ದೀರ್ಘಾವಧಿ ಆಡಳಿತ ನೀಡುವ ಆರೋಗ್ಯ ಹಾಗೂ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ‌‌.

  • ಪ್ರಶಾಂತ್ ಉಪ್ಪಿನ್ , ಧೀರ್ಘ ದಂಡ ನಮಸ್ಕಾರ ಸಲ್ಲಿಸಿದ ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿ.