ನರೇಗಲ್ಲ ಪಟ್ಟಣದಲ್ಲಿ ಭಾರತಿಯ ಜನಗಣತಿ–2027 ಸಮೀಕ್ಷೆಗಾಗಿ ತರಬೇತಿ ಆರಂಭ

ನರೇಗಲ್ಲ ಪಟ್ಟಣದಲ್ಲಿ ಭಾರತಿಯ ಜನಗಣತಿ–2027 ಸಮೀಕ್ಷೆಗಾಗಿ ತರಬೇತಿ ಆರಂಭ

ನರೇಗಲ್ಲ ಪಟ್ಟಣದಲ್ಲಿ ಭಾರತಿಯ ಜನಗಣತಿ–2027 ಸಮೀಕ್ಷೆಗಾಗಿ ತರಬೇತಿ ಆರಂಭ

ನರೇಗಲ್ಲ: ನರೇಗಲ್ಲ ಪಟ್ಟಣದಲ್ಲಿ ಭಾರತಿಯ ಜನಗಣತಿ–2027 ಸಮೀಕ್ಷೆ ಕಾರ್ಯಕ್ಕೆ ನೇಮಕಗೊಂಡ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 06, 07 ಹಾಗೂ 08 ಏಪ್ರಿಲ್ 2026 ರವರೆಗೆ ಪ್ರತಿದಿನ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಈ ತರಬೇತಿ ನಡೆಯಲಿದೆ.

ದಿನಾಂಕ 06-04-2026 ರ ಸೋಮವಾರ ನಡೆದ ಮೊದಲ ದಿನದ ತರಬೇತಿ ಕಾರ್ಯಕ್ರಮಕ್ಕೆ ನರೇಗಲ್ಲ ಪಟ್ಟಣ ಪಂಚಾಯತದ ಮುಖ್ಯಾಧಿಕಾರಿ ಹಾಗೂ ಭಾರತಿಯ ಜನಗಣತಿ–2027ರ ಚಾರ್ಜ್ ಅಧಿಕಾರಿಯಾದ ಶ್ರೀ ಪಚ್ಚಿ ಮಲ್ಲೆಶ ಅವರು ಅಧ್ಯಕ್ಷತೆ ವಹಿಸಿದ್ದರು. ಗದಗ ಜಿಲ್ಲಾ ಭಾರತಿಯ ಜನಗಣತಿ ತರಬೇತಿದಾರರಾದ ಶ್ರೀ ಬಸವರಾಜ ಗಿರಿತಮ್ಮಣ್ಣವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಆರ್.ಎಸ್. ನರೇಗಲ್ಲ, ಶ್ರೀ ವಿ.ಎ. ಕುಂಬಾರ, ಶ್ರೀ ಶಿವಾನಂದ ಎಫ್. ಗೋಗೆರಿ ಹಾಗೂ ಬಾಲು ಕಳಕಣ್ಣವರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಣತಿದಾರರು, ಮೇಲ್ವಿಚಾರಕರು ಹಾಗೂ ಪಟ್ಟಣ ಪಂಚಾಯತ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀ ಎಂ.ಎಚ್. ಸೀತಿಮನಿ, ಶ್ರೀ ರಮೇಶ ವೈ. ಹಲಗಿಯವರ, ಶ್ರೀ ಎ.ಎಸ್. ಮೇಣಸಗಿ, ಕುಮಾರಿ ನಾಜೀಮಾ ಬೇಲೆರಿ, ಶ್ರೀ ಶಂಕ್ರಪ್ಪ ದೊಡ್ಡಣ್ಣವರ, ಆರೀಫಬೇಗ ಮಿರ್ಜಾ, ನೀಲಪ್ಪ ಚಳ್ಳಮರದ, ಉದಯ ಮುದೇನಗುಡಿ, ಮಣಿಕಂಠ ಹೂಗಾರ, ಶ್ರೀಮತಿ ಕಾವ್ಯಾ ಅರವಟಗಿಮಠ, ಕುಮಾರಿ ಪೂರ್ಣಿಮಾ ಹೊಸಮನಿ, ಶ್ರೀಮತಿ ರೇಣುಕಾ ಕಳಕಣ್ಣವರ ಹಾಗೂ ಚಿದಂಬರ ಹುಣಶಿಮರದ ಅವರು ತರಬೇತಿಗೆ ಹಾಜರಿದ್ದರು.

ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ.