ರಾಮ ಜಯಂತಿ ಅಂಗವಾಗಿ ಉದ್ಯಮಿ ಪ್ರಕಾಶ ಯೆನಕಂಚಿ ಸನ್ಮಾನ
ರಾಮ ಜಯಂತಿ ಅಂಗವಾಗಿ ಉದ್ಯಮಿ ಪ್ರಕಾಶ ಯೆನಕಂಚಿ ಸನ್ಮಾನ
ಕಲಬುರಗಿ: ಶ್ರೀ ರಾಮ ಜಯಂತಿ ಪ್ರಯುಕ್ತ ದಾಸಿಮಯ್ಯ ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಲಾದ ರಾಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಹಾಗೂ ಕಲಬುರಗಿಯಲ್ಲಿ ರಾಜ್ಯವೇ ಅನುಸರಿಸುವಂತೆ 1047ನೇ ಶ್ರೀ ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಪ್ರಕಾಶ ಯೆನಕಂಚಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ರಾಮ ಜಯಂತಿ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಅನಾದಿ ಚಂದ್ರಶೇಖರ್ ಅವರ ಉಪಸ್ಥಿತಿಯಲ್ಲಿ ಹೈಕೋರ್ಟ್ ವಕೀಲರಾದ ಶಿವಲಿಂಗಪ್ಪ ಅಷ್ಟಗಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸೇವಾ ಸಮಿತಿಯ ಖಜಾಂಚಿ ರಾಜಗೋಪಾಲ ಭಂಡಾರಿ ಅವರು ಪ್ರಕಾಶ ಯೆನಕಂಚಿ ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ ಯೆನಕಂಚಿ, “ನಿಮ್ಮ ಸಮಿತಿಯ ಸೇವಾ ಚಟುವಟಿಕೆಗಳು ನನಗೆ ಸದಾ ಪ್ರೇರಣೆಯಾಗಿವೆ. ಕಳೆದ ಮೂರು ವರ್ಷಗಳಿಂದ ಸಮಿತಿಯ ಕ್ರಿಯಾಶೀಲ ಕಾರ್ಯಗಳಿಗೆ ನಾನು ಮಾರು ಹೋಗಿದ್ದೇನೆ. ಅದರಿಂದಲೇ ಇಂದು ಈ ಪವಿತ್ರ ದಿನದಂದು ಪೂಜೆ ಸಲ್ಲಿಸುವ ಅವಕಾಶ ದೊರೆತಿದೆ. ಶಬರಿಯಂತೆ ಕಾಯುತ್ತಿದ್ದೆ. ಜಿಲ್ಲಾ ತೊಗಟವೀರ ಸಂಘದ ಅಧ್ಯಕ್ಷ ಶ್ರೀನಿವಾಸ್ ಬಲಪುರ ಅವರು ನೀಡಿದ ಆಹ್ವಾನಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಚಾಲಕರಾದ ನ್ಯಾಯವಾದಿ ಜೆನವೇರಿ ವಿನೋದಕುಮಾರ್ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಶ್ರೀನಿವಾಸ್ ಬಲಪುರ ವಂದಿಸಿದರು.
ಈ ಸಂದರ್ಭದಲ್ಲಿ ರಾಜು ಕೊಷ್ಠಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
