ರೇಶ್ಮಿ ವಿದ್ಯಾ ಭವನದಲ್ಲಿ ಗುರುವಂದನಾ ಹಾಗೂ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

ರೇಶ್ಮಿ ವಿದ್ಯಾ ಭವನದಲ್ಲಿ ಗುರುವಂದನಾ ಹಾಗೂ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

ರೇಶ್ಮಿ ವಿದ್ಯಾ ಭವನದಲ್ಲಿ ಗುರುವಂದನಾ ಹಾಗೂ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

ಕಲಬುರಗಿ: ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಡಿಎಡ್ ಕಾಲೇಜಿನ 2009–10ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನೆರವೇರಿತು.

ರೇಶ್ಮಿ ಎಜ್ಯುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಭಾರತಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಗಳನ್ನು ಕಲ್ಪಿಸುತ್ತಿದೆ. ಲಿಂ. ನಾಗೇಂದ್ರ ರೇಶ್ಮಿ ಅವರು ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರ ದೂರದೃಷ್ಟಿ ಹಾಗೂ ಸೇವಾಭಾವದಿಂದಲೇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.

 ಡಿಎಡ್ ಕಾಲೇಜಿನ ಮಾಜಿ ಪ್ರಾಚಾರ್ಯರಾದ , ಸಿ.ಎಸ್. ಮಾಲಿಪಾಟೀಲ ಮಾತನಾಡಿ, ಈ ಸಂಸ್ಥೆ ವಿದ್ಯಾಭ್ಯಾಸದ ಜೊತೆಗೆ ಜ್ಞಾನ, ವಿಜ್ಞಾನ, ಕೌಶಲ್ಯ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ನೀವು ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಕಾಲೇಜು ಹಾಗೂ ಗುರುಗಳ ಮೇಲಿನ ಪ್ರೀತಿ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು. 

ಯಾವುದೇ ವೃತ್ತಿ ಮಾಡುತ್ತಿದ್ದರೂ ಮೊದಲು ಅದನ್ನು ಇಷ್ಟಪಡಬೇಕು, ಆಗ ಕಷ್ಟವೆಂಬುದು ಕಾಣುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮಹಿಳಾ ಬಿಎಡ್ ಕಾಲೇಜಿನ ಪ್ರಾಚಾರ್ಯರಾದ ಡಾ. ಗೀತಾ ಆರ್ , ಮಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾನ್ಫರೆನ್ಸ್‌ಗಳಲ್ಲಿ ಭಾಗವಹಿಸಿ ಹೆಸರು ತಂದಿದ್ದಾರೆ. ಇಂತಹ ಗುರುವಂದನಾ ಹಾಗೂ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಂಸ್ಥೆ ಮತ್ತು ಗುರುಗಳ ಮೇಲಿನ ಪ್ರೀತಿ ಹಾಗೂ ಗೌರವದ ಸಂಕೇತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಉಪನ್ಯಾಸಕರಾದ ನೀಲಾ ಪಾಟೀಲ, ಸುರೇಖಾ ಪಾಟೀಲ, ಸಂಗೀತ, ಮಂಜುಳಾ, ಶೋಭಾ, ಅನುರಾಧಾ ಹಾಗೂ ಶರಣಗೌಡ ಪಾಟೀಲ, ಅಮರಪ್ಪ ತಾಳಿಕೋಟಿ, ಕೇಶವರಾಜ, ಶ್ರೀಶೈಲ ಹಳ್ಳೆ ಉಪಸ್ಥಿತರಿದ್ದರು.

ರೇಶ್ಮಿ ಸಂಸ್ಥೆಯ ಕಾರ್ಯದರ್ಶಿಗಳಾದ ಶರದ್ ಎನ್. ರೇಶ್ಮಿ ಹಾಗೂ ಶಿಶಿರ್ ಎನ್. ರೇಶ್ಮಿ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು. ವಿದ್ಯಾರ್ಥಿಗಳಾದ ಕಲ್ಪನಾ, ಶಿವರಾಜ, ನಾಗರಾಜ, ಅನಿಲ, ವಿರೇಶ್ ಹಾಗೂ ಶಿವಲಿಂಗಪ್ಪ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಎಲ್ಲಾ ಗುರುಗಳಿಗೆ ವಿದ್ಯಾರ್ಥಿಗಳು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

 ಡಿಎಡ್ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.